| ನವೀನ್ ಬಿಲ್ಗುಣಿ ಶಿವಮೊಗ್ಗ
ರಾಜ್ಯದಲ್ಲಿ ಅಫೀಮು ಬೆಳೆಯಲು ಅನುಮತಿ ಸಿಕ್ಕಿದೆಯಾ? ರೈತರು ನಾಟಿ ಗಾಂಜಾವನ್ನೂ ಬೆಳೆಯಬಹುದಾ? ನಿಷೇಧಿತ ನೀಲಗಿರಿ ಕೂಡ ಬೆಳೆಯುವುದಕ್ಕೆ ಅವಕಾಶವಿದೆಯೇ?…
ಕೃಷಿ ಇಲಾಖೆಯ ಎಡವಟ್ಟಿನಿಂದ ಇಂತಹದೊಂದು ಪ್ರಶ್ನೆ ರೈತರನ್ನು ಕಾಡುತ್ತಿದೆ. ಪ್ರಸಕ್ತ ವರ್ಷ ಅನಾವೃಷ್ಟಿಯ ಬಳಿಕ ಅತಿವೃಷ್ಟಿ ಸಂಕಷ್ಟ ರಾಜ್ಯಾದ್ಯಂತ ಎದುರಾಗಿದೆ. ಮುಂಗಾರು ಋತುವಿಗೆ ರೈತರೇ ನೇರವಾಗಿ ಮೊಬೈಲ್​ಗಳ ಮೂಲಕ ಬೆಳೆ ಸಮೀಕ್ಷೆ ಮಾಡಿಕೊಳ್ಳಬಹುದು. ಆದರೆ ಬೆಳೆ ಕಾಲಂನಲ್ಲಿ ನಿಷೇಧಿತ ಬೆಳೆಗಳ ಹೆಸರೂ ಸೇರ್ಪಡೆಗೊಂಡಿರುವುದು ರೈತರಲ್ಲಿ ಅಚ್ಚರಿ ಮೂಡಿಸಿದೆ.
2024-25ನೇ ಸಾಲಿನ ಮುಂಗಾರು ಋತುವಿನ ಬೆಳೆ ಸಮೀಕ್ಷೆಗೆ ಕೃಷಿ ಇಲಾಖೆ ಮೊಬೈಲ್ ಆಪ್ ಬಿಡುಗಡೆ ಮಾಡಿದೆ. ಅದರಲ್ಲಿ ಆಧಾರ್ ಇ-ಕೆವೈಸಿ ಬಳಿಕ ಮಳೆಯಾಶ್ರಿತ ಅಥವಾ ನೀರಾವರಿ ವಿಧ ಆಯ್ಕೆಯನ್ನೂ ಕೇಳುತ್ತದೆ. ವಾರ್ಷಿಕ ಬೆಳೆ ಕಾಲಂನಲ್ಲಿ ನೂರಾರು ಬೆಳೆಗಳ ಹೆಸರನ್ನೂ ಸೇರ್ಪಡೆ ಮಾಡಿದೆ. ಆದರೆ ಅವುಗಳ ನಡುವೆ ಅಫೀಮು, ನಾಟಿ ಗಾಂಜಾ, ನೀಲಗಿರಿಯನ್ನೂ ಸೇರಿಸಲಾಗಿದೆ. ಸರ್ಕಾರ ಸೃಜಿಸಿದ ಆಪ್​ನಲ್ಲಿ ಇವು ಸೇರ್ಪಡೆಗೊಂಡಿದ್ದು ಹೇಗೆ ಎಂಬುದು ಪ್ರಶ್ನೆಯಾಗಿದೆ.
ಬೆಳೆ ಸಮೀಕ್ಷೆ ಉದ್ದೇಶ:‘ನನ್ನ ಬೆಳೆ ನನ್ನ ಹಕ್ಕು’ ಇದು ರೈತರೇ ತಾನು ಬೆಳೆದ ಬೆಳೆಯ ಸಮೀಕ್ಷೆ ಮಾಡಿ ವಿವರವನ್ನು ಸರ್ಕಾರಕ್ಕೆ ನೀಡಲು ಬೆಳೆ ಸಮೀಕ್ಷೆ ಮೊಬೈಲ್ ಆಪ್ ಅಭಿವೃದ್ಧಿಪಡಿಸಲಾಗಿದೆ.
ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳಿಂದ ಪಹಣಿ(ಆರ್​ಟಿಸಿ)ಯಲ್ಲಿ ಯಾವ ಬೆಳೆ ದಾಖಲಾಗಿದೆ ಎನ್ನುವುದರ ಆಧಾರದ ಮೇಲೆ ರೈತರಿಗೆ ಸೌಲಭ್ಯ ನೀಡಲಾಗುತ್ತಿತ್ತು. ಆದರೆ ಸಕಾಲಕ್ಕೆ ಪಹಣಿಯಲ್ಲಿ ಬೆಳೆ ನಮೂದಾಗದೆ ಸರ್ಕಾರಿ ಸೌಲಭ್ಯ ಪಡೆಯುವಲ್ಲಿ ರೈತರು ವಂಚಿತರಾಗುತ್ತಿದ್ದರು. ಅದನ್ನು ತಪ್ಪಿಸಲು ಆಪ್ ಸಿದ್ಧಪಡಿಸಲಾಗಿದೆ. ಅಲ್ಲದೆ ಎನ್​ಡಿಆರ್​ಎಫ್, ಎಸ್​ಡಿಆರ್​ಎಫ್ ಯೋಜನೆಗಳಡಿ ಇನ್​ಪುಟ್ ಸಬ್ಸಿಡಿ ಯೋಜನೆಯಲ್ಲಿ ಫಲಾನುಭವಿಗಳ ಪಟ್ಟಿ ತಯಾರಿಸುವುದು, ಬ್ಯಾಂಕ್​ಗಳಲ್ಲಿ ರೈತರಿಗೆ ಬೆಳೆ ಸಮೀಕ್ಷೆ ಆಧಾರಿತ ದತ್ತಾಂಶ ಪರಿಗಣಿಸಿ ಬೆಳೆ ಸಾಲ ಮಂಜೂರಿಗೆ ಸಹಾಯಕವಾಗುತ್ತದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.
ಅಫೀಮು-196, ನಾಟಿಗಾಂಜಾ-203, ನೀಲಗಿರಿ-250 ಸೇರಿ ರಕ್ತಚಂದನ-310, ಸೇರಿ ನೂರಕ್ಕೂ ಅಧಿಕ ಬೆಳೆಗಳ ಮಾಹಿತಿಯನ್ನು ಬೆಳೆ ಸಮೀಕ್ಷೆ ಆಪ್​ನಲ್ಲಿ ಸೇರ್ಪಡೆ ಮಾಡಲಾಗಿದೆ.
ಎನ್​ಐಸಿ(ನ್ಯಾಷನಲ್ ಇನ್ಪಾರ್ವೆಟಿಕ್ ಸೆಂಟರ್) ಬೆಳೆ ಸಮೀಕ್ಷೆ ಸಾಫ್ಟ್​ವೇರ್ ಅಭಿವೃದ್ಧಿಪಡಿಸಿದೆ. ಅದನ್ನು ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಗಳು ನೋಡಿಕೊಳ್ಳುತ್ತಿವೆ. ರೈತರ ಬೆಳೆ ಸಮೀಕ್ಷೆ ಆಪ್​ನಲ್ಲಿ ನಿಷೇಧಿತ ಬೆಳೆಗಳ ಮಾಹಿತಿ ಇರುವುದು ಗಮನಕ್ಕೆ ಬಂದಿಲ್ಲ. ಈ ಸಂಬಂಧ ಮೇಲಧಿಕಾರಿ ಗಮನಕ್ಕೆ ತರಲಾಗುವುದು.
| ಹೆಸರು ಹೇಳಲಿಚ್ಛಿಸದ ಕೃಷಿ ಅಧಿಕಾರಿ
ಸಿದ್ದರಾಮಯ್ಯ ಭೇಟಿ ಮಾಡಿ ಧೈರ್ಯ ಹೇಳಿದ್ದೇನೆ: ಸಿಎಂ ಇಬ್ರಾಹಿಂ‌

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:18 − one =
Remember me
