
ಬೆಂಗಳೂರು:ಅಗತ್ಯವಿರುವ ಕಡೆಯಲ್ಲಿ ತಾಲ್ಲೂಕು ಪಂಚಾಯತ್ ಕ್ಷೇತ್ರ ಮರು ವಿಂಗಡನೆ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಅವಧಿಯನ್ನು 60 ತಿಂಗಳಿಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ.ಸಿಎಂ ಗೃಹ ಕಚೇರಿಯಲ್ಲಿ ನಡೆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐ.ಟಿ. ಬಿಟಿ., ಇಲಾಖೆಗಳ ಸಭೆಯಲ್ಲಿ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗಿದೆ.ಶಿವಮೊಗ್ಗ ಜಿಲ್ಲೆಯನ್ನು ಕೊಡಗು ಚಿಕ್ಕಮಗಳೂರು (ಭಾಗಶ:) ಉತ್ತರ ಕನ್ನಡ ರೀತಿಯಲ್ಲಿ ಪರಿಗಣಿಸಿ 21 ಸಾವಿರ ಜನಸಂಖ್ಯೆಗೆ ಒಬ್ಬ ಸದಸ್ಯರಂತೆ ಸದಸ್ಯರ ಸ್ಥಾನಗಳನ್ನು ಮರು ನಿಗದಿಪಡಿಸುವ ತಿದ್ದುಪಡಿಗೆ ಮುಖ್ಯಮಂತ್ರಿಗಳು ಅನುಮತಿಸಿದರು.ಕ್ಷೇತ್ರ ಮರುವಿಂಗಡನೆಗೆ ಸಂಬಂಧಿಸಿದಂತೆ ಸಲ್ಲಿಸಿದ ಆರು ಪ್ರಸ್ತಾವನೆಗಳಲ್ಲಿ ಒಂದಕ್ಕೆ ಮುಖ್ಯ ಮಂತ್ರಿಗಳು ಅನುಮೋದನೆ ನೀಡಿದ್ದು, ತಿದ್ದುಪಡಿ ಪ್ರಕ್ರಿಯೆ ಕೈಗೊಳ್ಳಲು ಕಾನೂನು ಇಲಾಖೆಗೆ ಇದನ್ನು ವಹಿಸಲು ನಿರ್ಧರಿಸಲಾಗಿದೆ.
ಸಿಎಲ್‌ಪಿ ಸಭೆಪಂಚಾಯತ್ ರಾಜ್ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಅವಧಿಯನ್ನು 60 ತಿಂಗಳಿಗೆ ವಿಸ್ತರಿಸುವ ಬಗ್ಗೆ ತಿದ್ದುಪಡಿ ತರಲು ಪ್ರಸ್ತಾವನೆಗೆ ಸಿಎಲ್ಪಿ ಸಭೆಯಲ್ಲಿ ಚರ್ಚೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಸಿಎಂ ತಾತ್ವಿಕ ಒಪ್ಪಿಗೆಕಾನೂನು ಚೌಕಟ್ಟಿನಲ್ಲಿ ಶಾಸಕರು ಮನವಿ ಕೊಡುತ್ತಿದ್ದು, ಪಿಡಿಓ ಗಳನ್ನು ವರ್ಗಾವಣೆ ಮಾಡಲು ಸಮಾಲೋಚನೆ ಕೈಗೊಳ್ಳಲು ರೂಪುರೇಷೆಗಳನ್ನು ಸಿದ್ಧಗೊಳಿಸುವಂತೆ ಮುಖ್ಯಮಂತ್ರಿಗಳು ತಾತ್ವಿಕ ಒಪ್ಪಿಗೆ ನೀಡಿದ್ದಾರೆ.
ಗ್ರಾಪಂಗೆ 1 ಕೋಟಿಕಲ್ಯಾಣ ಕರ್ನಾಟಕದ ಗ್ರಾಮ ಪಂಚಾಯತಿಗಳಿಗೆ 1 ಕೋಟಿ ರೂ. ಅನುದಾನ ನೀಡುವ ಬಗ್ಗೆ ಮುಂದಿನ ಆರ್ಥಿಕ ವರ್ಷದಲ್ಲಿ ನಿರ್ಧರಿಸಲು ಸೂಚಿಸಲಾಯಿತು.
ಕೆ.ಆರ್.ಐ.ಡಿ.ಎಲ್ ನಲ್ಲಿ 800 ಜನ ಹೆಚ್ಚುವರಿಯಾಗಿ ನೇಮಕವಾಗಿದ್ದಾರೆ. ಕನಿಷ್ಠ 300 ಜನರನ್ನಾದರೂ ಕೈಬಿಡಬೇಕಾಗುತ್ತದೆ. 300 ಜನರನ್ನು ತೆಗೆಯಲು ಪಟ್ಟಿ ಮಾಡುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ, ಗೃಹ ಸಚಿವ ಜಿ.ಪರಮೇಶ್ವರ್, ಮುಖ್ಯ ಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ: ರಜನೀಶ್ ಗೋಯಲ್, ಅಪರ ಮುಖ್ಯ ಕಾರ್ಯದರ್ಶಿ ಉಮಾಮಹಾದೇವನ್ ,ಇಲಾಖೆಯ ಆಯುಕ್ತ ಅಂಜುಮ್ ಪರ್ವೇಜ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಜಯರಾಂ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
*ಹಿಂದಿನ ಸರ್ಕಾರ ಸಾಲ ಮಾಡಿ ತುಪ್ಪ ತಿನ್ನಿಸಿದ್ದಾರೆ. 37,000 ಕಾಮಗಾರಿ ಮಂಜೂರು ಮಾಡಿದ್ದು, 5 ವರ್ಷಗಳಲ್ಲಿ 10500 ಕೋಟಿ ರೂ. ಕಾಮಗಾರಿಗಳ ಪೈಕಿ 3500 ಕೋಟಿ ರೂ.ಗಳನ್ನು ಮಾತ್ರ ಬಿಡುಗಡೆ ಮಾಡಿದೆ. 6400 ಕೋಟಿ ರೂ.ಗಳವರೆಗೆ ಹಣ ಬಿಡುಗಡೆ ಮಾಡಬೇಕಿದೆ. ಈ ವರ್ಷ ಬಜೆಟ್ ಅನುದಾನದಲ್ಲಿ ಹಣ ಸಾಲದೆ ಇರುವುದರಿಂದ 3500 ಕೋಟಿ ರೂ.ಗಳ ಹಳೆ ಬಿಲ್ ಪಾವತಿಗಾಗಿ ಅಗತ್ಯವಿದೆ.-ಪ್ರಿಯಾಂಕಾ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eight + 13 =
Remember me
