ಬೆಂಗಳೂರು:ಮಳೆಗಾಲದಲ್ಲಿ ಸೋಂಕಿನ ಭಯ ಇರುತ್ತದೆ. ವಿಶೇಷವಾಗಿ ಸೊಪ್ಪು ತಿನ್ನಲು ಹಲವರು ಹೆದರುತ್ತಾರೆ. ಆದರೆ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಹಿನ್ನೆಲೆಯಲ್ಲಿ ಸೊಪ್ಪು ಸ್ವಚ್ಛಗೊಳಿಸುವ ಸಲಹೆಗಳನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಬನ್ನಿ ನಾವು ನಿಮಗೆ ಕೆಲವು ಆರೋಗ್ಯಕರವಾದ ಸಲಹೆ ನೀಡುತ್ತೇವೆ.
ಇದನ್ನೂ ಓದಿ: 2ಕೋಟಿ ರೂ. ಬೆಲೆ ಬಾಳುವ ವಜ್ರದ ಉಂಗುರವನ್ನು ನಟಿ ತಮನ್ನಾಗೆ ಉಡುಗೊರೆ ನೀಡಿದ ಸ್ಟಾರ್​​ ನಟನ ಪತ್ನಿ
ಮಳೆಗಾಲದಲ್ಲಿ ಅನೇಕರು ಸೊಪ್ಪು ತಿನ್ನಲು ಹೆದರುತ್ತಾರೆ. ಕಾರಣ ಮಳೆಗಾಲದಲ್ಲಿ ಗದ್ದೆಯಲ್ಲಿನ ಹಸಿರೆಲೆಯಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಾಗುವ ಭೀತಿ. ಹೊಲಗಳ ಜತೆಗೆ ಎಲ್ಲೆಂದರಲ್ಲಿ ಕೆಸರು ನೀರು ಸಂಗ್ರಹವಾಗಿರುತ್ತದೆ. ಇದರಿಂದಾಗಿ ಅಲ್ಲಿ ಬೆಳೆಯುವ ಸಸ್ಯಗಳಲ್ಲಿ ಸೂಕ್ಷ್ಮಾಣುಗಳು ಮತ್ತು ಬ್ಯಾಕ್ಟೀರಿಯಾಗಳು ಹುಟ್ಟುತ್ತವೆ. ಎಲೆಗಳಿಗೆ ಸೋಂಕು ತಗುಲದಿದ್ದರೂ ಮಳೆಗಾಲದಲ್ಲಿ ರೋಗ ಬರುವ ಸಾಧ್ಯತೆ ಹೆಚ್ಚು. ಈ ಋತುವಿನಲ್ಲಿ ಜನರಿಗೆ ಶೀತ, ಕೆಮ್ಮು, ಕಾಮಾಲೆ, ಭೇದಿ ಇತ್ಯಾದಿಗಳ ಭಯ ಇರುತ್ತದೆ. ಹೀಗಾಗಿ ಆರೋಗ್ಯದ ಕುರಿತಾಗಿ ಕಾಳಜಿ ಅಗತ್ಯವಾಗಿದೆ.

ಮಾನ್ಸೂನ್ ರೋಗಗಳ ಅಪಾಯವನ್ನು ಕಡಿಮೆ ಮಾಡಲು, ಎಲ್ಲರೂ ಸೊಪ್ಪುಗಳನ್ನು ಸರಿಯಾಗಿ ತಿನ್ನಬೇಕು. ಆದ್ದರಿಂದ ನಿಮ್ಮ ಆಹಾರದಿಂದ ಸೊಪ್ಪುಗಳನ್ನು ಹೊರಗಿಡಬೇಡಿ.
ಇದನ್ನೂ ಓದಿ:ರೆಸ್ಟೊರೆಂಟ್​​​ನಲ್ಲಿ ಕೆಲಸ ಮಾಡುತ್ತಿರುವ ಖ್ಯಾತ ಗಾಯಕಿ; ಅಷ್ಟೊಂದು ಕಷ್ಟ ಇದ್ಯಾ ಮೇಡಂ? ಎಂದ ಫ್ಯಾನ್ಸ್​​
ಸೊಪ್ಪನ್ನು ಚೆನ್ನಾಗಿ ತೊಳೆಯುವುದು ಮತ್ತು ಅವುಗಳನ್ನು ಬೇಯಿಸುವುದು ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಸ್ವಚ್ಛಗೊಳಿಸಲು ಸರಿಯಾದ ಮಾರ್ಗ ಯಾವುದು ಎನ್ನುವ ಪ್ರಶ್ನೆ ಇರುತ್ತದೆ. ಸೊಪ್ಪು,ತರಕಾರಿ ಖರೀದಿಸುವುದರಿಂದ ಹಿಡಿದು ಅಡುಗೆ ಮಾಡುವವರೆಗೆ ಸರಳ ಸಲಹೆಗಳು ಆರೋಗ್ಯಕ್ಕೆ ಒಳ್ಳೆಯದು.

ಇದನ್ನೂ ಓದಿ:ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಮುನ್ನೆಚ್ಚರಿಕೆ ಕ್ರಮ; ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಹಣ ಬಿಡುಗಡೆ
ಮಾರುಕಟ್ಟೆಯಿಂದ ತಾಜಾ ಸೊಪ್ಪುಗಳನ್ನು ಖರೀದಿಸುವ ಮುನ್ನ ಅವುಗಳ ಕಾಂಡವನ್ನು ಪರೀಕ್ಷಿಸಿ.. ಹಳದಿ ಬಣ್ಣಕ್ಕೆ ತಿರುಗಿದರೆ.. ಹುಳುಗಳಿದ್ದರೆ ಖರೀದಿಸಬೇಡಿ. ಎಚ್ಚರಿಕೆಯಿಂದ  ಖರೀದಿಸಿ. ಮಾರುಕಟ್ಟೆಯಿಂದ ತಂದ ಸೊಪ್ಪುಗಳನ್ನು ಚೆನ್ನಾಗಿ ತೊಳೆಯಬೇಕು. ಸೊಪ್ಪುಗಳನ್ನು ತೊಳೆಯಲು ನೀರಿಗೆ ಅರಿಶಿಣ ಮತ್ತು ಉಪ್ಪನ್ನು ಸೇರಿಸಿ ಮತ್ತು ಅವುಗಳನ್ನು ಎರಡು ಅಥವಾ ಮೂರು ಬಾರಿ ಚೆನ್ನಾಗಿ ತೊಳೆಯಿರಿ.
ಇದನ್ನೂ ಓದಿ:ಡೈರೆಕ್ಟರ್​ಗೆ ಚಾಕು ತೋರಿಸಿ ಬೆದರಿಸಿದ ಸ್ಟಾರ್ ನಟ!; ವಿಡಿಯೋ ವೈರಲ್…
ಸೊಪ್ಪನ್ನು ಸ್ವಲ್ಪ ಸಮಯದವರೆಗೆ ಐಸ್ ನೀರಿನಲ್ಲಿ ನೆನೆಸಿ. ಹೀಗೆ ಮಾಡುವುದರಿಂದ ಸೊಪ್ಪು ತಾಜಾವಾಗಿರುತ್ತವೆ.
ಸ್ವಚ್ಛಗೊಳಿಸಿದ ನಂತರ  ಸೊಪ್ಪುಗಳನ್ನು ನೇರವಾಗಿ ಬೇಯಿಸಬಾರದು. ಚೆನ್ನಾಗಿ ತೊಳೆದ ನಂತರವೂ ಸೂಕ್ಷ್ಮಜೀವಿಗಳಿರುತ್ತವೆ. ನೀರಿನಲ್ಲಿ ಕುದಿಸಿ ಬಳಕೆ ಮಾಡಿ. ಮಾರುಕಟ್ಟೆಯಿಂದ ಸೊಪ್ಪು ತೆಗೆದುಕೊಂಡು ಬಂದರೆ ಚೆನ್ನಾಗಿ ತೊಳೆದು ಬಟ್ಟೆಯಿಂದ ಸ್ವಚ್ಛಗೊಳಿಸಿ.
ಮದುವೆಯಲ್ಲಿ ರಾಯಲ್​​​ ಲುಕ್​​; ವಧು, ವರರಿಗಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಮುತ್ತು, ರತ್ನಗಳೊಂದಿಗೆ ಬೆಳ್ಳಿ ಚಪ್ಪಲಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 6 =
Remember me
