ಬೆಂಗಳೂರು/ಮಂಡ್ಯ: ಕರೊನಾ ವಾರಿಯರ್ಸ್ ಮೇಲೆ ಹಲ್ಲೆ, ದೌರ್ಜನ್ಯ ತಡೆಗಟ್ಟಲೆಂದೇ ಕೇಂದ್ರ ಹಾಗೂ ಸರ್ಕಾರಗಳು ಪ್ರತ್ಯೇಕ ಸುಗ್ರೀವಾಜ್ಞೆಗಳ ಮೂಲಕ ಹೊಸ ಕಾಯ್ದೆಗಳನ್ನೇ ಜಾರಿಗೆ ತಂದಿದ್ದರೂ, ದುಷ್ಕರ್ವಿುಗಳು ಎಚ್ಚೆತ್ತುಕೊಂಡಿಲ್ಲ. ರಾಜ್ಯದಲ್ಲಿ ಕರೊನಾ ವಾರಿಯರ್ಸ್ ಮೇಲೆ ದೌರ್ಜನ್ಯ ಮುಂದುವರಿದ್ದು, ಬೆಂಗಳೂರು ಮತ್ತು ಶ್ರೀರಂಗಪಟ್ಟದಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಹಾಗೂ ನಿಂದಿಸಿರುವ ಎರಡು ಪ್ರತ್ಯೇಕ ಪ್ರಕರಣಗಳು ಗುರುವಾರ ಬೆಳಕಿಗೆ ಬಂದಿವೆ. ಕೋವಿಡ್ 19 ಸೇವೆಯಲ್ಲಿ ತೊಡಗಿರುವ ಅಧಿಕಾರಿ, ಸಿಬ್ಬಂದಿ ಹಾಗೂ ಆಶಾಕಾರ್ಯಕರ್ತೆಯರ ಮೇಲೆ ದೌರ್ಜನ್ಯ ಎಸಗುವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಸುಗ್ರೀವಾಜ್ಞೆ ಜಾರಿಯಾಗಿರುವ ಹಿನ್ನೆಲೆಯಲ್ಲಿ 3 ವರ್ಷ ಜೈಲು ಶಿಕ್ಷೆ ಹಾಗೂ 50,000 ರೂ. ದಂಡ ವಿಧಿಸಬಹುದು. ಸುಗ್ರೀವಾಜ್ಞೆ ಜಾರಿಯಾದ ನಂತರ ವರದಿಯಾಗಿರುವ ಮೊದಲ ಪ್ರಕರಣಗಳಾಗಿರುವುದರಿಂದ ಈ ಸೆಕ್ಷನ್​ಗಳಡಿಯೇ ಪ್ರಕರಣ ದಾಖಲಿಸಿಕೊಳ್ಳುವುದಾಗಿ ಪೊಲೀಸರು ಮಾಹಿತಿ ನಿಡಿದ್ದಾರೆ. ಬೆಂಗಳೂರಿನ ನಂದಿನಿ ಲೇಔಟ್​ನಲ್ಲಿ ಕಿಡಿಗೇಡಿಯೊಬ್ಬ ಆಶಾ ಕಾರ್ಯಕರ್ತೆ ವಿರುದ್ಧ ಅಪಪ್ರಚಾರ ಮಾಡುವ ಉದ್ದೇಶದಿಂದ ವಿಡಿಯೋವನ್ನು ಫೇಸ್​ಬುಕ್​ನಲ್ಲಿ ಹರಿಯಬಿಟ್ಟಿದ್ದಲ್ಲದೆ ಧಮ್ಕಿ ಹಾಕಿದ್ದಾನೆ.
ಆರೋಪಿ ಬಂಧನ: ಬೆಂಗಳೂರಿನ ನಂದಿನಿಲೇಔಟ್​ನ ನಿವಾಸಿ ಆಶಾಕಾರ್ಯಕರ್ತೆ ಶಶಿಕಲಾ ಕೊಟ್ಟ ದೂರಿನ ಅನ್ವಯ ಲಗ್ಗೆರೆ ನಿವಾಸಿ ಧನಂಜಯ್ ಎಂಬಾತನನ್ನು ಬಂಧಿಸಲಾಗಿದೆ. ಸ್ಥಳೀಯ ಜೆಡಿಎಸ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಈತ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಎನ್. ಶಶಿಕುಮಾರ್ ತಿಳಿಸಿದ್ದಾರೆ. ಆಶಾ ಕಾರ್ಯಕರ್ತೆ ಶಶಿಕಲಾ ತನ್ನ ಸಹೋದ್ಯೋಗಿ ಜತೆ ಗುರುವಾರ (ಏ.19) ಲಗ್ಗೆರೆಯ ನರಸಿಂಹ ಲೇಔಟ್​ನಲ್ಲಿ ಮನೆ ಮನೆಗೆ ತೆರಳಿ, ಆರೋಗ್ಯ ಸರ್ವೆಯಲ್ಲಿ ತೊಡಗಿದ್ದರು. ಮಧ್ಯಾಹ್ನ 2 ಗಂಟೆಯಲ್ಲಿ ಆರೋಗ್ಯ ಕೇಂದ್ರಕ್ಕೆ ಊಟ ತರಿಸುವಂತೆ ಮುನೇಶ್ವರ ಬಡಾವಣೆಯಲ್ಲಿರುವ ಜೆಡಿಎಸ್ ಕಚೇರಿಗೆ ತೆರಳಿ ಪಾರ್ಥಗೌಡ ಎಂಬುವರಿಗೆ ತಿಳಿಸಿದ್ದರು. ಜೆಡಿಎಸ್ ಕಚೇರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಧನಂಜಯ್, ಆಶಾಕಾರ್ಯಕರ್ತೆಯರಿಗೆ ಊಟ ತೆಗೆದುಕೊಂಡು ಹೋಗಿದ್ದ. ಈ ವೇಳೆ ಆರೋಗ್ಯ ಕೇಂದ್ರದಲ್ಲಿದ್ದ ಸ್ಯಾನಿಟೈಸರ್​ನಿಂದ ಕೈ ತೊಳೆದುಕೊಂಡಿದ್ದಾನೆ. ‘ಈ ಸ್ಯಾನಿಟೈಸರ್ ಸರಿ ಇಲ್ಲ. ಇದು ಲೋಕಲ್ ಕಂಪನಿ ಎನಿಸುತ್ತದೆ. ಶಾಸಕರು, ಸಂಸದರು ಅಥವಾ ಪಾಲಿಕೆ ಸದಸ್ಯರು ಕೊಟ್ಟಿಲ್ಲವೇ’ ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಆಶಾ ಕಾರ್ಯಕರ್ತೆಯರು, ‘ಆಲ್ಕೋಹಾಲ್ ಅಂಶ ಜಾಸ್ತಿ ಇರಬಹುದು. ಬಳಸಿದಾಗಲೆಲ್ಲ ಕೈ ಉರಿಯುತ್ತದೆ. ಯಾವ ರಾಜಕಾರಣಿಗಳು ಕೊಟ್ಟಿಲ್ಲ. ಆಸ್ಪತ್ರೆಯವರು ಕೊಟ್ಟಿದ್ದಾರೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ಈ ಸಂಭಾಷಣೆಯನ್ನು ಆಶಾಕಾರ್ಯಕರ್ತೆಯರಿಗೆ ಅರಿವಿಲ್ಲದಂತೆ ಮೊಬೈಲ್​ನಲ್ಲಿ ಗೌಪ್ಯವಾಗಿ ಚಿತ್ರಿಕರಿಸಿಕೊಂಡಿದ್ದ. ಬಳಿಕ ಅಪಪ್ರಚಾರ ಮಾಡುವ ಉದ್ದೇಶದಿಂದ ವಿಡಿಯೋವನ್ನು ತಿರುಚಿ ಫೇಸ್​ಬುಕ್​ನಲ್ಲಿ ಹರಿಯಬಿಟ್ಟಿದ್ದಾನೆ. ಇದು ಆಶಾ ಕಾರ್ಯಕರ್ತೆ ರೂಪ ಎಂಬುವರ ಗಮನಕ್ಕೆ ಬಂದಿದ್ದು, ಬಳಿಕ ಶಶಿಕಲಾ ಅವರಿಗೆ ತಿಳಿಸಿದ್ದಾರೆ. ಅಲ್ಲದೆ, ವಿಡಿಯೋ ವೈರಲ್ ಆಗಿದ್ದರಿಂದ ಸಂಬಂಧಿಕರು ಕರೆ ಮಾಡಿ ಬೈಯ್ದಿದ್ದಾರೆ.
ವಿಡಿಯೋ ಡಿಲೀಟ್ ಮಾಡಲ್ಲ!
ಮಾ.23ರಂದು ಧನಂಜನ್ ಮನೆಗೆ ಹೋಗಿ, ವಿಡಿಯೋವನ್ನು ಫೇಸ್​ಬುಕ್​ನಲ್ಲಿ ಹರಿಯಬಿಟ್ಟಿರುವುದನ್ನು ಪ್ರಶ್ನಿಸಿ, ಡಿಲಿಟ್ ಮಾಡುವಂತೆ ಸೂಚಿಸಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಧನಂಜಯ್, ‘ನಿಮ್ಮ ಆಸ್ಪತ್ರೆಯಲ್ಲಿ ಅವ್ಯವಹಾರ ನಡೆಯುತ್ತಿದೆ. ನೀವು ಲಂಚ ತೆಗೆದುಕೊಳ್ಳುತ್ತಿದ್ದೀರಿ. ವಿಡಿಯೋವನ್ನು ಡಿಲಿಟ್ ಮಾಡುವುದಿಲ್ಲ. ಮತ್ತೆ ಅಪ್​ಲೋಡ್ ಮಾಡುತ್ತೇನೆ. ಏನಾದರೂ ಮಾಡಿಕೊಳ್ಳಿ’ ಎಂದು ಅವಾಚ್ಯವಾಗಿ ನಿಂದಿಸಿದ್ದಾನೆ. ಮತ್ತೊಮ್ಮೆ ಮನೆ ಬಳಿ ಬಂದರೆ ಸುಮ್ಮನಿರುವುದಿಲ್ಲ ಎಂದು ಬೆದರಿಕೆ ಹಾಕಿ ಶಶಿಕಲಾ ಅವರ ಕೈ ಹಿಡಿದು ಎಳೆದಾಡಿದ್ದಾನೆ. ಈ ಕುರಿತು ಶಶಿಕಲಾ ಅವರು ಕೊಟ್ಟ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ. ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನೊಂದು ಆತ್ಮಹತ್ಯೆ ಯತ್ನ
ಮತ್ತೊಂದು ಪ್ರಕರಣದಲ್ಲಿ ಶ್ರೀರಂಗಪಟ್ಟಣದ ಹುರುಳಿಕ್ಯಾತನಹಳ್ಳಿಯ ಆಶಾ ಕಾರ್ಯಕರ್ತೆ ಮೀನಾಕ್ಷಿ ಎಂಬುವವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮೈಸೂರಿನ ಕೆ.ಆರ್.ಆಸ್ಪತೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಮುಂದುವರಿದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಮೈಸೂರಿನ ಮಹದೇಶ್ವರ ನರ್ಸಿಂಗ್ ಹೋಮ್ಲ್ಲಿ ವ್ಯಕ್ತಿಗೆ ಕರೊನಾ ಪಾಸಿಟಿವ್ ಪತ್ತೆಯಾಗಿತ್ತು. ಹುರುಳಿ ಕ್ಯಾತನಹಳ್ಳಿಯ ವ್ಯಕ್ತಿಯೊಬ್ಬರು ಮಹದೇಶ್ವರ ನರ್ಸಿಂಗ್ ಹೋಮ್ೆ ತೆರಳಿದ್ದರು ಎಂಬ ಮಾಹಿತಿಯನ್ನು ಗ್ರಾಪಂ ಸಿಬ್ಬಂದಿಯೊಬ್ಬರು ಆಶಾ ಕಾರ್ಯಕರ್ತೆ ಮೀನಾಕ್ಷಿಗೆ ತಿಳಿಸಿದ್ದರು. ಹೀಗಾಗಿ ಶಂಕಿತ ವ್ಯಕ್ತಿಯ ಮನೆಗೆ ತೆರಳಿ, ಹೋಂ ಕ್ವಾರಂಟೈನ್​ನಲ್ಲಿ ಇರುವಂತೆ ತಿಳಿಸಿದ್ದರು. ಈ ವೇಳೆ ಆತ, ನರ್ಸಿಂಗ್ ಹೋಮ್ೆ ಹೋಗಿ ಬಂದ ವಿಚಾರವನ್ನು ನಿಮಗೆ ತಿಳಿಸಿದ್ದು ಯಾರು ಪ್ರಶ್ನಿಸಿದ್ದ. ಇದಕ್ಕೆ ಆಕೆ, ಗ್ರಾಪಂ ಸಿಬ್ಬಂದಿ ತಿಳಿಸಿದರು ಎಂದು ಹೇಳಿದ್ದಾರೆ.
ಶಂಕಿತ ಹಾಗೂ ಗ್ರಾಪಂ ಸಿಬ್ಬಂದಿ ಗಲಾಟೆ!: ನಂತರ ಶಂಕಿತ ವ್ಯಕ್ತಿ ಗ್ರಾಪಂ ಸಿಬ್ಬಂದಿ ಜತೆ ಗಲಾಟೆ ಮಾಡಿದ್ದ. ಇದರಿಂದ ಕೋಪಿತನಾಗಿದ್ದ ಗ್ರಾಪಂ ಸಿಬ್ಬಂದಿ ಮತ್ತು ಆತನ ತಂದೆ, ‘ನಿಮಗೆ ಕೊಟ್ಟ ಮಾಹಿತಿಯನ್ನು ಶಂಕಿತನ ಮುಂದೆ ಯಾಕೆ ಹೇಳಿದ್ದೀರಿ’ ಎಂದು ಪ್ರಶ್ನಿಸಿ ಗಲಾಟೆ ತೆಗೆದಿದ್ದಾನೆ. ಅಲ್ಲದೇ, ಅವಾಚ್ಯವಾಗಿ ನಿಂದಿಸಿದ್ದ. ಇದರಿಂದ ಮೀನಾಕ್ಷಿ ನೊಂದ ಮೀನಾಕ್ಷಿ ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಕುರಿತು ಅರಕೆರೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕೊವಿಡ್​​ನಿಂದಾದ ನಷ್ಟದ ಮೊತ್ತದ ಬಿಲ್​​ನ್ನು ಚೀನಾಕ್ಕೆ ಕಳಿಸಿದೆಯಾ ಜರ್ಮನಿ? ಮಾಧ್ಯಮವೊಂದರ ವರದಿಯ ಹೆಡ್​ಲೈನ್ ಎಡವಟ್ಟು..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − seventeen =
Remember me
