| ಮಧುರಾ ಭಟ್ಟ, ಬೆಂಗಳೂರು
ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಮೊದಲು ಯಾವುದೇ ತಯಾರಿ ನಡೆಸಿರಲಿಲ್ಲ. ಆದರೆ, ಇಂಜಿನಿಯರಿಂಗ್ ಮುಗಿಯುತ್ತಿರುವಂತೆ ಇನ್ನೂ ಹೆಚ್ಚು ಓದಬೇಕು ಅನಿಸಿತು. ವಿದೇಶ, ದೇಶ, ರಾಜ್ಯ, ಆರ್ಥಿಕತೆ, ಇತಿಹಾಸ, ಭೌಗೋಳಿಕ ಶಾಸ್ತ್ರ, ಅಂತಾರಾಷ್ಟ್ರೀಯ ಸಂಬಂಧ ಹೀಗೆ ಹಲವಾರು ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಸ್ಪರ್ಧಾತ್ಮಕ ಪರೀಕ್ಷೆ ಒಳ್ಳೆಯ ಮಾರ್ಗ ಅನಿಸಿತು. ಹಾಗಾಗಿ ಯುಪಿಸ್​ಸಿ ಪರೀಕ್ಷೆ ಬರೆಯಲು ನಿರ್ಧಾರ ಮಾಡಿದೆ.. ಇದು ಇತ್ತೀಚೆಗೆ ಪ್ರಕಟಗೊಂಡ ಕೇಂದ್ರ ನಾಗರಿಕ ಸೇವಾ ಪರೀಕ್ಷೆಯಲ್ಲಿ 55ನೇ ರ್ಯಾಂಕ್ ಪಡೆದು ಕರ್ನಾಟಕದ ಟಾಪರ್ ಆಗಿರುವ ಎಚ್.ಎಸ್. ಭಾವನಾ ಯಶಸ್ಸಿನ ಗುಟ್ಟು. ಪ್ರಸ್ತುತ ಭಾರತೀಯ ರೈಲ್ವೇ ಸೊಲ್ಲಾಪುರ ವಿಭಾಗದಲ್ಲಿ ಅಸಿಸ್ಟೆಂಟ್ ಆಪರೇಟಿಂಗ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಭಾವನಾ ಅವರು ವಿಜಯವಾಣಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಯುಪಿಎಸ್​ಸಿ ಕನಸುಗಾರರಿಗೆ ಗೆಲುವಿನ ದಾರಿ ತೋರಿಸಿದ್ದಾರೆ.
6ನೇ ಪ್ರಯತ್ನದಲ್ಲಿ ಯಶಸ್ವಿ:ಭಾವನಾ 2016ರಲ್ಲಿ ಮೊದಲ ಬಾರಿ ಯುಪಿಎಸ್​ಸಿ ಪರೀಕ್ಷೆ ಬರೆದಿದ್ದರು. ಐಚ್ಛಿಕವಾಗಿ ಜಿಯೋಗ್ರಫಿ ತೆಗೆದುಕೊಂಡಿದ್ದರು. ಆದರೆ, ಒಳ್ಳೆಯ ಅಂಕ ಬರಲಿಲ್ಲ. 2018ರಲ್ಲಿ ಕನ್ನಡವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು 314ನೇ ರ್ಯಾಂಕ್​ನಲ್ಲಿ ತೇರ್ಗಡೆಯಾದರು. ತನ್ಮೂಲಕ ಇಂಡಿಯನ್ ರೈಲ್ವೆ ಟ್ರಾಫಿಕ್ ಸರ್ವಿಸಸ್​ಗೆ ಆಯ್ಕೆಯಾದರು. ಅದೇ ಸಮಯದಲ್ಲಿ ಕೆಪಿಎಸ್​ಸಿ ತೇರ್ಗಡೆಯಾಗಿ ಸಂದರ್ಶನಕ್ಕೆ ಆಯ್ಕೆಯಾಗಿದ್ದರೂ, ಯುಪಿಎಸ್​ಸಿಯಲ್ಲಿ ಆಯ್ಕೆ ಕಾರಣ ಹಾಜರಾಗಲಿಲ್ಲ. ಆನಂತರವೂ ಅವರು ಯುಪಿಎಸ್​ಸಿ ಪ್ರಯತ್ನ ಮುಂದುವರಿಸಿದರೂ ಒಳ್ಳೆಯ ಅಂಕ ಬರಲಿಲ್ಲ. ಕೊನೆಗೂ 2022ರಲ್ಲಿ 6ನೇ ಪ್ರಯತ್ನದಲ್ಲಿ 55ನೇ ರ್ಯಾಂಕ್ ಒಲಿಯಿತು.
ಸಿಲಬಸ್ ಬಹಳ ಮುಖ್ಯ:ಯುಪಿಎಸ್​ಸಿ ಯಶಸ್ಸಿಗೆ ಸಿಲಬಸ್ ಅನುಸರಿಸುವುದು ಮುಖ್ಯ ಎಂದು ಭಾವನಾ ಹೇಳುತ್ತಾರೆ. ಸಿಲಬಸ್​ನಲ್ಲಿ ಇರುವ ಪ್ರತಿಯೊಂದು ವಿಷಯಕ್ಕೂ ಪುಸ್ತಕಗಳಿವೆ. ಪುಸ್ತಕ ಓದುವಾಗ ಪ್ರಮುಖ ಮಾಹಿತಿಯನ್ನು ಗುರುತು ಮಾಡುತ್ತಾ ಹೋಗಬೇಕು. ಓದಿ ಮುಗಿದ ಮೇಲೆ ಪುನರ್​ವುನನ ಮಾಡಬೇಕು. ನಂತರ ಸಿಲಬಸ್​ನಲ್ಲಿ ಇಲ್ಲದ ವಿಷಯ ಆನ್​ಲೈನ್ ಅಥವಾ ಬೇರೆ ಮೂಲಗಳಿಂದ ಪಡೆಯಬೇಕು ಎನ್ನುತ್ತಾರೆ.
ತರಬೇತಿ:ಐಚ್ಛಿಕ ವಿಷಯಕ್ಕೆ ತರಬೇತಿ ಪಡೆದುಕೊಳ್ಳಬಹುದು. ಆದರೆ, ಕಡ್ಡಾಯವೇನಲ್ಲ. ಅಲ್ಲಿ ನಮ್ಮ ಪ್ರಯತ್ನ ಮತ್ತು ಶ್ರಮವೇ ಮುಖ್ಯವಾಗುತ್ತದೆ. ಅಣಕು ಪರೀಕ್ಷೆಗೆ ಬೇಕಿದ್ದರೆ ಕೋಚಿಂಗ್ ತೆಗೆದುಕೊಳ್ಳಬಹುದು ಎನ್ನುತ್ತಾರೆ.
ಗುಂಪು ಚರ್ಚೆ:ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಗುಂಪು ಚರ್ಚೆ ಒಳ್ಳೆಯದು. ನಾನು ಬ್ಯಾಚ್​ವೆುೕಟ್ಸ್, ಸೀನಿಯರ್ಸ್ ಜತೆ ಗುಂಪು ಚರ್ಚೆ ಮಾಡುತ್ತಿದ್ದೆ. ನಾವು ಹಳೆಯ ಪ್ರಶ್ನೆಪತ್ರಿಕೆ ಇಟ್ಟುಕೊಂಡು ತಯಾರಿ ನಡೆಸುತ್ತಿದ್ದೆವು. ನಾವು ಬರೆದ ಉತ್ತರವನ್ನು ನಾವೇ ಅದಲುಬದಲು ಮಾಡಿಕೊಂಡು ಮೌಲ್ಯಮಾಪನ ಮಾಡಿಕೊಳ್ಳುತ್ತಿದ್ದೆವು. ಕೋಚಿಂಗ್​ಗಿಂತ ಇದೆ ಸಹಾಯಕವಾಯಿತು ಎನ್ನುತ್ತಾರೆ.
ಸಂದರ್ಶನ ಹೇಗೆ?:ಸಂದರ್ಶನದಲ್ಲಿ ಹೆದರಿಕೊಳ್ಳುವ ವಿಷಯವೇನೂ ಇರುವುದಿಲ್ಲ. ನನಗೆ ಫೊರೆಕ್ಸ್, ಆರ್​ಬಿಐ, ಫಾರಿನ್ ಎಕ್ಸ್​ಚೇಂಜ್, ಟ್ರೇಡ್ ರಿಲೇಷನ್, ಇಂಟರ್​ನ್ಯಾಷನಲ್ ರಿಲೇಷನ್ ಇತರ ವಿಷಯದ ಬಗ್ಗೆ ಪ್ರಶ್ನೆ ಕೇಳಿದ್ರು. ಸಂದರ್ಶನ ಎದುರಿಸುವಾಗ ಸಂವಹನ ಕೌಶಲ ಚೆನ್ನಾಗಿರಬೇಕು. ನಮಗೆ ಏನು ತಿಳಿದಿದೆಯೋ ಅದನ್ನು ಧೈರ್ಯವಾಗಿ ಹೇಳಬೇಕು. ಸಂದರ್ಶನಕ್ಕೆ ಅವಶ್ಯಕತೆ ಇದ್ದರೆ ಕೋಚಿಂಗ್ ಪಡೆಯಬಹುದು. ಅದು ನಮ್ಮಲ್ಲಿರುವ ಭಯವನ್ನು ಹೋಗಲಾಡಿಸುತ್ತದೆ.

ಶಿಕ್ಷಣ ಕ್ಷೇತ್ರದ ಪ್ರಗತಿಗೆ ಸರ್ಕಾರ ಆದ್ಯತೆ; ವಿಜಯವಾಣಿ-ದಿಗ್ವಿಜಯ ನ್ಯೂಸ್ ‘ಎಜುಕೇಷನ್ ಎಕ್ಸ್‌ಪೋ’ನಲ್ಲಿ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 1 =
Remember me
