ಬೆಂಗಳೂರು:ಸ್ನೇಹ ಮತ್ತು ಜ್ಞಾನದ ನಡುವೆ ಸಂಪರ್ಕವಿದೆ. ನಾವು ಪರಸ್ಪರರಿಂದ ಕಲಿತಾಗ ನಮ್ಮ ಬುದ್ಧಿಶಕ್ತಿ ವಿಸ್ತಾರವಾಗುತ್ತದೆ ಎಂದು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಹೇಳಿದ್ದಾರೆ.
ಇನ್ಪೋಸಿಸ್ ಸೈನ್ಸ್ ಫೌಂಡೇಷನ್ ಮಂಗಳವಾರ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ 11ನೇ ವರ್ಷದ ಇನ್ಪೋಸಿಸ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ನಾವು ಜಗತ್ತಿನಿಂದ ಪಡೆಯುವುದಕ್ಕಿಂತ ಹೆಚ್ಚಿನದಾಗಿ ಜಗತ್ತಿಗೆ ಮರಳಿ ಕೊಡಬೇಕು ಎಂದರು.
5ನೇ ಶತಮಾನದಲ್ಲಿ ಗ್ರೀಸ್, ಬ್ಯಾಬಿಲಾನ್ ಮತ್ತು ರೋಮ್ಲ್ಲಿನ ಬುದ್ಧಿಮತ್ತೆಯ ಹೆಚ್ಚಳದ ಪ್ರಭಾವ ಆರ್ಯಭಟ ನೇತೃತ್ವದ ಗಣಿತ ಕ್ರಾಂತಿಗೆ ಕಾರಣವಾಯಿತು. ಆರ್ಯಭಟನ ಗಣಿತ ಭಾರತದಲ್ಲಿ ಬಹುದೊಡ್ಡ ಯಶಸ್ಸು ಸಾಧಿಸಿತು. ನಂತರ ವಿದೇಶಗಳಿಗೆ ಪಸರಿಸಿ ಚೀನಾ ಮತ್ತು ಅರಬ್ ಹಾಗೂ ಯೂರೋಪ್ ಮೇಲೂ ಪರಿವರ್ತನೀಯ ಪ್ರಭಾವ ಬೀರಿತು ಎಂದು ವಿವರಿಸಿದರು. ಹೀಗೆ ಸ್ನೇಹದ ಸಕಾರಾತ್ಮಕ ಪರಿಣಾಮ ರಾಷ್ಟ್ರೀಯ ಗಡಿಯಲ್ಲಿ ಮಾತ್ರವಲ್ಲದೆ, ದೇಶದ ಒಳಗೂ ಕೆಲಸ ಮಾಡುತ್ತದೆ ಎಂದು ಹೇಳಿದರು.
ಇನ್ಪೋಸಿಸ್ ಸಂಸ್ಥೆ ಸಂಸ್ಥಾಪಕ ನಾರಾಯಣಮೂರ್ತಿ, ಸಹ ಸಂಸ್ಥಾಪಕರಾದ ಎಸ್.ಡಿ. ಸಿಬುಲಾಲ್, ನಂದನ್ ನಿಲೇಕಣಿ, ಕ್ರಿಸ್ ಗೋಪಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
ಇನ್ಪೋಸಿಸ್ ಸೈನ್ಸ್ ಫೌಂಡೇಷನ್ ಉತ್ತಮ ಕೆಲಸ ಮಾಡುತ್ತಿದೆ. ನನ್ನ ಸಾಧನೆಗೆ ಪ್ರೋತ್ಸಾಹ ನೀಡಿದ ಕುಟುಂಬದ ಸದಸ್ಯರು ಮತ್ತು ಶಿಕ್ಷಕರಿಗೆ ಅಭಿನಂದನೆ ತಿಳಿಸಲು ಬಯಸುತ್ತೇನೆ.
| ಮಂಜುಳಾ ರೆಡ್ಡಿ ಪ್ರಶಸ್ತಿ ವಿಜೇತೆ
ಪ್ರಶಸ್ತಿ ಪುರಸ್ಕೃತರು
ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ ವಿಭಾಗ: ಬಾಂಬೆ ಐಐಟಿ ಪ್ರಾಧ್ಯಾಪಕಿ ಸುನೀತಾ ಸುರವಗಿ. ಮಾನವೀಯ ವಿಭಾಗ: ಹಿಮಾಚಲಪ್ರದೇಶದ ಐಐಟಿ ಮಾನವೀಯತೆ ಮತ್ತು ಸಮಾಜ ವಿಜ್ಞಾನದ ಸಹಾಯಕ ಪ್ರಾಧ್ಯಾಪಕ ಮನು ವಿ. ದೇವದೇವನ್. ಜೀವ ವಿಜ್ಞಾನ: ಹೈದರಾಬಾದ್ ಸೆಂಟರ್ ಫಾರ್ ಸೆಲ್ಯುಲರ್ ಆಂಡ್ ಮಾಲಿ ಕ್ಯೂಲರ್ ಬಯಾಲಜಿಯ (ಸಿಸಿಎಂಬಿ) ಮಂಜುಳಾ ರೆಡ್ಡಿ. ಗಣಿತ ವಿಜ್ಞಾನ: ಇಟಿಎಚ್ ಜ್ಯೂರಿಚ್​ನ ಪ್ರೊಫೆಸರ್ ಸಿದ್ಧಾರ್ಥ ಮಿಶ್ರಾ. ಭೌತಿಕ ವಿಜ್ಞಾನ: ಐಐಎಸ್ಸಿಯ ಪ್ರಾಧ್ಯಾಪಕ ಪ್ರೊ. ಜಿ. ಮುಖೇಶ್. ಸಾಮಾಜಿಕ ವಿಜ್ಞಾನ ವಿಭಾಗ: ಕ್ರಿಯೇಗರ್ ಸ್ಕೂಲ್ ಆಫ್ ಆರ್ಟ್ಸ್ ಆಂಡ್ ಸೈನ್ಸ್​ನ ಆಂಥ್ರೋಪಾಲಜಿ ವಿಭಾಗದ ಪ್ರೊ. ಆನಂದ್ ಪಾಂಡಿಯನ್.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 1 =
Remember me
