ವಿಜಯನಗರ:ಅಂತರ್ಜಾತಿಯ ಯುವಕ-ಯುವತಿ ಪರಸ್ಪರ ಪ್ರೀತಿಸಿ ಊರು ಬಿಟ್ಟ ಹಿನ್ನೆಲೆಯಲ್ಲಿ ಯುವತಿ ಮನೆಯವರು ಹುಡುಗನ ಮೇಲೆ ದಾಳಿ ಮಾಡಿರವುದಲ್ಲದೆ, ಸಂಬಂಧಿಕರ ಐದು ಮನೆಯನ್ನು ಹಾಳುಗೆಡವಿದ್ದಾರೆ.
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಕನ್ನನಾಯಕನಹಳ್ಳಿಯಲ್ಲಿ (ಅಗ್ರಹಾರ) ಘಟನೆ ನಡೆದಿದೆ. ದುರ್ಗೇಶ್​ ಮತ್ತು ಕವಿತಾ ಪ್ರೀತಿಸಿ ಊರು ಬಿಟ್ಟಿದ್ದಾರೆ. ಇದರಿಂದ ಕುಪಿತಗೊಂಡ ಹುಡುಗಿಯ ಕಡೆಯವರು ಹುಡುಗನ ಮನೆಯನ್ನು ಧ್ವಂಸ ಮಾಡಿದ್ದಾರೆ.
ಮನೆಯಲ್ಲಿನ ಟಿವಿ ಒಡೆದು, ಹಣ, ಚಿನ್ನ, ಅಕ್ಕಿ ಬೆಳೆ, ಬಟ್ಟೆಯನ್ನು ಕದ್ದೊಯ್ದಿದ್ದಾರೆ. ಆಹಾರ ಪದಾರ್ಥಗಳ ಜತೆ, ಪಾತ್ರೆ ಪಗಡೆಗಳನ್ನು ಬಿಟ್ಟಿಲ್ಲ. ಇದರೊಂದಿಗೆ ದುರ್ಗೇಶ್​ ಸಂಬಂಧಿಕರಿಗೆ ಸೇರಿದ ಎರಡು ಎಮ್ಮೆ ಮತ್ತು ಎರಡು ಟಗರುಗಳನ್ನು ಕಳ್ಳತನ ಮಾಡಿದ್ದಾರೆ. ದುರ್ಗೇಶ್​ ಅಣ್ಣನ ಮನೆ ಮತ್ತು ಅಕ್ಕನ ಮನೆಯ ಎರಡು ಹೊಸ ಪಲ್ಸರ್​ ಬೈಕ್​ಗಳನ್ನು ಧ್ವಂಸ ಮಾಡಿದ್ದಾರೆ.
ಇದನ್ನೂ ಓದಿರಿ:ಕಾನೂನಿನಾಚೆ ಮಾನವೀಯ ಆದೇಶ: ಅಪ್ರಾಪ್ತರ ಮದುವೆಗೆ ಕೋರ್ಟ್‌ನಿಂದ ಅಸ್ತು: ಲೈಂಗಿಕ ಸಂಪರ್ಕವಾದರೂ ನೀಡದ ಶಿಕ್ಷೆ
ಹಲ್ಲೆ ನಡೆಸಿ ಮನೆಗೆ ಹಾನಿ ಮಾಡಿದ್ದಲ್ಲದೆ, ಹುಡುಗನ ಸಂಧಿಕರಿಗೆ ಊರಿಗೆ ಕಾಲಿಡದಂತೆ ಬೆದರಿಕೆ ಹಾಕಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹರಪನಳ್ಳಿ ಪೊಲೀಸ್ ಠಾಣೆಯಲ್ಲಿ 13 ಜನರ ಮೇಲೆ ಎಫ್​ಐಆರ್ ದಾಖಲಾಗಿದೆ. ಆದರೆ, ಇದುವರೆಗೂ ಪೊಲೀಸರು ಒಬ್ಬರನ್ನು ಬಂಧಿಸಿಲ್ಲ.
ಭರ್ಜರಿ ಬಾಡೂಟಯುವತಿ ಮನೆಯವರು ಹುಡುಗನ ಮನೆಯ ಟಗರುಗಳನ್ನು ಕದ್ದೊಯ್ದು ಬಾಡೂಟ ಮಾಡಿ ತಿಂದಿದ್ದಾರೆ. ಯುವತಿ ಸಂಬಂಧಿಕರು ಇಡೀ‌ ಮನೆಯನ್ನೇ ರಣರಂಗ ಮಾಡಿದ್ದಿ, ಯುವಕನ ಮನೆಯವರು ನಿಸ್ಸಾಹಯಕ ಸ್ಥಿತಿಯಲ್ಲಿದ್ದಾರೆ.(ದಿಗ್ವಿಜಯ ನ್ಯೂಸ್​)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಉಗ್ರರ ದಾಳಿಗೂ ಜಗ್ಗದ, ಚೀನಾದ ದಾಖಲೆ ಮುರಿಯಲು ಸಜ್ಜಾಗುತಿದೆ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ

ತನ್ನ ಮನೆಯ ಬಾಗಿಲ ಬಳಿಯ ಕಾರ್ಪೆಟ್​ ಅಡಿಯಲ್ಲಿತ್ತು ರಹಸ್ಯ ಕೋಣೆ: ಒಳಹೊಕ್ಕ ಮಹಿಳೆಗೆ ಕಾದಿತ್ತು ಶಾಕ್!

ನಡುರಾತ್ರಿ ಕಾಂಗ್ರೆಸ್‌ ಶಾಸಕನ ಸೋದರಳಿಯನ ಮೇಲೆ ಗುಂಡಿನ ದಾಳಿ: ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿಯೇ ಕೊನೆಯುಸಿರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 5 =
Remember me
