ಬೆಂಗಳೂರು:ಕರೊನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಘೋಷಿಸಿರುವ 5 ಸಾವಿರ ರೂ. ನೆರವು ಪಡೆಯಲು ಆಟೋ, ಟ್ಯಾಕ್ಸಿ ಚಾಲಕರು, ಚಾಲನಾ ಪತ್ರ, ಆಧಾರ್, ಬ್ಯಾಂಕ್ ಖಾತೆ ವಿವರ ನೀಡಿದರೆ ಸಾಕು ಎಂದು ಸಾರಿಗೆ ಸಚಿವರೂ ಆದ ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ.ವಿಕಾಸಸೌಧದಲ್ಲಿ ಗುರುವಾರ ಸಾರಿಗೆ ಆಯುಕ್ತ ಶಿವಕುಮಾರ್, ಕೆಪಿಸಿಸಿ ನಾಯಕರು ಹಾಗೂ ಚಾಲಕರ ಒಕ್ಕೂಟದ ಪದಾಧಿಕಾರಿಗಳ ಜತೆ ನಡೆದ ಸಭೆಯಲ್ಲಿ ಲಕ್ಷ್ಮಣ ಸವದಿ ಈ ವಿಷಯ ತಿಳಿಸಿದರು.ಇದನ್ನೂ ಓದಿ:VIDEO |ದೇವಾಲಯಗಳಲ್ಲಿ ಪೂಜೆ ನಡೆಯದಿದ್ದರೆ ಭೀಕರ ಪರಿಣಾಮ: ಬ್ರಹ್ಮಾಂಡ ಗುರೂಜಿಪ್ಯಾನ್ ಕಾರ್ಡ್, ಫಿಟ್‌ನೆಸ್ ಸರ್ಟಿಫಿಕೇಟ್‌ಗಳನ್ನು ಚಾಲಕರು ಸಲ್ಲಿಸುವ ಅವಶ್ಯಕತೆ ಇಲ್ಲ. ಇವುಗಳನ್ನು ಸಲ್ಲಿಸುವಂತೆ ಯಾವುದೇ ಚಾಲಕರಿಗೆ ತಾಕೀತು ಮಾಡುವಂತಿಲ್ಲ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.ಚಾಲಕರು ಸಂಕಷ್ಟದಲ್ಲಿರುವುದನ್ನು ಕಂಡು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆಟೋ ಮತ್ತು ಕ್ಯಾಬ್ ಚಾಲಕರಿಗೆ 5000 ಸಾವಿರ ರೂ. ಹಣವನ್ನು ಪರಿಹಾರವಾಗಿ ನೀಡಲು ಆದೇಶಿಸಿದ್ದರು. ಅದನ್ನು ಪಡೆಯುವಾಗ ಚಾಲಕರು ಸೇವಾ ಸಿಂಧು ಆ್ಯಪ್‌ನಲ್ಲಿ ಪ್ಯಾನ್, ಫಿಟ್‌ನೆಸ್ ಸರ್ಟಿಫಿಕೇಟ್, ಆಧಾರ್, ಚಾಲನಾ ಪರವಾನಗಿ, ಬ್ಯಾಂಕ್ ಖಾತೆ ವಿವರ ಸಲ್ಲಿಸುವುದು ಕಡ್ಡಾಯ ಎಂದು ಅಧಿಕಾರಿಗಳು ನಿಯಮ ಮಾಡಿದ್ದರು.ಇದನ್ನೂ ಓದಿ:ಕ್ವಾರಂಟೈನ್​ ಗೋಲ್​ಮಾಲ್​? ಒಳ್ಳೆ ಸೌಲಭ್ಯ ಮಾತ್ರ ಕೇಳ್ಲೇಬೇಡಿ, ದುಡ್ಡು ಕೊಟ್ರೆ ಹೊರಗಡೆ ಆರಾಮಾಗಿ ಹೋಗಿ…ಆದರೆ ಬಹುತೇಕ ಚಾಲಕರ ಬಳಿ ಪ್ಯಾನ್ ಕಾರ್ಡ್ ಇರುವುದಿಲ್ಲ. ಕೆಲವು ವಾಹನಗಳಿಗೆ ಫಿಟ್‌ನೆಸ್ ಸರ್ಟಿಫಿಕೇಟ್ ಕೂಡ ಅಪ್‌ಡೇಟ್ ಆಗಿರುವುದಿಲ್ಲ. ಹಾಗಾಗಿ ಇವುಗಳನ್ನು ಸಲ್ಲಿಸಬೇಕೆಂಬ ನಿಯಮ ಕೈಬಿಡಬೇಕೆಂದು ಚಾಲಕರ ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿತ್ತು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − two =
Remember me
