ಬೆಂಗಳೂರು:ರಾಜ್ಯ ರಾಜಕಾರಣದಲ್ಲಿ ಚುನಾವಣೆಯ ಕಾವು ರಂಗೇರುತ್ತಿದೆ. ಈಗಾಗಲೇ ಎಲ್ಲಾ ಪಕ್ಷಗಳು ರಾಜ್ಯದಾದ್ಯಂತ ಪ್ರಚಾರ ಕಾರ್ಯ ಆರಂಭಿಸಿವೆ. ಹೊಸ ಹೊಸ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ಧೇಶದಿಂದ ಕ್ಷೇತ್ರದಲ್ಲಿ ನಿರಂತರ ಓಡಾಟ ನಡೆಸುತ್ತಿದ್ದಾರೆ. ಇದೆಲ್ಲದರ ನಡುವೆ ಜನರಿಗೆ ಕುತೂಹಲ ಕೆರಳಿಸಿರುವುದು ನಟ ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷ. ಇದೀಗ ಪ್ರಜಾಕೀಯ ಪಕ್ಷಕ್ಕೆ ಆಟೋ ರಿಕ್ಷಾ ಚಿಹ್ನೆ ಲಭಿಸಿದೆ.
ನಾಯಕತ್ವ, ಜವಾಬ್ಧಾರಿ ವಹಿಸಿಕೊಳ್ಳಲು ರೆಡಿ ಇರುವ ಮತದಾರರ ಪಕ್ಷದ ಚಿಹ್ನೆ ಆಟೋರಿಕ್ಷಾ….ಇಲ್ಲಿ ಸ್ಪರ್ಧಿಸುತ್ತಿರುವವರಿಂದ ನೀವು ಕೆಲಸ ಮಾಡಿಸುತ್ತೀರಿ ಎಂಬ ತನ್ನಂಬಿಕೆ ನಿಮಗಿದ್ದರೆ ಮಾತ್ರ ಪ್ರಜಾಕೀಯಕ್ಕೆ ಮತ ನೀಡಿ…pic.twitter.com/KJz5ItuwlW— Upendra (@nimmaupendra)February 24, 2023
ನಾಯಕತ್ವ, ಜವಾಬ್ಧಾರಿ ವಹಿಸಿಕೊಳ್ಳಲು ರೆಡಿ ಇರುವ ಮತದಾರರ ಪಕ್ಷದ ಚಿಹ್ನೆ ಆಟೋರಿಕ್ಷಾ….ಇಲ್ಲಿ ಸ್ಪರ್ಧಿಸುತ್ತಿರುವವರಿಂದ ನೀವು ಕೆಲಸ ಮಾಡಿಸುತ್ತೀರಿ ಎಂಬ ತನ್ನಂಬಿಕೆ ನಿಮಗಿದ್ದರೆ ಮಾತ್ರ ಪ್ರಜಾಕೀಯಕ್ಕೆ ಮತ ನೀಡಿ…pic.twitter.com/KJz5ItuwlW
ಈ ಕುರಿತು ಚುನಾವಣಾ ಆಯೋಗ ಆದೇಶ ಹೊರಡಿಸಿದ್ದು, ತಮ್ಮ ಪಕ್ಷದ ಚಿಹ್ನೆಯನ್ನು ನಟ ಉಪೇಂದ್ರ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. “ನಾಯಕತ್ವ, ಜವಾಬ್ಧಾರಿ ವಹಿಸಿಕೊಳ್ಳಲು ತಯಾರಿರುವ ಮತದಾರರ ಪಕ್ಷದ ಚಿಹ್ನೆ ಆಟೋರಿಕ್ಷಾ… ಇಲ್ಲಿ ಸ್ಪರ್ಧಿಸುತ್ತಿರುವವರಿಂದ ನೀವು ಕೆಲಸ ಮಾಡಿಸುತ್ತೀರಿ ಎಂಬ ನಂಬಿಕೆ ನಿಮಗಿದ್ದರೆ ಮಾತ್ರ ಪ್ರಜಾಕೀಯಕ್ಕೆ ಮತ ನೀಡಿ” ಎಂದು ಉಪೇಂದ್ರ ಬರೆದುಕೊಂಡಿದ್ದಾರೆ.ಇದನ್ನೂ ಓದಿ:ಪಕ್ಷ ಕಟ್ಟುವಾಗ ನಾನೊಬ್ಬನೇ ಇದ್ದೆ; ಆರ್​ಎಸ್​ಎಸ್​ ಕಾರಣದಿಂದ ಇಷ್ಟು ಎತ್ತರಕ್ಕೇರಿದ್ದೇನೆ ಎಂದ ಬಿಎಸ್​​ವೈ
ಉಪೇಂದ್ರ ಅವರು ಉತ್ತಮ ಪ್ರಜಾಕೀಯ ಪಕ್ಷವನ್ನು 2018ರ ಸೆಪ್ಟೆಂಬರ್‌ 18ರಂದು ಪ್ರಾರಂಭಿಸಿದ್ದರು. ಇದಕ್ಕೂ ಮುನ್ನ 2013ರ ವಿಧಾನಸಭಾ ಚುನಾವಣೆಯಲ್ಲಿ ಉಪೇಂದ್ರ ಅವರು ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ (ಕೆಪಿಜೆಪಿ) ಮೂಲಕ ರಾಜಕೀಯ ಪ್ರವೇಶಿಸಿದ್ದರು. ಬಳಿಕ 2018ರಲ್ಲಿ ತಮ್ಮ ಜನ್ಮದಿನದಂದು ಉಪೇಂದ್ರ, ಉತ್ತಮ ಪ್ರಜಾಕೀಯ ಪಕ್ಷ ಎಂಬ ಹೊಸ ಪಕ್ಷವನ್ನು ಅಧಿಕೃತವಾಗಿ ಘೋಷಿಸಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
