ಮಂಡ್ಯ:ಕರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದ್ದರೂ, ಅಲ್ಲಲ್ಲಿ ಈ ಹಲ್ಲೆ ಪ್ರಕರಣಗಳು ನಡೆಯುತ್ತಲೇ ಇವೆ.
ಇದೀಗ ಕೆ.ಆರ್​.ಪೇಟೆ ತಾಲೂಕಿನ ಕೊಡಗಹಳ್ಳಿ ಗ್ರಮದಲ್ಲಿ ಆಶಾ ಕಾರ್ಯಕರ್ತೆಯ ಮೇಲೆ ನಾಲ್ಕೈದು ಜನ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕೊಡಗಹಳ್ಳಿಯ ಮಂಜೇಗೌಡ, ರುದ್ರೇಶ್​, ಪ್ರಿಯಾಂಕಾ, ಗೀತಾ ಮತ್ತು ನಿಖಿಲ್​ ಎಂಬುವರು ಕ್ವಾರಂಟೈನ್​ ಮುಗಿಸಿ ಮನೆಗೆ ಬಂದಿದ್ದರು. 14 ದಿನಗಳ ಕ್ವಾರಂಟೈನ್​ ಮುಗಿಸಿ ಬಂದ ಅವರಿಗೆ, ನಿಯಮಗಳನ್ನು ತಿಳಿಸಲೆಂದು ಆಶಾ ಕಾರ್ಯಕರ್ತೆ ಕೆ.ವೈ.ಶೋಭಾ ಅವರು ಹೋಗಿದ್ದರು.
ಮನೆಗೆ ಹೋದ ಶೋಭಾ, ಅವರಿಗೆ ಇನ್ನೂ ಸ್ವಲ್ಪ ದಿನ ಹೋಂ ಕ್ವಾರಂಟೈನ್​ನಲ್ಲಿರಿ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ನಿಯಮ ಪಾಲನೆ ಮಾಡಿ ಎಂದು ಹೇಳುತ್ತಿದ್ದಂತೆ ಆಕ್ರೋಶದಿಂದ, ನಿನ್ನದು ಅತಿಯಾಯ್ತು, ನಮ್ಮ ಮೇಲೆ ದೌರ್ಜನ್ಯ ಮಾಡುತ್ತೀಯಾ? ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಹೊಡೆದಿದ್ದಾರೆ. ಈ ಬಗ್ಗೆ ಶೋಭಾ ಅವರೇ ತಿಳಿಸಿದ್ದಾರೆ.
ಒಂದು ತಿಂಗಳ ಹಿಂದೆ ಅದೇ ಮನೆಯ ಇನ್ನೋರ್ವನಿಗೆ ಕ್ವಾರಂಟೈನ್​ ಸೀಲ್​ ಹಾಕಲು ಹೋದಾಗಲೂ ನಿಂದಿಸಿದ್ದರು. ಇದೀಗ ಹೊಡೆದಿದ್ದಾರೆ ಎಂದು ಶೋಭಾ ಹೇಳಿದ್ದಾರೆ.
ಹಲ್ಲೆಗೊಳಗಾದ ಶೋಭಾ ಅವರಿಗೆ ಕೆ.ಆರ್​.ಪೇಟೆ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − eleven =
Remember me
