|ವಿಲಾಸ ಮೇಲಗಿರಿಬೆಂಗಳೂರು
ಅವಧಿ ಮುಗಿದ ಸಹಕಾರ ಸಂಘಗಳಿಗೆ ಚುನಾವಣೆ ನಡೆಸುವ ಬದಲು ಅನ್ಯ ಮಾರ್ಗದಿಂದ ಮರುಜೀವ ಕೊಡಲು ಸರ್ಕಾರ ಮುಂದಾಗಿದೆ. ಆ ಮೂಲಕ ಸಂವಿಧಾನ ಮತ್ತು ಸಹಕಾರ ಕಾಯ್ದೆಯ ಆಶಯಗಳನ್ನು ಬದಿಗೊತ್ತಿ ಪಟ್ಟಭದ್ರ ಹಿತಾಸಕ್ತಿಗಳನ್ನು ರಕ್ಷಿಸುತ್ತಿರುವ ಆರೋಪ ಕೇಳಿಬಂದಿದೆ. ರಾಜ್ಯದಲ್ಲಿ ಸುಮಾರು 36,000 ವಿವಿಧ ಸಹಕಾರ ಸಂಘಗಳಿದ್ದು ಲಕ್ಷಾಂತರ ಸದಸ್ಯರಿದ್ದಾರೆ. ಗ್ರಾಮೀಣ ಪ್ರದೇಶದ ಜನರ ಆಗು-ಹೋಗುಗಳಿಗೆ ಈ ಸಂಘಗಳು ಸಹಕಾರಿಯಾಗಿವೆ. ಕರೊನಾ ಕಾರಣದಿಂದ ಚುನಾವಣೆ ನಡೆಸಲು ಸಾಧ್ಯವಾಗದ ಕಾರಣಕ್ಕೆ ಸುಮಾರು 4 ಸಾವಿರ ಸಹಕಾರ ಸಂಘಗಳ ಚುನಾವಣೆಯನ್ನು ಡಿಸೆಂಬರ್​ವರೆಗೆ ಮುಂದೂಡಿ ಆಡಳಿತಾಧಿಕಾರಿ ನೇಮಿಸಲಾಗಿತ್ತು. ಆದರೆ, ಸರ್ಕಾರ ಈಗ ಏಕಾಏಕಿ ಆಡಳಿತಾಧಿಕಾರಿಯನ್ನು ಹಿಂಪಡೆದು ಹಿಂದಿದ್ದ ಆಡಳಿತ ಮಂಡಳಿಯನ್ನೇ ಮುಂದು ವರಿಸುವ ಸಲುವಾಗಿ ಕಾಯ್ದೆಗೆ ವಿನಾಯಿತಿ ನೀಡುವ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ತರಲು ತುದಿಗಾಲ ಮೇಲೆ ನಿಂತಿದೆ. ಮುಂಬರುವ ಸಂಪುಟ ಸಭೆಯಲ್ಲೇ ಈ ಕುರಿತು ನಿರ್ಣಯ ಕೈಗೊಳ್ಳುವ ಸಾಧ್ಯತೆಗಳಿವೆ.
ಕಾಯ್ದೆಗೆ ಕೊಡಲಿ ಏಟು:ಸಹಕಾರ ಸಂಘಗಳು ಮೂರು ಹಂತದಲ್ಲಿ ಕಾರ್ಯ ನಿರ್ವಹಿಸುತ್ತವೆ. ಪ್ರಾಥಮಿಕ ಸಹಕಾರ ಸಂಘಗಳು, ಅಲ್ಲಿಂದ ತಾಲೂಕು/ಜಿಲ್ಲಾ ಹಂತದ ಸಂಘಗಳು ತರುವಾಯ ರಾಜ್ಯ ಮಟ್ಟದ ಒಕ್ಕೂಟಗಳ ಮಾದರಿಯಲ್ಲಿ ಕಾರ್ಯಾಚರಣೆ ಮಾಡುತ್ತವೆ. ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1960 ಕಲಂ 18ಬಿ/1 ಪ್ರಕಾರ ಆಡಳಿತ ಮಂಡಳಿಗಳ ಅವಧಿ ಮುಗಿದ ಕೂಡಲೇ ಸದಸ್ಯತ್ವ ತನ್ನಿಂದ ತಾನೇ ಸಮಾಪನಗೊಳ್ಳುತ್ತದೆ. ಹೀಗಾಗಿ ಆಡಳಿತಾವಧಿ ಮುಗಿಯುವ 6 ಆರು ತಿಂಗಳ ಮೊದಲೇ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಚುನಾವಣೆ ನಡೆಸಲು ಸಾಧ್ಯವಿಲ್ಲದೇ ಇದ್ದಾಗ ಆಡಳಿತಾಧಿಕಾರಿ ನೇಮಿಸಬೇಕಾಗುತ್ತದೆ. ಆಡಳಿತ ಮಂಡಳಿಗಳ ಪ್ರೖೆಮರಿ ಹಂತದ ನಿರ್ದೇಶಕ ಸ್ಥಾನ ಅಂತ್ಯಗೊಂಡರೆ ಎರಡು ಮತ್ತು ಮೂರನೇ ಹಂತದಲ್ಲಿ ಇದ್ದ ಅಧಿಕಾರವೂ ತನ್ನಿಂದ ತಾನೇ ಸಮಾಪನಗೊಳ್ಳುತ್ತದೆ. ಆದರೆ, ಮೇಲ್ಮಟ್ಟದ ಸಹಕಾರ ಸಂಘಗಳಲ್ಲಿ ಅಧಿಕಾರದಲ್ಲಿರುವವರ ಹಿತಕಾಯಲು ಸರ್ಕಾರ ಸಹಕಾರ ತತ್ವದ ಮೂಲ ಆಶಯಗಳನ್ನೇ ಬುಡಮೇಲು ಮಾಡಲು ಹೊರಟಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಕೈಬಿಟ್ಟರೂ ನಷ್ಟವೇನಿಲ್ಲ:ಸೆಕೆಂಡರಿ ಹಂತದ ನಿರ್ದೇಶಕ ಸ್ಥಾನ ರದ್ದುಗೊಂಡರೂ ಸಹಕಾರ ಸಂಘ/ಬ್ಯಾಂಕ್​ಗಳ ಆಡಳಿತ ನಿರ್ವಹಣೆಗೇನೂ ಬಾಧಕವಾಗುವುದಿಲ್ಲ. ಪರ್ಯಾಯ ಮಾರ್ಗಗಳ ಮೂಲಕ ಸ್ಥಾನ ಭರ್ತಿ ಮಾಡಿಕೊಂಡು ನಿರ್ವಹಣೆ ಮಾಡುವ ವ್ಯವಸ್ಥೆ ರೂಢಿಯಲ್ಲಿದೆ. ಹಾಗಾಗಿ ಸರ್ಕಾರ ಅವಧಿ ಪೂರ್ಣಗೊಂಡ ಸಂಘಗಳಿಗೆ ಮರುಜೀವ ಕೊಡಲು ಮುಂದಾಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಅವಧಿ ಪೂರ್ಣಗೊಂಡ ಸಹಕಾರ ಸಂಘಗಳ ಆಡಳಿತ ಮಂಡಳಿಗಳನ್ನು ಮುಂದುವರಿಸುವ ಬಗ್ಗೆ ಇಲಾಖೆ ಮಟ್ಟದಲ್ಲಿ ನಡೆಯುತ್ತಿರುವ ಪ್ರಕ್ರಿಯೆ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ಸಹಕಾರ ಸಂಘಗಳ ಆಡಳಿತ ಮಂಡಳಿಗಳಿಂದ ಮನವಿ ಬಂದರೆ ಪರಿಶೀಲಿಸಲಾಗುವುದು.
|ಎಸ್.ಟಿ.ಸೋಮಶೇಖರ್ಸಹಕಾರ ಸಚಿವ
ಪ್ರಾಧಿಕಾರದ ಪಾತ್ರವೇನು?:ಸಹಕಾರ ಸಂಘಗಳ ಚುನಾವಣೆಗಳು ಸಹಕಾರ ಚುನಾವಣಾ ಪ್ರಾಧಿಕಾರದ ವ್ಯಾಪ್ತಿಗೆ ಬರುತ್ತವೆ. ಕೋವಿಡ್ ಸಂದರ್ಭದಲ್ಲೂ ಲಕ್ಷಾಂತರ ಮತದಾರರನ್ನು ಹೊಂದಿರುವ ವಿಧಾನಸಭೆ, ಲೋಕಸಭೆ ಚುನಾವಣೆಯನ್ನು ನಡೆಸಲಾಗಿದೆ. 8-10 ಲಕ್ಷ ಮಕ್ಕಳಿರುವ ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆ ನಡೆಸಿ ಸರ್ಕಾರ ಬೆನ್ನು ತಟ್ಟಿಕೊಂಡಿದೆ. ಹೀಗಿರುವಾಗ ಸಾವಿರ ಸಂಖ್ಯೆಯಲ್ಲಿರುವ ಸಹಕಾರ ಸಂಘಗಳ ಚುನಾವಣೆಯನ್ನು ಕೋವಿಡ್ ಮಾರ್ಗಸೂಚಿ ಪಾಲಿಸಿ ಮಾಡಬಹುದಲ್ಲವೇ ಎಂಬ ವಿಷಯವೂ ಸಹಕಾರ ವಲಯದಲ್ಲಿ ಚರ್ಚೆಯ ಮುನ್ನೆಲೆಯಲ್ಲಿದೆ.
ಅವಧಿ ಅಂತ್ಯಗೊಂಡ ಸಹಕಾರ ಸಂಘಗಳ ಆಡಳಿತ ಮಂಡಳಿಯನ್ನು ಮುಂದುವರಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದ್ದೇ ಆದಲ್ಲಿ ಅದು ಸಹಕಾರ ವ್ಯವಸ್ಥೆಗೆ ಮಾರಕವಾಗುತ್ತದೆ. ಸರ್ಕಾರ ಇಂತಹ ಪ್ರಯತ್ನದಿಂದ ಹಿಂದೆ ಸರಿದು ಶೀಘ್ರವೇ ಚುನಾವಣೆ ನಡೆಸಬೇಕು.
|ರಮೇಶ್ ಬಾಬುವಿಧಾನ ಪರಿಷತ್ ಮಾಜಿ ಸದಸ್ಯ
ಜಿಪಂ/ತಾಪಂಗೆ ವಿನಾಯಿತಿ ಅನ್ವಯಿಸದೆ?:ಕೋವಿಡ್ ನೆಪದಲ್ಲಿ ಅವಧಿ ಮುಗಿದ ಸಹಕಾರ ಸಂಘಗಳಿಗೆ ಕಾಯ್ದೆ ವಿನಾಯಿತಿ ನೀಡಿ ಹಿಂದಿದ್ದ ಆಡಳಿತ ಮಂಡಳಿಯನ್ನೇ ಮುಂದುವರಿಸುವುದಾದಲ್ಲಿ ತಾಲೂಕು/ಜಿಲ್ಲಾ ಪಂಚಾಯಿತಿ ಅವಧಿ ಕೂಡ ಮುಗಿದಿದ್ದು, ಚುನಾವಣೆ ಮುಂದೂಡಲಾಗಿದೆ. ಅವುಗಳಿಗೂ ಅದೇ ನಿಯಮ ಅನ್ವಯಿಸಬಹುದಲ್ಲವೇ ಎಂಬ ಪ್ರಶ್ನೆಯನ್ನೂ ಸಹಕಾರಿಗಳು ಕೇಳುತ್ತಾರೆ.
ದುರ್ಬಳಕೆ ಆರೋಪ:ಈಗಾಗಲೇ ಅನೇಕ ಸಹಕಾರ ಬ್ಯಾಂಕುಗಳು, ಸಹಕಾರ ಸಕ್ಕರೆ ಕಾರ್ಖಾನೆಗಳ ಬಗ್ಗೆ ಗಂಭೀರ ಆರೋಪಗಳಿವೆ. ಕೆಲವು ಬ್ಯಾಂಕ್​ಗಳು ಸಾಮಾನ್ಯ ಜನರ ಹಣ ಕೊಳ್ಳೆ ಹೊಡೆದು ದೊಡ್ಡ ಸುದ್ದಿಮಾಡಿವೆ. ಇಂತಹ ಸಂದರ್ಭದಲ್ಲಿ ಅವಧಿ ಮುಗಿದ ನಿರ್ದೇಶಕ ಸ್ಥಾನಗಳನ್ನು ಮುಂದುವರಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಚಿತ್ರನಟಿಗೆ ಮನೆಯಲ್ಲೇ ತಾಳಿ ಕಟ್ಟಿ ಗಂಡನಂತೆ ನಟಿಸಿದ; ಬಳಿಕ ನಗ-ನಗದಿನೊಂದಿಗೆ ಪರಾರಿಯಾದ ರೌಡಿಯ ಅಣ್ಣ..

ಆಟ ಆಡ್ತ ಆಡ್ತ ಸತ್ತು ಹೋದ ಬಾಲಕಿ: ಶಾಲೆ ತೆರೆದಿಲ್ಲ, ಮಕ್ಕಳು ಮನೇಲೇ ಇದ್ದಾರೆ ಅಂತಾದರೆ ಯಾವುದಕ್ಕೂ ಹುಷಾರಾಗಿರಿ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 19 =
Remember me
