ಬೆಂಗಳೂರು:ಇನ್ಪೋಸಿಸ್​ನ ಸಿಎಸ್​ಆರ್ ಅಂಗಸಂಸ್ಥೆ ಇನ್ಪೋಸಿಸ್ ಫೌಂಡೇಷನ್ ವತಿಯಿಂದ ಎರಡನೇ ಆವೃತ್ತಿಯ ಆರೋಹಣ ಸೋಶಿಯಲ್ ಇನ್ನೋವೇಷನ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ನಿರ್ಗತಿಕರಿಗೆ ಮತ್ತು ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಸಹಕಾರಿಯಾಗುವ ಆವಿಷ್ಕಾರದಲ್ಲಿ ನಿರತರಾಗಿರುವ ವ್ಯಕ್ತಿಗಳು, ತಂಡಗಳು ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಇನ್ಪೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಪ್ರಶಸ್ತಿ ಪ್ರದಾನ ಮಾಡಿದರು. ನಂತರ ಮಾತನಾಡಿದ ಸುಧಾಮೂರ್ತಿ, ಇಂತಹ ಆವಿಷ್ಕಾರಗಳ ಮೂಲಕ ದೇಶದ ಸಾಮಾಜಿಕ ಸವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮುನ್ನಡಿ ಇಡಬಹುದಾಗಿದೆ. ಪ್ರಶಸ್ತಿ ಪಡೆದಿರುವವರು ಭವಿಷ್ಯದ ಭಾರತವನ್ನು ಮತ್ತಷ್ಟು ಉಜ್ವಲಗೊಳಿಸá-ವ ನಿಟ್ಟಿನಲ್ಲಿ ಶ್ರಮಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಚಿನ್ನದ ಪ್ರಶಸ್ತಿ (ತಲಾ 20 ಲಕ್ಷ ರೂ.)
ಆರೋಗ್ಯ ರಕ್ಷಣೆ:ಕೊಲ್ಕತ್ತಾದ ಪಾರ್ಥ ಪ್ರತಿಮ್ ದಾಸ್ ಮಹಾಪಾತ್ರ, ಬೆಂಗಳೂರಿನ ಡಾ.ಬಿನಿತಾ ಎಸ್. ತುಂಗಾ ಮತ್ತು ಡಾ.ರಾಶಬೆಹರಿ ತುಂಗಾ, ಮುಂಬೈನ ತುಮಾಸ್ (ಫೌಂಡೇಷನ್ ಫಾರ್ ಟ್ಯುಬರ್​ಕ್ಯುಲೋಸಿಸ್, ಮಾಲ್​ನ್ಯೂಟ್ರಿಶನ್ ಅಂಡ್ ಏಡ್ಸ್)
ಸುಸ್ಥಿರತೆ:ಕೇರಳದ ರಶೀದ್ ಕೆ, ವಿಮಲ್ ಗೋವಿಂದ್ ಎಂಕೆ ಮತ್ತು ನಿಖಿಲ್ ಎನ್​ಪಿ
ನಿರ್ಗತಿಕರ ರಕ್ಷಣೆ:ಚೆನ್ನೈನ ರಾಮಲಿಂಗಂ ಪಿಎಲ್
ಬೆಳ್ಳಿ ಪ್ರಶಸ್ತಿ (ತಲಾ 10 ಲಕ್ಷ ರೂ.)
ಆರೋಗ್ಯ ರಕ್ಷಣೆ:ಬೆಂಗಳೂರಿನ ನಿತೇಶ್ ಕುಮಾರ್ ಜಾಂಗೀರ್, ನವದೆಹಲಿಯ ಅನೀಶ್ ಕರ್ಮ, ಬೆಂಗಳೂರಿನ ರಾಜಲಕ್ಷ್ಮಿ ಬೊರ್ಥಕೂರು, ಬೆಂಗಳೂರಿನ ಡಾ.ವಿಶಾಲ್ ಯು.ಎಸ್ ರಾವ್ ಮತ್ತು ಶಶಾಂಕ್ ಮಹೇಶ್.
ಗ್ರಾಮೀಣಾಭಿವೃದ್ಧಿ:ಮಧ್ಯಪ್ರದೇಶದ ರೋಹಿತ್ ಪಟೇಲ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 2 =
Remember me
