ಬೆಂಗಳೂರು:ಓಲಾ ಆಟೋ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಕ್ಕೆ ಯುವತಿಗೆ ನಿಂದಿಸಿದ ಕಾರಣಕ್ಕೆ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಆಟೋ ಚಾಲಕ ಜಾಮೀನಿಗೆ ಹಣ ಹೊಂದಿಸಲು ಪರದಾಡುತ್ತಿದ್ದಾನೆ.
ಇತ್ತೀಚೆಗೆ ಮುತ್ತುರಾಜ್ ಎಂಬ ಆಟೋ ಚಾಲಕ, ಓಲಾ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದಕ್ಕೆ ಅವಾಚ್ಯ ಶಬ್ಧದಿಂದ ನಿಂದಿಸಿ ಯುವತಿಯ ಕಪ್ಪಾಳಕೆ ಹೊಡೆದಿದ್ದ ಘಟನೆ ರಾಜ್​ಕುಮಾರ್ ರಸ್ತೆಯಲ್ಲಿ ನಡೆದಿತ್ತು. ಅಲ್ಲದೆ, ಚಾಲಕ, ಯುವತಿಗೆ ನಿಂದಿಸಿದ ವಿಡಿಯೋ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಘಟನೆಯ ಬಳಿಕ ಪೊಲೀಸರು ಯುವತಿಯನ್ನು ಕರೆಸಿ ದೂರು ಪಡೆದಿದ್ದರು.
ದೂರು ದಾಖಲಾದ ಬೆನ್ನಲ್ಲೇ ಸೆ. 5ರಂದು ಆಟೋ ಚಾಲಕನನ್ನು ಮಾಗಡಿ‌ ರಸ್ತೆ ಸಂಚಾರ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಆಟೋ ಚಾಲಕ ಮುತ್ತುರಾಜ್​ ಒಂದು ರೈಡ್​ಗಾಗಿ ಜಗಳ ಮಾಡಿ ಈಗ ಫಜೀತಿಗೆ ಸಿಲುಕಿದ್ದಾರೆ.
ಬುಕ್ಕಿಂಗ್​ ಕ್ಯಾನ್ಸಲ್ ಮಾಡಿದರೆ 20 ರಿಂದ 30 ರೂ. ಅಷ್ಟೇ ನಷ್ಟವಾಗುತ್ತಿತ್ತು. ಆದರೀಗ ಲಾಯರ್ ಖರ್ಚು ಸೇರಿ ಜಾಮೀನಿನ ಪ್ರಕ್ರಿಯೆಗೆ ಅಂದಾಜು 30 ಸಾವಿರ ಹೊಂದಿಸಬೇಕಾಗಿದೆ. ಆದರೆ ಈಗ 30 ಸಾವಿರ ರೂ. ಹೊಂದಿಸಲು ಸಾಧ್ಯವಾಗದೆ ಪೀಕಲಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಹುಟ್ಟುಹಬ್ಬದಂದು ಹಸೆಮಣೆ ಏರಲು ಸಜ್ಜಾದ ಸ್ಯಾಂಡಲ್​ವುಡ್​ ಕ್ವೀನ್​!? ರಮ್ಯಾ ಕೈಹಿಡಿಯುವ ವರನ್ಯಾರು ಗೊತ್ತೇ?

ಭೂಗಳ್ಳರಿಗೆ ಕಾನೂನೇ ಕವಚ! ಸಬ್ ರಿಜಿಸ್ಟ್ರಾರ್​ಗಿಲ್ಲ ಪರಿಶೀಲನೆ, ನೋಂದಣಿ ರದ್ದತಿಯ ಪವರ್

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 + fifteen =
Remember me
