ಬೆಂಗಳೂರು:ಆಧುನಿಕ ಸಂಪರ್ಕ ಮಾಧ್ಯಮಗಳು ಹೆಚ್ಚಿದಂತೆ ಸಾಂಪ್ರದಾಯಿಕ ರೀತಿಗಳು ಮರೆತೇ ಹೋಗುವಂತಾಗಿವೆ. ನಗರ ಪ್ರದೇಶಗಳ ಜನರಂತೂ ವಾಟ್ಸಾಪ್, ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲೇ ವಿಚಾರ ವಿನಿಮಯ ಮಾಡಿಕೊಳ್ಳುವುದು ಹೆಚ್ಚಿದೆ. ಈ ಸಂದರ್ಭದಲ್ಲೂ ಹಳ್ಳಿಗಳಲ್ಲಿ ರಾಜರ ಕಾಲದಿಂದಲೂ ನಡೆದುಬಂದಿರುವ ಡಂಗೂರ ಸಾರುವ ಪದ್ಧತಿ ಇನ್ನೂ ಬದುಕಿದೆ ಎನ್ನುವುದಕ್ಕೆ ನಿದರ್ಶನ ಇಲ್ಲಿದೆ.
ಗದಗ ಜಿಲ್ಲೆಯ ಜಕ್ಕಲಿ ಗ್ರಾಮದಲ್ಲಿ ಡಂಗೂರ ಸಾರುವ ಮೂಲಕ ಕರೊನಾ ಲಸಿಕೆ ಬಗ್ಗೆ ಜಾಗೃತಿ ಮೂಡಿಸುತ್ತಿರುವ ವಿಡಿಯೊ ತುಣುಕೊಂದನ್ನು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವಿಟರ್​ನಲ್ಲಿ ಶೇರ್ ಮಾಡಿದ್ದಾರೆ. “ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ನಮ್ಮ ಹಳ್ಳಿಗರು ಸಾಂಪ್ರದಾಯಿಕ ವಿಧಾನವನ್ನು ಬಳಸುತ್ತಿರುವ ಈ ದೃಶ್ಯ ಪ್ರೇರಣಾದಾಯಕವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ಕೋವಿಡ್-19 ಲಸಿಕಾ ಅಭಿಯಾನವು ಜನಾಂದೋಲನವಾಗಬೇಕು” ಎಂದು ಸಚಿವರು ಹೇಳಿದ್ದಾರೆ.
ಗದಗ ಜಿಲ್ಲೆಯ ಜಕ್ಕಲಿ ಗ್ರಾಮದಲ್ಲಿ ಡಂಗೂರ ಸಾರುವ ಮೂಲಕ ಕೊರೊನಾ ಲಸಿಕೆಯ ಬಗ್ಗೆ ಜಾಗೃತಿ ಮೂಡಿಸುತ್ತಿರುವ ದೃಶ್ಯ ಪ್ರೇರಣಾದಾಯಕವಾಗಿದೆ.
As PM@narendramodiji said, Covid-19 vaccination drive should become a Janandolan. It's inspiring to see our villages using traditional methods to raise awareness.pic.twitter.com/cbKjJfY5ro
— Dr Sudhakar K (@mla_sudhakar)March 13, 2021

ವಿಡಿಯೋದಲ್ಲಿ, ಜಾಗಟೆ ಹಿಡಿದಿರುವ ಹಿರಿಯರೊಬ್ಬರು, “ಈಗ ಕೋವಿಡ್ ವೈರಸ್ಸಿನ ಸಲುವಾಗಿ, ನೆರೆಗಲ್ಲಿ ಆಸ್ಪತ್ರೇಗ್ ಹೋಗಿ, ಎಲ್ಲರೂ ನಾಲ್ವತ್ತೈದು ವರ್ಷ ಮೇಲ್ಪಟ್ಟೋರು ಇಂಜೆಕ್ಷನ್ ಮಾಡಿಸ್ಕೊಂಡು ಬರಬೇಕು ರೀ… ಮತ್ತ ಹೇಳಿಲ್ಲಂದೀರೀ” ಎಂದು ಸ್ಥಳೀಯ ಧಾಟಿಯಲ್ಲಿ ಡಂಗೂರ ಸಾರುವ ದೃಶ್ಯವನ್ನು ನೋಡಬಹುದು.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಹೆಚ್ಚಿದ ಕರೊನಾ : ಮದುವೆ ಸಮಾರಂಭಗಳಿಗೆ ಪೊಲೀಸರಾಗಲಿದ್ದಾರೆ ವಿಶೇಷ ಅತಿಥಿಗಳು !

ಹೇಗ್ಹೇಗೋ ಮುಟ್ಟುತ್ತಾ ‘ಪರೀಕ್ಷೆ’ ನಡೆಸುತ್ತಿದ್ದ ನರ್ಸಿಂಗ್ ಇನ್ಸ್​​ಟಿಟ್ಯೂಟ್ ಮುಖ್ಯಸ್ಥನ ಬಂಧನ

“ಆ ರಹೀ ಹೇ ಪೊಲೀಸ್… !” ಭರ್ಜರಿ ಆ್ಯಕ್ಷನ್ ಚಿತ್ರಕ್ಕೆ ತಯಾರಾಗಿ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
