ಬೆಂಗಳೂರು:ಅರಣ್ಯ ಉಳಿಸುವಲ್ಲಿ ಜೀವ ಪಣಕ್ಕಿಟ್ಟು ಹೋರಾಡಿದ್ದಕ್ಕಾಗಿ ಮುಖ್ಯಮಂತ್ರಿಗಳ ಪದಕ ಸ್ವೀಕರಿಸಿದ ಅರಣ್ಯ ರಕ್ಷಕರಿಗೆ ಸರ್ಕಾರ ತಮ್ಮನ್ನು ಗುರುತಿಸಿತಲ್ಲ ಎಂಬ ಸಮಾಧಾನ, ಅವರಲ್ಲಿ ಕೆಲವರಿಗೆ ತಮ್ಮ ನೆರವಿಗೆ ಬಾರಲಿಲ್ಲ ಎಂಬ ವೇದನೆ.ಅರಣ್ಯ ಇಲಾಖೆಯ 2020 ಹಾಗೂ 2021ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆಯಾಗಿರುವ 50 ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಪದಕ ಪ್ರದಾನ ಕಾರ್ಯಕ್ರಮ ಶುಕ್ರವಾರ ವಿಧಾನಸೌಧದಲ್ಲಿ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮ್ಯಯ ಪದಕ ಪ್ರದಾನ ಮಾಡಿ ಶಹಬ್ಬಾಸ್‌ಗಿರಿ ನೀಡಿದರು. ಬಳಿಕ ಸೌಧದದ ಪ್ರಧಾನ ಮೆಟ್ಟಿಲ ಮೇಲೆ ೆಟೋ ಸೆಷನ್‌ಗಾಗಿ ಪುರಸ್ಕೃತರು ಒಟ್ಟಾಗಿ ನಿಂತ ಸಂದರ್ಭದಲ್ಲಿ ವಿಜಯವಾಣಿ ಕೆಲವರನ್ನು ಮಾತಿಗೆಳೆಯಿತು.ಕೆಲವರು ಪ್ರಶಸ್ತಿ ಸಿಕ್ಕ ಸಂಭ್ರಮದಲ್ಲಿದ್ದರೆ ಮತ್ತೆ ಕೆಲವರು ತಮ್ಮ ಸೇವಾವಧಿ ಕೊನೆ ಹಂತದಲ್ಲಿಯೂ ಸರ್ಕಾರ ನೆರವಿಗೆ ಬರಲಿಲ್ಲ ಎಂಬ ಬೇಸರದ ನುಡಿಗಳಿದ್ದವು.
ಅರಣ್ಯ ವೀಕ್ಷಕರಾಗಿ ಕೆಲವು ತಿಂಗಳ ಹಿಂದಷ್ಟೇ ಸೇವಾ ನಿವೃತ್ತರಾದ ಎಂ.ಎಂ.ಕೂಸನೂರು ಅವರು ತಮ್ಮ ಅನುಭವ ಕಥನ ಬಿಚ್ಚಿಡುವಾಗ ಕಣ್ಣಲ್ಲಿ ನೀರು ತುಂಬಿಕೊಂಡು ಭಾವುಕರಾದರು. 2003ರಲ್ಲಿ ಶ್ರೀಗಂಧ ಕಳ್ಳಸಾಗಣೆದಾರರನ್ನು ಬಂಧಿಸುವ ಸಂದರ್ಭದಲ್ಲಿ ಅವರ ಮೇಲೆ ದಾಳಿಯಾಗಿದ್ದು, ಕಳ್ಳಸಾಗಣೆ ದಾರರ ದಾಳಿಯಿಂದ ಮುಖ, ಬೆನ್ನು ಸೇರಿ ಅನೇಕ ಕಡೆ ಜರ್ಝರಿತವಾಗಿ ಗಾಯಗೊಂಡು ಏಳು ದಿನ ಕೋಮಾದಲ್ಲಿ, ಎರಡು ತಿಂಗಳು ಐಸಿಯುನಲ್ಲಿ ಕಳೆದರು. ಚಿಕಿತ್ಸೆಗಾಗಿ ತನ್ನ ಒಂದು ಎಕರೆ ಜಮೀನು ಮಾರಾಟ ಮಾಡಬೇಕಾಯಿತು. ಈಗ ಮಕ್ಕಳಿಬ್ಬರು ಅಕ್ಕಿ ಆಲೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಪ್ರಶಸ್ತಿ ಸಿಕ್ಕಿರುವುದು ಆನಂದ ಎನಿಸುತ್ತದೆ, ಆದರೆ ನನ್ನ ಒಳಗಿನ ನೋವು ಅಷ್ಟಿಷ್ಟಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಳೆದ ದಶಕದ ಹಿಂದೆ ಹೆಚ್ಚು ಸದ್ದು ಮಾಡಿದ ವಿಚಾರಗಳಲ್ಲಿ ವೀರಪ್ಪನ್ ಕಾರ್ಯಾಚರಣೆ ಪ್ಯಾಕೇಜ್ ಕೂಡ ಒಂದು. ದಂತಚೋರ ವೀರಪ್ಪ ಬಂಧಿಸುವಲ್ಲಿ ಕಾರ್ಯಾಚರಣೆ ಮಾಡಿದವರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ೋಷಿಸಿತು. ಕೆಲವರು ಪಡೆದರು, ಮತ್ತೆ ಕೆಲವರಿಗೆ ನಿರಾಕರಿಸಲಾಯಿತು. ಹೀಗೆ ನಿರಾಕರಿಸಿದವರಲ್ಲಿ ಅರಣ್ಯ ಇಲಾಖೆಯವರು ಹೆಚ್ಚಿನ ಮಂದಿ ಇದ್ದಾರೆ.ಶುಕ್ರವಾರ ಸಿಎಂ ಪದಕ ಪಡೆದ ಎಂ.ರಾಮಚಂದ್ರ ಕೂಡ ಒಬ್ಬರು. ವೀರಪ್ಪನ್ ಕಾರ್ಯಾಚಣೆಯಲ್ಲಿ ಹತ್ತು ವರ್ಷವಿದ್ದೆ. ಕಾರ್ಯಾಚಣೆಯಲ್ಲಿ ಪಾಳ್ಗೊಂಡವರಿಗೆ ಅನೇಕ ನೆರವು ಸಿಕ್ಕಿತು. ಸೈಟು, ಐದೂವರೆ ಲಕ್ಷ ಹಣ ಎಲ್ಲಕೊಟ್ಟರು. ನನಗೆ ಸಿಗಲಿಲ್ಲ. ನನ್ನಂತೆ ಅನೇಕರಿಗೆ ಸರ್ಕಾರದಿಂದ ನೆರವು ಸಿಗಲಿಲ್ಲ ಎಂದು ಬೇಸರಿಸಿದರು.ಕಾರ್ಯಾಚರಣೆ ವೇಳೆಯ ಡೈರಿ ಕೊಡಿ ಎಂದು ಕೇಳಿದರು, ನಮ್ಮ ಬಳಿ ಇರಲಿಲ್ಲ. ಅವರು ಅದೊಂದು ನಿಯಮ ಮಾಡಿಕೊಂಡಿದ್ದರು, ಅವರಾದರೂ ಏನು ಮಾಡಲು ಸಾಧ್ಯ ಎಂದು ಪ್ರತಿಕ್ರಿಯೆ ನೀಡಿದರು.ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಬಂಧನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದೆ, ವೀರಪ್ಪನ್ ಐವರು ಹತ್ಯೆ ಮಾಡಿದ ಪ್ರಕರಣ, ಕೈ ಕಡಿದ ಘಟನೆ ನಡೆದ ಕಡೆ ಕಾರ್ಯನಿರ್ವಹಿಸಿದ್ದೆ. ಇತ್ತೀಚೆಗೆ ಹೊರ ರಾಜ್ಯದ ಶ್ರೀಗಂಧ ಕಳ್ಳಸಾಗಣೆದಾರರನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿಯೂ ಪಾಲ್ಗೊಂಡಿದ್ದೆ ಎಂದು ಹೇಳಿದರು.
ಪುತ್ತೂರಿನವರಾದ ರಾಜುಚಂದ್ರ ಶೌರ್ಯ ಹಾಗೂ ದಿಟ್ಟತನಕ್ಕೆ ಸಿಎಂ ಲಕ ಒಲಿದಿದೆ. ಇವರು ಕುದುರೆಮುಖ ವನ್ಯಜೀವಿ ವಲಯದ ಕೆರೆಕಟ್ಟೆಯಲ್ಲಿ ನಕ್ಸಲರು ಅರಣ್ಯ ಇಲಾಖೆ ರೇಂಜ್ ಕಚೇರಿಯಲ್ಲಿ ಸ್ಪೋಟಿಸಿದ್ದರು. ಅಂತಹ ಸಂದರ್ಭದಲ್ಲಿ ರಾಜುಚಂದ್ರ ಧೈರ್ಯ ಮೆರೆದಿದ್ದರು.ಪ್ರಶಸ್ತಿ ಸ್ವೀಕರಿಸಿದ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿ, ಪೊಲೀಸ್‌ರ ವಿಶೇಷ ತಂಡ ನಕ್ಸಲರ ಕೂಂಬಿಂಗ್‌ಗೆ ತೆರಳುವ ಸಂದರ್ಭದಲ್ಲಿ ನಾವು ಅವರಿಗೆ ದಾರಿ ತೋರಿಸಲು ಹೋಗುತ್ತಿದ್ದೆವು. ಈ ಮೂಲಕ ಕಾರ್ಯಾಚರಣೆಗೆ ನಮ್ಮ ಇಲಾಖೆ ನೆರವಾಗಿತ್ತು ಎಂದರು.
12 ಲೋಡ್ ಶ್ರೀಗಂಧ ವಶ!
ಕಾಡುಗಳ್ಳ ವೀರಪ್ಪನ್ ಕಾರ್ಯಾಚರಣೆಯಲ್ಲಿ 1986ರಿಂದ 2004ರವರೆಗೂ ನಾನು ಪಾಲ್ಗೊಂಡಿದ್ದೆ, ಸರ್ಕಾರ ಈ ಸಂದರ್ಭದಲ್ಲಿ ಪ್ರದಕ ನೀಡಿರುವುದು ಖುಷಿ ತಂದಿದೆ ಎಂದು ಸಂತೋಷ್ ಕುಮಾರ್ ಖುಷಿಪಟ್ಟರು. ಎಸ್‌ಟಿಎ್ನಲ್ಲಿ ಗುಪ್ತಚರ ವಿಭಾಗದಲ್ಲೂ ಕಾರ್ಯನಿರ್ವಹಿಸಿದ್ದೆ. ವೀರಪ್ಪನ್ ಚಲನವಲನವನ್ನು ಹತ್ತಿರದಿಂದ ಗಮನಿಸಿದ್ದೆ. 1992ರಲ್ಲಿ ವೀರಪ್ಪನ್ ಗುಂಪು ಮುಚ್ಚಿಟ್ಟಿದ್ದ 12 ಲೋಡ್ ಶ್ರೀಗಂಧವನ್ನು ಪತ್ತೆ ಹಚ್ಚಲಾಯಿತು ಎಂದು ಹಳೆಯ ಘಟನೆ ನೆನಪಿಸಿಕೊಂಡರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 × four =
Remember me
