ಕಾರವಾರ:ವಿಶ್ವದ 2ನೇ ಅತಿ ಎತ್ತರದ ಶಿವನ ವಿಗ್ರಹ ಎಂಬ ಖ್ಯಾತಿ ಪಡೆದಿರುವ ಮುರ್ಡೇಶ್ವರದ ಶಿವನ ಮೂರ್ತಿಗೆ ಗ್ಲೋಬಲ್​ ಪೀಪಲ್ಸ್​ ಚಾಯ್ಸ್​ ಅವಾರ್ಡ್​ ಲಭಿಸಿದೆ.
ಅಂತಾರಾಷ್ಟ್ರೀಯ ಫಿಲಿಪ್ಸ್​ ಕಂಪನಿ ಕೈಗೊಂಡಿದ್ದ ಈ ಸ್ಪರ್ಧೆಗೆ ಮುರ್ಡೇಶ್ವರ ಸೇರಿ ವಿಶ್ವದ 25 ಪ್ರಸಿದ್ಧ ತಾಣಗಳು ನಾಮ ನಿರ್ದೇಶನಗೊಂಡಿದ್ದವು. ಸಾರ್ವಜನಿಕರ ಆನ್​ಲೈನ್​ ವೋಟಿಂಗ್​ ಮೂಲಕ ತಾಣವನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಒಟ್ಟಾರೆ 6800 ಜನ ವಿವಿಧ ತಾಣಗಳ ಬಗ್ಗೆ ಮತ ಚಲಾಯಿಸಿದ್ದರು. ಅದರಲ್ಲಿ ಮುರ್ಡೇಶ್ವರದ ಶಿವನಮೂರ್ತಿ ಶೇ.40 ಎಂದರೆ 2500 ಕ್ಕೂ ಹೆಚ್ಚು ವೋಟ್​ ಗಳಿಸಿ ಮೊದಲ ಸ್ಥಾನ ಪಡೆದಿದೆ.
ಆರ್​ಎನ್​ಎಸ್​ ಮೋರ್ಟಸ್​ ಕಂಪನಿ ತನ್ನ ಸಾಮಾಜಿಕ ಜವಾಬ್ದಾರಿ ನಿಧಿಯಲ್ಲಿ ಈ ವರ್ಷ ಮುರ್ಡೇಶ್ವರದ ಶಿವನ ವಿಗ್ರಹಕ್ಕೆ ವಿಶೇಷ ಲೈಟಿಂಗ್​ ವ್ಯವಸ್ಥೆ ಮಾಡಿದೆ. ಸುಮಾರು 1 ಲಕ್ಷ ವಿವಿಧ ಸಂಯೋಜನೆಯ ಬೆಳಕಿನ ವ್ಯವಸ್ಥೆ ಇದರಲ್ಲಿದೆ. ಲಿಪ್ಸ್​ ಕಂಪನಿ ಅಳವಡಿಸಿದ ಈ ಲೈಟಿಂಗ್​ ಅತಿ ಅಪರೂಪವಾಗಿದ್ದು, ಮಾಲ್ಡೀವ್ಸ್​ ಸೇರಿ ವಿಶ್ವದ ಅತಿ ಪ್ರಸಿದ್ಧ ಪ್ರವಾಸಿ ತಾಣಗಳ ಬೆಳಕಿನ ಸಂಯೋಜನೆಗೆ ಸರಿ ಸಮನಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 16 =
Remember me
