| ಗುರುದೇವ್ ಶ್ರೀ ಶ್ರೀ ರವಿಶಂಕರ್
ಜನ್ಮಾಷ್ಟಮಿಯಂದು ಭಗವಾನ್ ಕೃಷ್ಣನ ಜನ್ಮದ ಸಂಭ್ರಮವನ್ನು ಆಚರಿಸುತ್ತೇವೆ. ಕೃಷ್ಣನು ಒಂದು ವ್ಯಕ್ತಿಯಲ್ಲ ಶಕ್ತಿ. ಕೃಷ್ಣನು ಪೂರ್ಣ ಕಲಾವತಾರಿ. ಕೃಷ್ಣ ನನ್ನಲ್ಲೇ ಇದ್ದಾನೆ, ಅವನು ನನಗಿಂತಲೂ ಬೇರೆಯಲ್ಲ ಎಂದು ಅರಿಯುವ ಸಲುವಾಗಿ ಈ ಸಂಭ್ರಮವನ್ನು ಆಚರಿಸುತ್ತೇವೆ. ಭಗವದ್ಗೀತೆಯಲ್ಲಿ ಭಗವಾನ್ ಕೃಷ್ಣನು, ” ಯಾರು ನನ್ನನ್ನು ಎಲ್ಲರಲ್ಲೂ ಕಾಣುತ್ತಾರೊ ಮತ್ತು ನನ್ನೊಳಗೆ ಎಲ್ಲರನ್ನೂ ಕಾಣುತ್ತಾರೊ, ಅಂತಹ ವ್ಯಕ್ತಿಗೆ ನಾನೆಂದಿಗೂ ಗೌಪ್ಯವಾಗಿರುವುದಿಲ್ಲ ಮತ್ತು ಅವರು ನನ್ನಿಂದ ಬೇರೆಯಾಗಲು ಸಾಧ್ಯವೇ ಇಲ್ಲ” ಎನ್ನುತ್ತಾನೆ.
ಕೃಷ್ಣನ ಜೀವನದಲ್ಲಿ ಎಲ್ಲಾ ಒಂಭತ್ತು ರಸಗಳನ್ನೂ ಕಾಣಬಹುದು. ಅವನು ತುಂಟ ಮಗುವಾಗಿದ್ದ, ವೀರ ಯೋಧನಾಗಿದ್ದ, ಆನಂದದ ಸಾಕಾರನಾಗಿದ್ದ, ಜ್ಞಾನದ ಮೂಲವಾಗಿದ್ದ, ಪರಿಪೂರ್ಣ ಸ್ನೇಹಿತ ಮತ್ತು ಗುರು. ಅಷ್ಟಮಿಯ ದಿನದಂದಾದ ಆತನ ಜನನವು ಆಧ್ಯಾತ್ಮಿಕ ಹಾಗೂ ಭೌತಿಕ ಜಗತ್ತುಗಳ ಒಡೆಯನವನು ಎಂಬುದರ ಸೂಚಕ. ಅವನು ಮಹಾನ್ ಗುರುವೂ ಹೌದು, ಆಧ್ಯಾತ್ಮಿಕ ಸ್ಫೂರ್ತಿಯೂ ಹೌದು ಮತ್ತು ನಿಪುಣ ರಾಜಕೀಯ ನಾಯಕನೂ ಹೌದು. ಒಂದೆಡೆ ಅವನು ಎಲ್ಲರೂ ಆಗಬಯಸುವ ಯೋಗೀಶ್ವರನಾದರೆ, ಮತ್ತೊಂದೆಡೆ ಅವನೊಬ್ಬ ತುಂಟನಾದ ಕಳ್ಳ. ವಿಪರೀತ ವರ್ತನೆಗಳಿಗೆ ಅವನು ಉತ್ತಮವಾದ ಉದಾಹರಣೆ. ಆದ್ದರಿಂದ ಕೃಷ್ಣನ ನ್ನು ಅರಿಯುವುದು ಬಲು ಕಷ್ಟ. ಅವಧೂತರಾದವರಿಗೆ ಬಾಹ್ಯ ಜಗತ್ತಿನ ಪರಿವೆಯೇ ಇರುವುದಿಲ್ಲ. ಓರ್ವ ಇಹಲೋಕಮಗ್ನವಾಗಿರುವ ವ್ಯಕ್ತಿಗೆ , ಓರ್ವ ರಾಜಕಾರಣಿಗೆ, ರಾಜನಿಗೆ, ಆಧ್ಯಾತ್ಮಿಕ ಜಗತ್ತಿನ ಪರಿವೆಯೇ ಇರುವುದಿಲ್ಲ. ಆದರೆ ಕೃಷ್ಣನು ದ್ವಾರಕಾಧೀಶನೂ ಹೌದು, ಯೋಗೀಶ್ವರನೂ ಹೌದು.
ಕೃಷ್ಣನನ್ನು ಅರ್ಥ ಮಾಡಿಕೊಳ್ಳಲು ರಾಧೆಯಾಗಿರಬೇಕು ಅಥವಾ ಅರ್ಜುನನಾಗಿರಬೇಕು ಅಥವಾ ಉದ್ಧವನಾಗಿರಬೇಕು. ಮೂರು ರೀತಿಯ ಜನರು ಭಗವಂತನಲ್ಲಿ ಶರಣಾಗುತ್ತಾರೆ. ಪ್ರೇಮಿಗಳು, ದುಃಖಿಗಳು ಮತ್ತು ಜ್ಞಾನಿಗಳು. . ಉದ್ಧವನು ಜ್ಞಾನಿ, ಅರ್ಜುನ ದುಃಖಿ, ರಾಧೆ ಪ್ರೇಮಿ. ಯಾರೊಬ್ಬರೂ ಮತ್ತೊಬ್ಬರಿಗಿಂತಲೂ ಉತ್ತಮರಲ್ಲ. ಎಲ್ಲರೂ ಒಳ್ಳೆಯವರೆ. ಈಗಿನ ಕಾಲದಲ್ಲಿ ಜನರು ಇಹಲೋಕದಲ್ಲೆ ಕಳೆದು ಹೋಗಿರುತ್ತಾರೆ ಅಥವಾ ಎಲ್ಲದ್ದರಿಂದ ಹೊರಬಂದು ತಮ್ಮ ಚಿಪ್ಪಿನೊಳಗೆ ಸೇರಿಕೊಂಂಡು ಬಿಡುತ್ತಾರೆ. ಇಂತಹ ಸಂದರ್ಭದಲ್ಲಿ ಕೃಷ್ಣನ ಬೋಧನೆ ಇಂದಿಗೂ ಪ್ರಸಕ್ತ.ಸುಟ್ಟು ಹೋಗಿರುವ, ಒತ್ತಡದಿಂದ ತುಂಬಿ ಹೋಗಿರುವ ಈ ಜೀವನದಲ್ಲಿ ಮತ್ತೆ ಪ್ರಾಣ ತುಂಬಿ , ಜೀವನವನ್ನು ಕೇಂದ್ರಿಕೃತವಾಗಿ ಮಾಡಿ, ಕ್ರಿಯಾಶೀಲವಾಗಿ ಮಾಡುತ್ತಾನೆ. ಕುಶಲತೆಯಿಂದ ಕೃಷ್ಣನು ಭಕ್ತಿಯನ್ನು ಕಲಿಸಿಕೊಡುತ್ತಾನೆ. ಗೋಕುಲಾಷ್ಟಮಿಯ ಸಂಭ್ರಮಾಚರಣೆಯೆಂದರೆ, ಜೀವನದ ವಿಪರೀತವಾದ ಆದರೂ ಪೂರಕವಾದ ಗುಣಗಳ ಸ್ವೀಕಾರ.
ಕೃಷ್ಣನು ಅರ್ಜುನನಿಗೆ, ” ನೀನು ನನಗೆ ಅತ್ಯಂತ ಪ್ರೀತಿಪಾತ್ರನು” ಎಂದು ಹೇಳಿ , “ನನಗೆ ಶರಣಾಗು” ಎನ್ನುತ್ತಾನೆ. ಶರಣಾಗಿದ್ದೇವೆ ಎಂಬ ಭಾವನೆಯನ್ನು ಮೊದಲು ಹೊಂದಬೇಕು. ಭಗವಂತನಿಗೆ ನೀವು ಅತ್ಯಂತ ಪ್ರೀತಿಪಾತ್ರರು ಎಂದು ಭಾವಿಸಿದಾಗ ಶರಣಾಗತಿಯಾಗುತ್ತದೆ. ಶರಣಾಗತಿಯು ಒಂದು ಕೃತ್ಯವಲ್ಲ. ಅದೊಂದು ಭಾವನೆ. ಶರಣಾಗದಿರುವುದು ಒಂದು ಭ್ರಮೆ, ಅಜ್ಞಾನ. ಶರಣಾಗತಿಯು ಒಂದು ಭಾವನೆಯಾಗಿ ಆರಂಭಿಸಿ ನಂತರ ವಾಸ್ತವತೆಯಾಗಿ ಪರಿಣಮಿಸುತ್ತದೆ. ದ್ವೈತವೆಂಬುದೇ ಇಲ್ಲವಾದಾಗ , ಯಾರ ಅಸ್ತಿತ್ವವೂ ಪ್ರತ್ಯೇಕವಾಗಿ ಇಲ್ಲವಾದಾಗ, ಶರಣಾಗತಿ ಎಂಬುದು ಒಂದು ಭ್ರಮೆಯಷ್ಟೆ.
ಆದ್ದರಿಂದ ಗೀತೆಯಲ್ಲಿ ಕೃಷ್ಣನು, ” ಎಲ್ಲರಿಗೂ ಸದಾ ಧನ್ಯವಾದಗಳನ್ನು ಅರ್ಪಿಸದವನು ಮತ್ತು ಯಾರನ್ನೂ ದ್ವೇಷಿಸದವನು ನನಗೆ ಪ್ರಿಯನು” ಎಂದು. ಸದಾ ಕೃತಜ್ಞರಾಗಿ , ಅದರ ಕಾರಣದಿಂದ ಬದ್ಧರು ಎಂದು ಭಾವಿಸುವವರಿಗೆ ಎಲ್ಲವನ್ನೂ ಆಳುತ್ತಿರುವ ದೈವದ ಅನುಭವವಾಗಿರುವುದಿಲ್ಲ. ಎಲ್ಲದಕ್ಕೂ ಇತರರೆ ಕಾರಣ ಎಂಬ ಸೀಮಿತವಾದ ದೃಷ್ಟಿಯನ್ನು ಹೊಂದಿರುವವ ಕರ್ಮದ ಅಥವಾ ದೈವದ ಯೋಜನೆಯ ಅರಿವನ್ನು ಹೊಂದಿರುವುದಿಲ್ಲ.ಜನರು ಏನು ಮಾಡಿದ್ದಾರೊ ಅದಕ್ಕಾಗಿ ಮೆಚ್ಚುಗೆಯನ್ನು ತೋರಿಸಿ ಅಷ್ಟೆ. ಇಲ್ಲವಾದರೆ ನಿಮ್ಮ ಕೃತಜ್ಞತೆ ಅಹಂಕಾರದ ಸುತ್ತಲೂ ಕೇಂದ್ರಿಕೃತವಾಗಿರುತ್ತದೆ. ಕೃತಜ್ಞರಾಗಿದ್ದೀರಿ, ಆದರೆ ಒಂದು ಕೃತ್ಯಕ್ಕಾಗಿ ಅಲ್ಲ, ಏನಿದೆಯೋ ಅದರ ಬಗ್ಗೆ ಕೃತಜ್ಞ ರಾಗಿದ್ದೀರಿ. ಒಂದು ವ್ಯಕ್ತಿ ಏನೇನೂ ಅಲ್ಲ, ಒಂದೇ ಒಂದು ಶಕ್ತಿಯ ಗೊಂಬೆಯಷ್ಟೆ. ಎಲ್ಲರೂ ಒಂದರಿಂದಲೇ ಆಳಲ್ಪಟ್ಟಿದ್ದಾರೆ,ಶನಿಯಂತ್ರಿತವಾಗಿದೆ, ನಿಭಾಯಿಸಲ್ಪಟ್ಟಿದೆ. ಆ ಚೈತನ್ಯ ನಿಮ್ಮ ಪ್ರತಿಯೊಂದು ಕಾರ್ಯದಲ್ಲೂ ಹೊಳೆಯುತ್ತಿದೆ. ಅದರ ಪೂರ್ವ ಚಿತ್ರಣವಿಲ್ಲದ ಸೀಮಿತವಾದ ಕೃತಜ್ಞತೆ ಬೇಡ.
ಆದ್ದರಿಂದ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುವ ನೈಜವಾದ ರೀತೆಯೆಂದರೆ, ನೀವು ದ್ವಿಪಾತ್ರವನ್ನು ವಹಿಸಬೇಕೆಂಬ ಅರಿವು , ಈ ಭೂಮಿಯ ಮೇಲೆ ಜವಾಬ್ದಾರಿಯುತವಾದ ವ್ಯಕ್ತಿಯಾಗಿರುವುದು ಮತ್ತು ನೀವು ಎಲ್ಲಾ ಘಟನೆಗಳಿಗಿಂತಲೂ ಅತೀತರು, ಯಾವುದೂ ಸ್ಪರ್ಶಿಸಲಾಗದ ಪರಬ್ರಹ್ಮವೆಂಬ ಅರಿವನ್ನು ಹೊಂದಿರುವುದು. ಸ್ವಲ್ಪ ಅವಧೂತರ ಲಕ್ಷಣ ಮತ್ತು ಜೀನದಲ್ಲಿ ಕ್ರಿಯಾಶೀಲರಾಗಿರುವುದು, ಇದೇ ಜನ್ಮಾಷ್ಟಮಿ ತ ನೈಜ ಆಚರಣೆ. ನಿಮ್ಮೊಳಗಿರುವ ಕೃಷ್ಣ ಚೈತನ್ಯವನ್ನು ಎಬ್ಬಿಸಿ. ” ಕೃಷ್ಣ ನನಗಿಂತಲೂ ಎಲ್ಲೋ ದೂರದಲ್ಲಿಲ್ಲ. ಅವನು ನನ್ನೊಳಗಿದ್ದಾನೆ” ಎಂಬ ಭಾವನೆ ಮಾತ್ರದಿಂದಲೇ ಜೀವನವು ಕೃಷ್ಣನಿಂದ ತುಂಬಿ ಹೋಗುತ್ತದೆ.
ಗುರು ಶಕ್ತಿ ಅಸಾಮಾನ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 1 =
Remember me
