ತಿಪಟೂರು:ತುಮಕೂರು ಜಿಲ್ಲೆ ತಿಪಟೂರು ನಗರದ ಹುಳಿಯಾರು ರಸ್ತೆಯ ಪಕ್ಕದಲ್ಲಿರುವ ಮಂಜುನಾಥ್ ನಗರದಲ್ಲಿ ಎರಡು ತಲೆ ಹಾವು ಮಾರಾಟಕ್ಕೆ ಯತ್ನಿಸಿದ ಪಿಡಿಒ ಸೇರಿ ಮೂವರನ್ನು ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಜನರಲ್ಲಿನ ಮೂಢನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡ ಆರೋಪಿಗಳು, ಎರಡು ತಲೆ ಹಾವಿನಿಂದ ಐಶ್ವರ್ಯ ವೃದ್ಧಿಸುತ್ತದೆ. ಈ ಹಾವು ಕೋಟ್ಯಂತರ ಬೆಲೆ ಬಾಳುತ್ತದೆ ಎಂದು ಸುಳ್ಳು ಹೇಳಿ ಜನರನ್ನು ವಂಚಿಸಲು ಯತ್ನಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅಧಿಕಾರಿಗಳು ಮೂವರನ್ನೂ ಬಂಧಿಸಿ, ಹಾವನ್ನು ವಶಕ್ಕೆ ಪಡೆದಿದ್ದಾರೆ.
ನಾಗರಘಟ್ಟ ಗ್ರಾಮ ಪಂಚಾಯಿತಿ ಪಿಡಿಒ ಕಾಂತರಾಜು ಹಾಗೂ ಸಹಚರರಾದ ಚಿಕ್ಕನಾಯಕನಹಳ್ಳಿ ತಾಲೂಕಿನ ಯಗಚೀಹಳ್ಳಿ ಗ್ರಾಮದ ಶೇಕ್​ ಹುಸೇನ್​, ಮೊಹ್ಮದ್​ ಆರೀಫ್​ ಎಂಬುವವರನ್ನು ಸೋಮವಾರ ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಬೈಕ್​ ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಎಸಿಎಫ್​ ಸುಬ್ಬರಾವ್​ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರ್​ಎಫ್​ಒ ಜಗದೀಶ್​, ಡಿಆರ್​ಎಫ್​ಒ ಶಿವಕುಮಾರ್​, ಸಿಬ್ಬಂದಿ ತೇಜಸ್​ ಕುಮಾರ್​, ಚೌಡಪ್ಪ, ಚಾಲಕ ಮಂಜುನಾಥ್​, ಅರುಣ್​ ಕುಮಾರ್​, ದಿವಾಕರ್​ ಇದ್ದರು.
ಶಿವಮೊಗ್ಗದ ಹರ್ಷನ ಮನೆಗೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಭೇಟಿ: ಹರ್ಷನ ಸಾವು ವ್ಯರ್ಥವಾಗಲು ಬಿಡಲ್ಲ…

ಹೊಸ ವರ್ಷಕ್ಕೆ ಟೈಟ್ ರೂಲ್ಸ್: ಮತ್ತೆ ಮಾಸ್ಕ್ ಕಡ್ಡಾಯ; ಸಂಭ್ರಮಾಚರಣೆಗೆ ಮಾರ್ಗಸೂಚಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 2 =
Remember me
