ಬೆಂಗಳೂರು:ಬೇರೊಬ್ಬ ಮಹಿಳೆ ಜತೆ ಅನೈತಿಕ ಸಂಬಂಧ ಬೆಳೆಸಿರುವ ಬಗ್ಗೆ ಗಲಾಟೆ ಮಾಡಿದ್ದಕ್ಕೆ ಕೋಪಗೊಂಡು  ಮಹಿಳೆಯನ್ನು ನೇಣು ಬಿಗಿದು ಹತ್ಯೆ ಮಾಡಿದ ಆರೋಪದ ಮೇಲೆ ಆಟೋ ಚಾಲಕನನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ.
ಕುರುಬರಹಳ್ಳಿ ನಿವಾಸಿ ಗಣೇಶ್ ಬಂಧಿತ. 2 ದಿನಗಳ ಹಿಂದೆ ತನ್ನ ಮನೆಯಲ್ಲಿ ಅಕ್ರಮ ಸಂಬಂಧ ಹೊಂದಿದ್ದ ಶರಗುಣಂ (35) ಎಂಬಾಕೆಯನ್ನು ನೇಣು ಬಿಗಿದು ಗಣೇಶ್ ಹತ್ಯೆಗೆ ಯತ್ನಿಸಿದ್ದ. ಕೊನೆಗೆ ತಾನೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದ. ಚಿಕಿತ್ಸೆ ಫಲಿಸದೆ ಮಹಿಳೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ನಿಮ್ಮಿಂದ ನಾವಿದನ್ನು ನಿರೀಕ್ಷಿಸಿರಲಿಲ್ಲ ಎಂದವರಿಗೆ ಪ್ರಧಾನಿ ಜತೆಗಿನ ಫೋಟೋ ಶೇರ್​ ಮಾಡಿ ನವ್ಯಾ ತಿರುಗೇಟು!
ತಮಿಳುನಾಡು ಮೂಲದ ಶರಗುಣಂ, ಕುರುಬರಹಳ್ಳಿಯ ಜೆ.ಸಿ.ನಗರದ ಕಾಲನಿಯಲ್ಲಿ ತನ್ನ ಪತಿ ಸಿ. ಶಿವಕುಮಾರ್ ಮತ್ತು ಇಬ್ಬರು ಮಕ್ಕಳ ಜತೆ ನೆಲೆಸಿದ್ದಳು. ಪತಿ ಟೈಲ್ಸ್ ಹಾಕುವ ಮೆಸಿ ಆಗಿದ್ದಾನೆ. ಆಕೆ ಮನೆಗೆಲಸ ಮಾಡುತ್ತಿದ್ದಳು. 5 ವರ್ಷಗಳ ಹಿಂದೆ ತಮಿಳುನಾಡು ಮೂಲದ ಗಣೇಶ್ ಪರಿಚಯವಾಗಿ ಇಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು.ಗೆಳೆಯನಿಗೆ ಆಟೋ ಕೊಡಿಸಿದ್ದಲ್ಲದೆ ತನ್ನ ಮನೆ ಸಮೀಪ ಬಾಡಿಗೆ ಮನೆಯನ್ನು ಮಾಡಿಕೊಟ್ಟಿದ್ದಳು. ಇತ್ತೀಚಿಗೆ ಗೆಳೆಯನ ಚಾರಿತ್ರೃದ ಮೇಲೆ ಅನುಮಾನಗೊಂಡಿದ್ದ ಶರಗುಣಂ, ಬೇರೊಬ್ಬಳ ಜತೆ ನಿನಗೆ ಅನೈತಿಕ ಸ್ನೇಹವಿದೆ ಎಂದು ಪ್ರಶ್ನಿಸಿ ಗಲಾಟೆ ಮಾಡುತ್ತಿದ್ದಳು.
ಇದನ್ನೂ ಓದಿ:ಬೆಂಗಳೂರಿನಲ್ಲಿ ಬ್ಯಾಚುಲರ್ಸ್​​ಗೆ ಯಾಕೆ ಬಾಡಿಗೆಗೆ ಮನೆ ಕೊಡಲ್ಲ?:ಈ ಸುದ್ದಿ ಓದಿ…
ಇದನ್ನು ತಿಳಿದ ಶರಗುಣಂ ಪತಿ, ಆಟೋ ಚಾಲಕ ಗಣೇಶ್ ಜತೆಗಿನ ಸ್ನೇಹವನ್ನು ಬಿಡುವಂತೆ ಪತ್ನಿಗೆ ತಾಕೀತು ಮಾಡಿದ್ದ. ಆದರೂ ಶರಗುಣಂ, ಅನೈತಿಕ ಸಂಬಂಧ ಮುಂದುವರಿಸಿದ್ದಳು. ಏ.25ರಂದು ಎಂದಿನಂತೆ ಕೆಲಸ ನಿಮಿತ್ತ ಮನೆಯಿಂದ ಪತಿ ಹೊರಹೋದ ಬಳಿಕ ಶರಗುಣಂ, ಮಧ್ಯಾಹ್ನ ತನ್ನ ಗೆಳೆಯನ ಮನೆಗೆ ಹೋಗಿದ್ದಾಳೆ. ಪರಸ್ತ್ರೀ ಜತೆಗಿನ ಗೆಳೆತನ ವಿಚಾರ ಪ್ರಸ್ತಾಪಿಸಿ ಗಣೇಶ್ ಜತೆ ಜಗಳ ಮಾಡಿದ್ದಳು. ಅಲ್ಲದೆ, ಆಟೋ ಖರೀದಿಗೆ ಕೊಟ್ಟಿದ್ದ ಹಣವನ್ನು ವಾಪಸ್ ಕೊಡುವಂತೆ ಒತ್ತಾಯ ಮಾಡಿದ್ದಳು. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು.
ಇದನ್ನೂ ಓದಿ:ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದ ಲಿಂಗಾಯತ ಸಮುದಾಯ!; ಮಾನ ನಷ್ಟ ಮೊಕದ್ದಮೆ ಹೂಡುವುದಾಗಿ ಟ್ರಸ್ಟ್ ನಿಂದ ಎಚ್ಚರಿಕೆಬೇಸತ್ತು ಗೆಳೆಯನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದಳು. ಗೆಳೆತಿಯನ್ನು ರಕ್ಷಣೆ ಮಾಡದೆ ಗಣೇಶ್, ಆಕೆಯ ಕುತ್ತಿಗೆಗೆ ಹಗ್ಗ ಬಿಗಿದಿದ್ದಾನೆ. ಭಯಗೊಂಡು ಆಕೆಯನ್ನು ನೇಣಿನ ಕುಣಿಕೆಯಿಂದ ಕೆಳಗಿಳಿಸಿ ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಿದ್ದ. ಚಿಕಿತ್ಸೆ ಫಲಿಸದೆ ಶರಗುಣಂ ಮೃತಪಟ್ಟಿದ್ದಾಳೆ. ಈತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದ ಲಿಂಗಾಯತ ಸಮುದಾಯ!; ಮಾನ ನಷ್ಟ ಮೊಕದ್ದಮೆ ಹೂಡುವುದಾಗಿ ಟ್ರಸ್ಟ್ ನಿಂದ ಎಚ್ಚರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
