ಶಿವಮೊಗ್ಗ:ಬಿ.ಎಚ್​.ರಸ್ತೆಯ ದೀಪಕ್​ ಪೆಟ್ರೋಲ್​ ಬಂಕ್​ ಹಿಂಭಾಗ ಗುರುವಾರ ಬೆಳಗ್ಗೆ ಬಜರಂಗದಳದ ನಗರ ಸಹ ಸಂಚಾಲಕ ನಾಗೇಶ್​ ಮೇಲೆ ದುಷ್ಕಮಿರ್ಗಳ ಗುಂಪು ಹಲ್ಲೆ ನಡೆಸಿದೆ. ಈ ಘಟನೆ ನಂತರ ಟೆಂಪೋ ಸ್ಟಾಂಡ್​, ಕೆ.ಆರ್​.ಪುರಂ ಪ್ರದೇಶದಲ್ಲಿ ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆದಿದ್ದು, ರಾಮಣ್ಣ ಶ್ರೇಷ್ಠಿ ಪಾರ್ಕ್​ ಬಳಿ ಮನೆ ಮುಂದೆ ನಿಲ್ಲಿಸಿದ್ದ ನಾಲ್ಕು ಕಾರು, ಆಟೋ ಮತ್ತು ಬೈಕ್​ ಜಖಂಗೊಳಿಸಲಾಗಿದೆ.
ಘಟನೆಯಲ್ಲಿ ಒಟ್ಟು 11 ಜನ ಗಾಯಗೊಂಡಿದ್ದು, ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. ನಾಗೇಶ್​ಗೆ ಸ್ವಲ್ಪ ಹೆಚ್ಚು ಪೆಟ್ಟು ಬಿದ್ದಿದ್ದು, ಅವರನ್ನು ಮೆಗ್ಗಾನ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೆಗ್ಗಾನ್​ ಆಸ್ಪತ್ರೆಗೆ ಭೇಟಿ ನೀಡಿದ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಘಟನೆಯ ಮಾಹಿತಿ ಪಡೆದು ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ನಿರ್ದೇಶನ ನೀಡಿದರು.
ಈ ಬೆಳವಣಿಗೆಯಿಂದ ಗಾಂಧಿ ಬಜಾರ್​ ಮತ್ತು ಚೋರ್​ ಬಜಾರ್​ನಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ನಗರದೆಲ್ಲಡೆ ಅಂಗಡಿಗಳನ್ನು ಬಂದ್​ ಮಾಡಿಸಲಾಯಿತು. ಘಟನೆ ಖಂಡಿಸಿ ಬಜರಂಗದಳದ ಕಾರ್ಯಕರ್ತರು ಮತ್ತು ಹಿಂದೂಪರ ಸಂಟನೆಗಳ ಮುಖಂಡರು ಗಾಂಧಿಬಜಾರ್​ನಲ್ಲಿ ಪ್ರತಿಭಟನೆ ನಡೆಸಿದರು.
ಪೂರ್ವವಲಯದ ಐಜಿ ಎಸ್​.ರವಿ ಅವರು ಶಿವಮೊಗ್ಗದಲ್ಲಿ ಮೊಕ್ಕಾಂ ಹೂಡಿದ್ದು, ನಗರದಾದ್ಯಂತ ಪೊಲೀಸ್​ ಬಂದೋಬಸ್ತ್​ ಮಾಡಲಾಗಿದೆ. ಸಂಜೆ ವೇಳೆಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.
ತಂಡ ರಚನೆ:ಹಲ್ಲೆಗೆ ಕಾರಣ ಏನು ಎಂಬುದು ಗೊತ್ತಾಗಿಲ್ಲ. ಆರೋಪಿಗಳ ಪತ್ತೆಗೆ ಸೈಬರ್​ ಕ್ರೈಂ, ರೌಡಿ ನಿಗ್ರಹ ದಳ ಇನ್ಸ್​ಪೆಕ್ಟರ್​ ಗುರುರಾಜ್​ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದ್ದು, ಶೀಘ್ರವೇ ಆರೋಪಿಗಳನ್ನು ಪತ್ತೆ ಮಾಡಲಾಗುವುದು. ಎಲ್ಲ ಗಾಯಾಳುಗಳು ಅಪಾಯದಿಂದ ಪಾರಾಗಿದ್ದಾರೆ ಎಂದು ಎಸ್ಪಿ ಕೆ.ಎಂ. ಶಾಂತರಾಜು ತಿಳಿಸಿದ್ದಾರೆ.
ಶಿವಮೊಗ್ಗದ ಗಾಂಧಿ ಬಜಾರ್​ ಸೇರಿ ಹಲವೆಡೆ ಎರಡು ಕೋಮಿನ ನಡುವೆ ಗಲಾಟೆ ನಡೆದಿದೆ. ಪರಿಸ್ಥಿತಿಯನ್ನು ಅವಲೋಕಿಸಿದ್ದು ಜನ ಭಯಪಡುವ ಅಗತ್ಯವಿಲ್ಲ. ಈಗಾಗಲೇ ಪೊಲೀಸ್​ ಭದ್ರತೆ ಕಲ್ಪಿಸಿದ್ದು ಪ್ರತಿಯೊಬ್ಬರೂ ಶಾಂತಿ ಕಾಪಾಡುವ ಅಗತ್ಯತೆ ಇದೆ ಎಂದು ದಾವಣಗೆರೆ ಪೂರ್ವ ವಲಯ ಐಜಿ ಎಸ್​.ರವಿ ಮನವಿ ಮಾಡಿದ್ದಾರೆ.
ಸರ್ಕಾರದ 2 ಲಕ್ಷ ರೂ. ಪರಿಹಾರ ಪಡೆಯಲು ಯಾರೂ ಇಲ್ಲ..! ಇದ್ದರೆ ದಯವಿಟ್ಟು ಸಂಪರ್ಕಿಸಿ

ಮಗಳ ಚೀರಾಟ ಕೇಳಿ ಪಾಲಕರು ಓಡಿ ಬರುವಷ್ಟರಲ್ಲಿ ಹೆಣವಾಗಿದ್ದಳು! ಅಲ್ಲೇ ಕುಳಿತಿದ್ದ ಬಾಲಕ ಬಾಯ್ಬಿಟ್ಟ ಸ್ಫೋಟಕ ರಹಸ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − three =
Remember me
