ಕೋಲಾರ:ಯುವತಿಗೆ ಹೋಳಿ ಹಾಕಿದ್ದಕ್ಕೆ ಕಾನೂನು ವಿದ್ಯಾರ್ಥಿಯೊಬ್ಬನನ್ನು ಅಪಹರಿಸಿ ಹಲ್ಲೆ ಮಾಡಿರುವ ಘಟನೆ ಕೋಲಾರ ತಾಲೂಕಿನ ಬೆಳಮಾರನಹಳ್ಳಿಯಲ್ಲಿ ನಡೆದಿದೆ.
ಬೆಳಮಾರನಹಳ್ಳಿಯ ನಿವಾಸಿ ಮಧು ಬಿ.ಸಿ ಹಲ್ಲೆಗೊಳ್ಳಗಾದ ಕಾನೂನು ವಿದ್ಯಾರ್ಥಿ. ಮಧು ಡಿ.ಎನ್.ಡಿ ಮತ್ತು ಆತನ ಸ್ನೇಹಿತರಾದ ಶಿವರಾಜ್, ಅಭಿಲಾಷ್, ರಾಹುಲ್ ಹಾಗೂ ಪ್ರಮೋದ್ ವಿರುದ್ಧ ವಿದ್ಯಾರ್ಥಿಯನ್ನು ಅಪಹರಿಸಿ, ಬೆತ್ತಲೆಗೊಳಿಸಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಇದನ್ನೂ ಓದಿ:ರೋಗಿಯ ಹೊಟ್ಟೆಯೊಳಗೆ ಬಟ್ಟೆ ಬಿಟ್ಟ ವೈದ್ಯ! ಪರಿಸ್ಥಿತಿ ಗಂಭೀರ ಆಗುತ್ತಿದ್ದಂತೆಯೇ ಆಸ್ಪತ್ರೆಯಿಂದ ಹೊರ ಕಳಿಸಿದ್ರು…
ತಮ್ಮದೇ ಊರಿನ ಯುವತಿಗೆ ಬಣ್ಣ ಹಚ್ಚಿದ್ದಕ್ಕೆ ಮಧು ಬಿ.ಸಿ. ಮೇಲೆ ಹಲ್ಲೆ ಮಾಡಲಾಗಿದೆ. ಹೋಳಿ ಹಬ್ಬದ ದಿನದಂದು ಬಸ್​​​ನಲ್ಲಿ ಯುವತಿಗೆ ಮಧು ಬಣ್ಣ ಹಚ್ಚಿದ್ದ. ಈ ವಿಚಾರ ತಿಳಿದು ಮಧು ಡಿ.ಎನ್​.ಡಿ ಮತ್ತು ಆತನ ಸಂಗಡಿಗರು ಮಧುನನ್ನು ಕರೆಸಿ, ಶೆಡ್​​ವೊಂದರಲ್ಲಿ ಬಟ್ಟೆ ಬಿಚ್ಚಿ, ಹಲ್ಲೆ ಮಾಡಿದ್ದಾರೆ.
ಈ ಘಟನೆ ಕಳೆದ 17ನೇ ತಾರೀಖಿನಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಗಾಯಾಳು ಮಧುಗೆ ಕೋಲಾರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೆಮಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.(ದಿಗ್ವಿಜಯ ನ್ಯೂಸ್​)
ದೆಹಲಿಯ ಹಲವೆಡೆ ಮೋದಿ ವಿರೋಧಿ ಪೋಸ್ಟರ್: 44 ಪ್ರಕರಣ ದಾಖಲು, ನಾಲ್ವರ ಬಂಧನ​, ಎಎಪಿ ಆಕ್ರೋಶ

ಹೊಸ ಚಿತ್ರದಲ್ಲಿ ಶಿವರಾಜಕುಮಾರ್​ ಜತೆಯಾದ ಗಣೇಶ್​; ಸದ್ಯದಲ್ಲೇ ಪ್ರಾರಂಭ

ಇನ್ಮುಂದೆ ಬಿಸಿಯೂಟದೊಂದಿಗೆ ಸಿಗಲಿದೆ ರಾಗಿ ಮಾಲ್ಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 3 =
Remember me
