ಶಿವಮೊಗ್ಗ:ಆತ್ಮರತಿಯಲ್ಲಿ ತೊಡಗಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಮಾನಸಿಕ ಸ್ಥಿತಿ ಸರಿ ಇಲ್ಲ. ಶಿವಮೊಗ್ಗದಲ್ಲಿ ಒಳ್ಳೆಯ ಮಾನಸಿಕ ತಜ್ಞರಿದ್ದಾರೆ. ಯತ್ನಾಳ್​ ಶಿವಮೊಗ್ಗಕ್ಕೆ ಬರಲಿ. ಅವರಿಗೆ ಒಳ್ಳೆಯ ಚಿಕಿತ್ಸೆ ಕೊಡಿಸುವುದು ಗೆಳೆಯನಾಗಿ ನನ್ನ ಕರ್ತವ್ಯ ಎಂದು ವಿಧಾನ ಪರಿಷತ್​ ಸದಸ್ಯ ಆಯನೂರು ಮಂಜುನಾಥ್​ ಕುಟುಕಿದ್ದಾರೆ.
ಯತ್ನಾಳ್​ ಪದೇಪದೆ ಸಿಎಂ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಬಿಎಸ್​ವೈ ಸಮರ್ಥ ನಾಯಕರು. ಅವರ ಬದಲಾವಣೆ ಸಾಧ್ಯವಿಲ್ಲ. ಯತ್ನಾಳ್​ ಮಾತಿಗೆ ಯಾವ ಬೆಲೆಯೂ ಇಲ್ಲ. ಪಕ್ಷ ಸದ್ಯದಲ್ಲೇ ಅವರ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
ಅಭದ್ರತೆ ಕಾಡಿದಾಗಲೆಲ್ಲ ಯತ್ನಾಳ್​ ಅಸಂಬದ್ಧವಾಗಿ ಮಾತನಾಡುತ್ತಾರೆ. ಕೆಲವರಿಗೆ ತಮ್ಮನ್ನು ತಾವೇ ವೈಭವೀಕರಿಸಿಕೊಳ್ಳುವ ಚಟವಿರುತ್ತದೆ. ಇದನ್ನೇ ಆತ್ಮರತಿ ಎಂದು ಕರೆಯಲಾಗುತ್ತದೆ. ಈ ಮಾನಸಿಕ ಕಾಯಿಲೆಗೆ ವೈದ್ಯರ ಅವಶ್ಯಕತೆ ಖಂಡಿತಾ ಇದೆ ಎಂದು ಆಯನೂರು ಮಂಜುನಾಥ್​ ಲೇವಡಿ ಮಾಡಿದರು.
ಬೇರೆ ಪಕ್ಷಗಳಿಗೆ ರಾಜೀನಾಮೆ ನೀಡಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದವರು ಇದ್ದಾರೆ. ಮೊದಲು ಅವರಿಗೆ ಅವಕಾಶ ನೀಡಲಿ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದ ಆಯನೂರು ಮಂಜುನಾಥ್​, ಒಂದು ವೇಳೆ ಸಚಿವ ಸ್ಥಾನ ನೀಡಿದರೆ ನಿಭಾಯಿಸಲು ಸಮರ್ಥನಿದ್ದೇನೆ. ಕೊಡುವುದಾದರೆ ಉನ್ನತ ಶಿಕ್ಷಣ ಖಾತೆಯನ್ನೇ ಕೊಡಲಿ ಎಂದರು.
ನಾನು ಹಣ ಪಡೆದಿಲ್ಲ, ಆಣೆ ಮಾಡಲು ಧರ್ಮಸ್ಥಳಕ್ಕೆ ಬರುವೆ… ಸಿಎಂ ಸಮ್ಮುಖದಲ್ಲೇ ಮುನಿರತ್ನ ಸವಾಲು

ದೆವ್ವ ಬಿಡಿಸೋದಾಗಿ ಯುವತಿಯನ್ನು ಪೊದೆಯೊಳಕ್ಕೆ ಕರೆದೊಯ್ದ ಮಂತ್ರವಾದಿ-ಮಗ, ಇವರ ದುಷ್ಕೃತ್ಯ ನೋಡಿದ್ರೆ ಬೆಚ್ಚಿಬೀಳ್ತೀರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
