ಚಿಕ್ಕೋಡಿ:ಮಾರಕ ಕರೊನಾ ಸೋಂಕಿನ ಚಿಕಿತ್ಸೆಗಾಗಿ ವಿಶ್ವದಾದ್ಯಂತ ಲಸಿಕೆ ಕಂಡುಹಿಡಿಯುವ ಪ್ರಯೋಗಗಳು ಭರದಿಂದ ಸಾಗುತ್ತಿವೆ. ಈ ನಡುವೆ ಆಯುರ್ವೇದದಲ್ಲೂ ನಾಲ್ಕು ಔಷಧಗಳ ಪ್ರಾಯೋಗಿಕ ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ನಡುವೆ ಚಿಕ್ಕೋಡಿಯ ಅಥಣಿ ವೈದ್ಯರೊಬ್ಬರು ತಮ್ಮದೇ ಆದ ಔಷಧವನ್ನು ಕಂಡುಹಿಡಿದಿದ್ದಾರೆ. ಅಲ್ಲದೆ, ತಮ್ಮ ಮನೆಯವರ ಮೇಲೆ ಯಶಸ್ವಿಯಾಗಿ ಪ್ರಯೋಗಿಸಿದ್ದಾರೆ.

ಡಾ. ರಮೇಶ್​ ಗುಳ್ಳ ಈ ಪ್ರಯೋಗ ಮಾಡಿರುವ ವೈದ್ಯ. ಇವರ ಪ್ರಕಾರ ರುಬೊಲಾ ಚಿಕಿತ್ಸೆಗೆ ಬಳಸುವ ಚುಚ್ಚುಮದ್ದನ್ನು ತೆಗೆದುಕೊಂಡರೆ ಕರೊನಾ ಸೋಂಕಿನ ಆತಂಕದಿಂದ ಪಾರಾಗಬಹುದು ಎಂದು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ:ರೈಲು ನಿಲ್ದಾಣಗಳಲ್ಲೂ ಟಿಕೆಟ್​ ಮುಂಗಡ ಕಾಯ್ದಿರಿಸುವಿಕೆ ಕೌಂಟರ್​ಗಳು ಕಾರ್ಯಾರಂಭ
ಮುಂಬೈಯಲ್ಲಿ ಕ್ಯಾನ್ಸರ್​ ವೈದ್ಯರಾಗಿ ಸೇವೆ ಸಲ್ಲಿಸಿರುವ ಡಾ. ರಮೇಶ್​ ಗುಳ್ಳ, ಪ್ರಕಾರ ಎಂಆರ್​ಎಂಎಂಆರ್​ ಚುಚ್ಚುಮದ್ದನ್ನು ಮುಂಜಾಗ್ರತಾ ಕ್ರಮವಾಗಿ ತೆಗೆದುಕೊಂಡರೆ ಕರೊನಾ ಸೋಂಕು ತಗಲುವ ಭಯವೇ ಇರುವುದಿಲ್ಲವಂತೆ.
ಈ ಚುಚ್ಚುಮದ್ದನ್ನು ತಮ್ಮ ಮನೆಯವರ ಮೇಲೆ ಯಶಸ್ವಿಯಾಗಿ ಪ್ರಯೋಗಿಸಿರುವುದಾಗಿ ಹೇಳಿಕೊಂಡಿರುವ ಅವರು, ಕೇವಲ 150 ರೂ. ವೆಚ್ಚದಲ್ಲಿ ಈ ಚಿಕಿತ್ಸೆ ಲಭ್ಯ ಇರುವುದಾಗಿ ಹೇಳಿಕೊಂಡಿದ್ದಾರೆ. ಈ ಔಷಧ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಯಥೇಚ್ಚವಾಗಿ ಲಭ್ಯ ಇರುವುದಾಗಿ ಹೇಳಿದ್ದಾರೆ.
ದೇಶಿಯ ವಿಮಾನಯಾನ ಟಿಕೆಟ್​ ದರಗಳು ಫಿಕ್ಸ್​, ಬೆಂಗಳೂರಿಂದ ಎಲ್ಲೆಲ್ಲಿಗೆ ಎಷ್ಟೆಷ್ಟು ದರ ವಿವರ ಇಲ್ಲಿದೆ ನೋಡಿ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:9 + 14 =
Remember me
