ಬೆಂಗಳೂರು:ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ಶಾಸ್ತ್ರ ವಿಶ್ವವಿದ್ಯಾಲಯವು ಐವರು ಸಾಧಕರಿಗೆ ವಿವಿಧ ಪ್ರಶಸ್ತಿ ನೀಡಿ ಗೌರವಿಸಿದೆ.
ಏಮ್ಸ್​ನ ಪ್ರೊ.ಟಿ.ಪಿ.ಸಿಂಗ್ ಅವರಿಗೆ ಜಿ.ಎನ್.ರಾಮಚಂದ್ರನ್ ಅವಾರ್ಡ್, ಎನ್​ಸಿಬಿಎಸ್​ನ ಪ್ರೊ.ಉಪೇಂದ್ರ ಸಿಂಗ್ ಬಲ್ಲಾಳ್ ಅವರಿಗೆ ಓಬೈದ್ ಸಿದ್ಧಿಕ್ಕಿ ಅವಾರ್ಡ್, ಸಿ.ಎನ್.ಆರ್ ರಾವ್ ಪ್ರಶಸ್ತಿಯನ್ನು ಐಐಎಸ್​ಇಆರ್ ಪ್ರೊ. ಜೆ.ಎನ್.ಮೂರ್ತಿ, ಐಐಎಸ್ಸಿ ಪ್ರೊ.ಎಸ್.ಸಂಪತ್ ಮತ್ತು ಪ್ರೊ.ಸ್ವಾಮಿನಾಥನ್ ಅವರಿಗೆ ಭಾರತ ಸರ್ಕಾರ ವಿಜ್ಞಾನ ಕಾರ್ಯದರ್ಶಿ ಡಾ.ಅರಭಿಂದ ಮಿತ್ರಾ ಪ್ರದಾನ ಮಾಡಿದರು. ಸಿನರ್ಜಿ ವಿಜ್ಞಾನ ಕುರಿತು ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ವಿವಿಧ ದೇಶಗಳಿಂದ 300 ಮಂದಿ ಪಾಲ್ಗೊಂಡಿದ್ದರು.
ಡಾ.ಅರಭಿಂದ ಮಿತ್ರಾ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತ ಮತ್ತಷ್ಟು ಸಾಧಿಸಬೇಕು. ಅಲ್ಲದೆ, ವಿಜ್ಞಾನದಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯಬೇಕು. ಶಾಸ್ತ್ರ ವಿಶ್ವವಿದ್ಯಾಲಯ ವಿಜ್ಞಾನ ಮೇಳ ಏರ್ಪಡಿಸಿ ಈ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − ten =
Remember me
