ಬೆಂಗಳೂರು:ಮನೆ ಬಾಡಿಗೆ ಹಣ ಕೇಳಿದ್ದಕ್ಕೆ ಬಾಡಿಗೆದಾರನೊಬ್ಬ ಮಹಿಳೆಯ ಮುಖವನ್ನೇ ಕೊಯ್ದಿರುವ ಆತಂಕಕಾರಿ ಘಟನೆ ಮುನೇಶ್ವರನಗರದಲ್ಲಿ ನಡೆದಿದೆ.
ಮನೆ ಮಾಲೀಕ ಫಯಾಜ್ ಎಂಬುವರ ಮನೆಯಲ್ಲಿ ವಾಸವಾಗಿದ್ದ ಶ್ರೀದೇವಿ ಎಂಬುವರ ಮೇಲೆ ನಜೀರ್​ ಎಂಬಾತ ತನ್ನ ಮಗನೊಂದಿಗೆ ಸೇರಿ ಹಲ್ಲೆ ಮಾಡಿದ್ದಾನೆ.
ಫಯಾಜ್​ ಅವರ ಬಿಲ್ಡಿಂಗ್​ನಲ್ಲಿ ಶ್ರೀದೇವಿ ಮತ್ತು ನಜೀರ್​ ಕುಟುಂಬ ವಾಸವಿದೆ. ಫಯಾಜ್​ ವಿದೇಶದಲ್ಲಿ ಇರುವುದರಿಂದ ಬಾಡಿಗೆಯನ್ನು ಸಂಗ್ರಹಿಸುವ ಜವಬ್ದಾರಿಯನ್ನು ಶ್ರೀದೇವಿಗೆ ನೀಡಲಾಗಿತ್ತು. ಆದರೆ ಕಳೆದ ಮೂರು ತಿಂಗಳಿಂದ ನಜೀರ್, ಬಾಡಿಗೆ ನೀಡಿರಲಿಲ್ಲ. ಹೀಗಾಗಿ ಶ್ರೀದೇವಿ ಬಾಡಿಗೆ ನೀಡುವಂತೆ ಜೋರು ಧ್ವನಿಯಲ್ಲಿ ಕೇಳಿದ್ದಳು. ಈ ವಿಚಾರವನ್ನು ನಜೀರ್ ತನ್ನ ಮಗ ಸದ್ದಾಂ ಬಳಿ ಹೇಳಿದ್ದ.
ಇದನ್ನೂ ಓದಿ:ಬಡತನ ಅಳತೆಗೋಲು, ಬಹುಮುಖಿ ಆಯಾಮ: ಭಾರತದ ಬಡವರ ಸಂಖ್ಯೆಯಲ್ಲಿ 13.5 ಕೋಟಿ ಇಳಿಮುಖ
ಆಕ್ರೋಶದಿಂದ ಶ್ರೀದೇವಿ ಮನೆ ಬಳಿ ಹೋದ ಸದ್ದಾಂ, ಆಕೆಯೊಂದಿಗೆ ಕಿರಿಕ್ ಮಾಡಿ ಚಾಕುವಿನಿಂದ ಮುಖ ಹಾಗೂ ಕೈ ಕೊಯ್ದಿದ್ದಾನೆ. ಈ ಘಟನೆ ಸಂಬಂಧ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಶ್ರೀದೇವಿ ದೂರು ನೀಡಿದ್ದಾರೆ.
ಬಂಡೆಪಾಳ್ಯ ಪೊಲೀಸರು ಶ್ರೀದೇವಿ ಬಳಿ ಹಣ ಕೇಳಿರುವ ಆರೋಪ‌‌ ಕೇಳಿಬಂದಿದೆ. ಜೆರಾಕ್ಸ್ ಮಾಡಿಸಲು ಖರ್ಚಾಗುತ್ತದೆ ಅಂತ ಹೇಳಿ ಆರು ಸಾವಿರ ರೂಪಾಯಿ ಕೊಡುವಂತೆ ಬಂಡೆಪಾಳ್ಯ ಪೊಲೀಸರು ಕೇಳಿದರು ಎಂದು ಶ್ರೀದೇವಿ ಆರೋಪ ಮಾಡಿದ್ದಾರೆ. ಕೊಲೆಯತ್ನ ಪ್ರಕರಣದಲ್ಲೂ ಹಣ ಕೇಳುವ ಮಟ್ಟಕ್ಕೆ ಇಳಿದ್ರಾ ಬಂಡೆಪಾಳ್ಯ ಪೊಲೀಸರು ಎಂಬ ಪ್ರಶ್ನೆ ಉದ್ಭವವಾಗಿದೆ. ಸಾಮಾಜಿಕ ಕಾರ್ಯಕರ್ತ ವಿಜಯ್ ಜತೆ ಶ್ರೀದೇವಿ ಸಂಬಂಧಿಕ ಅರವಿಂದ್ ಮಾತಾಡಿರುವ ಆಡಿಯೋದಲ್ಲಿ ಹಣ ಕೇಳಿರುವ ಬಗ್ಗೆ ಪ್ರಸ್ತಾಪವಾಗಿದೆ.
ಅತಿಯಾಗಿ ನೀರು ಕುಡಿದ್ರೆ ಏನಾಗುತ್ತೆ? ಈಕೆಯ ದುರಂತ ಸಾವಿಗೆ ಕಾರಣ ತಿಳಿದ್ರೆ ಶಾಕ್​ ಆಗ್ತೀರಾ!

ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಯಾಕಿಲ್ಲ? ಸ್ಪಷ್ಟನೆ ನೀಡಿದ ಅಮಿತ್ ಷಾ

ಇನ್ಮುಂದೆ ಕೇರಳ ಅಂತ ಕರೆಯುವಂತಿಲ್ಲ… ರಾಜ್ಯದ ಹೆಸರು ಬದಲಾಯಿಸುವ ನಿರ್ಣಯ ಅಂಗೀಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + sixteen =
Remember me
