ಮಂಗಳೂರು:ರಾಮಮಂದಿರದಲ್ಲಿ ಜನವರಿ 22 ರಂದು ನಡೆಯಲಿರುವ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ವಿಧಿವಿಧಾನಗಳನ್ನು ನಡೆಸಲಾಗುತ್ತಿದೆ. ರಾಮಮಂದಿರ ಟ್ರಸ್ಟ್‌ನ ಪದಾಧಿಕಾರಿಗಳ ಪ್ರಕಾರ, ಜನವರಿ 21 ರವರೆಗೆ ಧಾರ್ಮಿಕ ವಿಧಿವಿಧಾನಗಳು ನಡೆಯಲಿದ್ದು, ಪ್ರಾಣಪ್ರತಿಷ್ಠೆಯ ದಿನದಂದು ರಾಮಲಲ್ಲಾ ವಿಗ್ರಹದ ‘ಪ್ರಾಣ ಪ್ರತಿಷ್ಠಾ’ಕ್ಕೆ ಅಗತ್ಯವಿರುವ ಎಲ್ಲಾ ವಿಧಿವಿಧಾನಗಳನ್ನು ನಡೆಸಲಾಗುವುದು. 121 ಆಚಾರ್ಯರು ಧಾರ್ಮಿಕ ವಿಧಿಗಳನ್ನು ನಡೆಸುತ್ತಿದ್ದಾರೆ.
ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಸ್ಕೃತ ವಿದ್ವಾಂಸರೂ ಆಯ್ಕೆಯಾಗಿದ್ದಾರೆ. ಪ್ರಸ್ತುತ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿವಿಯ ಪರಮಾಚಾರ್ಯ ಗುರುಕುಲದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುಳ್ಯ ತಾಲೂಕಿನ ಜಾಲ್ಲೂರು ಗ್ರಾಮದ ಕೆಮನಬಳ್ಳಿಯ ಡಾ ಕೆ ಗಣಪತಿ ಭಟ್ ಅವರಿಗೆ ಈ ಅದ್ಭುತವಾದ ಅವಕಾಶ ಒದಗಿಬಂದಿದೆ.
ಕಾಶಿಯ ಖ್ಯಾತ ವಿದ್ವಾಂಸ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಮತ್ತು ಲಕ್ಷ್ಮೀಕಾಂತ್ ದೀಕ್ಷಿತ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿದ್ದು, ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲು ನೇಮಕವಾಗಿರುವ 101 ಪ್ರಧಾನ ಪುರೋಹಿತರಲ್ಲಿ ಡಾ ಕೆ ಗಣಪತಿ ಭಟ್ ಸಹ ಒಬ್ಬರು. ಇವರ ನಾಯಕತ್ವದಲ್ಲಿ 40 ಅರ್ಚಕರು ಇದ್ದಾರೆ. ಕಾಶಿಯ ವಿದ್ವಾಂಸರಾದ ಗಣೇಶ್ವರ ಶಾಸ್ತ್ರಿ ಮತ್ತು ಲಕ್ಷ್ಮೀಕಾಂತ್ ದೀಕ್ಷಿತ್ ಅವರು ಡಾ ಕೆ ಗಣಪತಿ ಭಟ್ ಅವರ ಹೆಸರನ್ನು ಸೂಚಿಸಿದ್ದಾರೆ. ಡಾ ಕೆ ಗಣಪತಿ ಭಟ್ ಅವರು ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಏಕೈಕ ಪುರೋಹಿತರಾಗಿದ್ದಾರೆ.
ಗಣಪತಿ ಭಟ್ ಅವರು ಸಂಸ್ಕೃತದಲ್ಲಿ ಪದವಿ ಶಿಕ್ಷಣದ ಬಳಿಕ ಮಂತ್ರಾಲಯ ಶ್ರೀ ರಾಘವೇಂದ್ರ ಮಠದಲ್ಲಿ ಶಾಸ್ತ್ರಾಧ್ಯಯನ ವಿಷಯದಲ್ಲಿ ಎಂಎ ಪದವಿ, ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿವಿಯಲ್ಲಿ ಪಿಎಚ್‌ ಡಿ ಪದವಿ, ಮದ್ರಾಸ್ ವಿವಿಯಲ್ಲಿ ಸಂಸ್ಕೃತ ವೇದಾಂತ ಮತ್ತು ನ್ಯಾಯಶಾಸ್ತ್ರ ವಿಷಯದಲ್ಲಿ ಮತ್ತೊಂದು ಎಂಎ ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದರು. ಭಾರತ ಸರಕಾರ ನಡೆಸಿದ ಯುಜಿಸಿ ಪರೀಕ್ಷೆಯಲ್ಲಿ ತೇರ್ಗಡೆಯಾದರು.
ಶಿಕ್ಷಣದ ಮೂಲಕ ಸಂಸ್ಕೃತ ಪಾಂಡಿತ್ಯ ಸಂಪಾದಿಸಿದ ಡಾ.ಗಣಪತಿ ಭಟ್ ಕಾಲಡಿಯ ಶಂಕರಾಚಾರ್ಯ ವಿವಿಯಲ್ಲಿ 8 ವರ್ಷ ಉಪನ್ಯಾಸಕರಾಗಿ ಬೋಧನೆ, ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿವಿಯಲ್ಲಿ ಪ್ರೊಫೆಸರ್ ಆಗಿ, ಪರೀಕ್ಷಾಂಗ ಕುಲಸಚಿವರಾಗಿ, ಪ್ರಸ್ತುತ ತಿರುಪತಿ ವಿವಿಯ ಪರಮಾಚಾರ್ಯ ಗುರು ಕುಲದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಗರ್ಭಗುಡಿ ಪ್ರವೇಶಿಸಿದ ರಾಮಲಲ್ಲಾ ಮೂರ್ತಿ; ತಡರಾತ್ರಿ ಕ್ರೇನ್ ಮೂಲಕ ವಿಗ್ರಹ ಶಿಫ್ಟ್, ಇಂದಿನ ಆಚರಣೆಗಳೇನು?

ರಾಮಮಂದಿರದ ಅಂಚೆ ಚೀಟಿ ಬಿಡುಗಡೆ ಮಾಡಿದ ಪ್ರಧಾನಿ; ಹನುಮ, ಗಣೇಶ ಸೇರಿದಂತೆ ದೇವರ ಅನೇಕ ಚಿತ್ರಗಳಿವೆ…


ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:20 + 20 =
Remember me
