ಬೆಂಗಳೂರು:ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯರ ರಾಜೀನಾಮೆ, ಮರಣ ಮತ್ತು ಅನರ್ಹತೆಯಿಂದ ತೆರವಾದ ಸ್ಥಾನಕ್ಕೆ ಆಯ್ಕೆಯಾದವರ ವಿರುದ್ಧ ಅವಿಶ್ವಾಸ ರ್ನಿಣಯ ಮಂಡಿಸಲು ಕನಿಷ್ಠ 15 ತಿಂಗಳ ಅವಧಿ ಪೂರ್ಣವಾಗಿರಬೇಕೆಂದು ಹೈಕೋರ್ಟ್​ ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ.
ಗ್ರಾ.ಪಂ ಅಧ್ಯಕ್ಷ, ಉಪಾಧ್ಯರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಆಯ್ಕೆಯಾದವರ ಅವಿಶ್ವಾಸ ರ್ನಿಣಯ ಮಂಡಿಸಲು 15 ತಿಂಗಳ ಅವಧಿ ಪೂರ್ಣವಾಗಬೇಕಾದ ಅವಶ್ಯಕತೆ ಇಲ್ಲ ಎಂದು ಹೈಕೋರ್ಟ್​ ಏಕ ಸದಸ್ಯ ಪೀಠದ ನೀಡಿದ್ದ ಆದೇಶ ಪ್ರಶ್ನಿಸಿ ಯಲಹಂಕ ತಾಲೂಕಿನ ಬಾಗಲೂರು ಗ್ರಾ.ಪಂ ಅಧ್ಯರಾಗಿದ್ದ ಪ್ರೀತಿ ಮುನೇಗೌಡ ಎಂಬುವರು ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್​.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್​. ದೀತ್​ ಅವರಿದ್ದ ಪೀಠ ಈ ಆದೇಶ ನೀಡಿದೆ.
ಅಲ್ಲದೆ, ಪಂಚಾಯತ್​ ರಾಜ್​ನಂತಹ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಿಶ್ವಾಸವೆಂಬ ಅಸವು ಅಧಿಕಾರ ಕೂಗುಮರಿಗಳಿಂದ ಅಪಾಯಕಾರಿಯಾಗಿರಲಿದೆ. ಅನೈತಿಕ ರಾಜಕೀಯ ಹಿತಾಸಕ್ತಿ ಈಡೇರಿಸುವುದು ಮತ್ತು ುಲ್ಲಕ ಕಾರಣಗಳಿಂದ ಅತೃಪ್ತಿ ಗುಂಪುಗಳಿಂದ ಅವಿಶ್ವಾಸ ಗೊತ್ತುವಳಿ ರ್ನಿಣಯ ಮಂಡಿಸುವ ಪ್ರವೃತ್ತಿಯನ್ನು ನಿಯಂತ್ರಿಸುವುದು ಪಂಚಾಯತ್​ರಾಜ್​ ಕಾಯ್ದೆ ಸೆನ್​ 49(2)ರ ಮೂಲ ಉದ್ದೇಶವಾಗಿದೆ. ಹೀಗಾಗಿ 15 ತಿಂಗಳ ಕಾಲ ಅವಿಶ್ವಾಸ ರ್ನಿಣಯ ಮಂಡಿಸುವುದಕ್ಕೆ ಅವಕಾಶವಿರುವುದಿಲ್ಲ. ಆದ್ದರಿಂದ ಅಧ್ಯರ ಚುನಾವಣೆ ದಿನಾಂಕದಿಂದ ಮೊದಲ 15 ತಿಂಗಳವರೆಗೂ ಅವಿಶ್ವಾಸ ರ್ನಿಣಯ ಮಂಡಿಸುವುದಕ್ಕೆ ರ್ನಿಬಂಧವಿರಲಿದೆ ಎಂದು ಪೀಠ ತಿಳಿಸಿದೆ.
ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ, ಯುವಕನಿಗೆ 20 ವರ್ಷ ಶಿಕ್ಷೆ
ಪ್ರಕರಣದ ಹಿನ್ನೆಲೆ?ಅರ್ಜಿದಾರರ 2021ರ ಡಿ.27ರಂದು ಬಾಗಲೂರು ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆಯಾಗಿದ್ದು, 2022ರ ಜ. 18ರಂದು ಹಮೀದಾ ಎಂಬುವರು ಅಧ್ಯರಾಗಿ ಆಯ್ಕೆಯಾಗಿದ್ದರು. 2023ರ ಫೆ.1ರಂದು ಹಮೀದಾ ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, 2023ರ ಫೆ.1ರಂದು ರಾಜೀನಾಮೆಯನ್ನು ಪುರಸ್ಕರಿಸಲಾಗಿತ್ತು. ಅದೇ ಸ್ಥಾನಕ್ಕೆ 2023ರ ಮಾ.7ರಂದು ಹೊಸದಾಗಿ ಚುನಾವಣೆ ನಡೆದು ಅಧ್ಯರ ಹುದ್ದೆಗೆ ಪೀತಿ ಮುನೇಗೌಡ ಅಧ್ಯರಾಗಿ ಆಯ್ಕೆಯಾಗಿದ್ದರು. ಬಳಿಕ 2023ರ ಅ.10ರಂದು ಪ್ರೀತಿ ಮುನೇಗೌಡರ ವಿರುದ್ಧ ಇತರೆ ಸದಸ್ಯರು ಅವಿಶ್ವಾಸ ರ್ನಿಣಯ ಮಂಡಿಸಿದ್ದರು. 2023ರ ನ. 21 ರ್ನಿಣಯ ಮಂಡಿಸಲು ದಿನಾಂಕವನ್ನು ನಿಗದಿ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಪ್ರೀತಿ ಮುನೇಗೌಡ ಅವರು ಹೈಕೋರ್ಟ್​ ಮೆಟ್ಟಿಲೇರಿದ್ದರು.ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರೀತಿ ಮುನೇಗೌಡ 2023ರ ಮಾರ್ಚ್​ನಲ್ಲಿ ಅಧ್ಯರಾಗಿ ಆಯ್ಕೆಯಾಗಿದ್ದಾರೆ. ಗ್ರಾಮ ಸ್ವರಾಜ್​ ಮತ್ತು ಪಂಚಾಯತ್​ ರಾಜ್​ ಕಾಯ್ದೆ ಸೆನ್​ 49ರ ಅವರ ವಿರುದ್ಧ 15 ತಿಂಗಳ ಮುನ್ನ ಅವಿಶ್ವಾಸ ರ್ನಿಣಯ ಮಂಡಿಸುವುದಕ್ಕೆ ಅವಕಾಶವಿಲ್ಲ. ಅಧ್ಯರಾಗಿ ಆಯ್ಕೆಯಾದ ಎಂಟು ತಿಂಗಳ ಒಳಗೆ ಅವಿಶ್ವಾಸ ರ್ನಿಣಯ ಮಂಡಿಸಲಾಗಿದೆ. ಅದನ್ನು ಪರಿಗಣಿಸುವುದು ಮತ್ತು ಚುನಾವಣಾ ಸಭೆಗೆ ನೋಟಿಸ್​ ನೀಡುವುದಕ್ಕೆ ನಿಯಮ ಬಾಹಿರ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + eight =
Remember me
