ಗದಗ:ಬೆಣ್ಣೆ, ತುಪ್ಪ, ಸಾವಯವ ಜೀವಸತ್ವ ಕುರಿತು ವಿಜಯವಾಣಿಯಲ್ಲಿ ಖ್ಯಾತ ವೈದ್ಯ ಡಾ. ಗಿರಿಧರ ಕಜೆ ಅವರು ಬರೆದ ಅಂಕಣಗಳ ಸಂಗ್ರಹದ ‘ಪೋಷಕ’ ಕೃತಿಯನ್ನು ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರು ಬಿಡುಗಡೆಗೊಳಿಸಿದರು. ನಗರದ ಡಿಜಿಎಂ ಮೆಡಿಕಲ್ ಕಾಲೇಜ್ ಸಭಾಭವನದಲ್ಲಿ ಸೆಲ್ಕೋ ಸೋಲಾರ್ ಪ್ರೖೆವೇಟ್ ಲಿಮಿಡೆಟ್ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಣ್ಯರು ಮಾತನಾಡಿ, ಆಯುರ್ವೆದ ವೈದ್ಯ ಪದ್ಧತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರಗಳು ಯೋಚಿಸಬೇಕು.
ಬಾಬಾ ರಾಮದೇವ್ ಅವರು ಯೋಗದ ಕುರಿತು ಜಾಗೃತಿ ಮೂಡಿಸಿದಂತೆ, ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನದಿಂದ ಅಂತಾರಾಷ್ಟ್ರೀಯ ಯೋಗ ದಿನ ಎಂದು ಘೋಷಿಸಲ್ಪಟ್ಟಂತೆ ಆಯುರ್ವೆದ ವೈದ್ಯ ಪದ್ಧತಿಯನ್ನೂ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಅಭಿಪ್ರಾಯಪಟ್ಟರು. ಕರೊನಾ ಸನ್ನಿವೇಶದಲ್ಲಿ ದೇಶದಲ್ಲಿ ದೊಡ್ಡ ಅವಾಂತರವೇ ಸೃಷ್ಟಿಯಾಯಿತು. ಆಯುರ್ವೆದದಡಿ ಮನೆ ಮದ್ದು ಅನುಸರಿಸಿದ್ದರೆ ಸೋಂಕನ್ನು ಇನ್ನೂ ಹೆಚ್ಚು ನಿಯಂತ್ರಿಸಬಹುದಿತ್ತು. ಆಗ ಅನೇಕ ಆಯುರ್ವೆದ ತಜ್ಞರು ಸೇವೆ ನೀಡಲು ಮುಂದಾದರೂ ಸರ್ಕಾರ ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. ಆಯುರ್ವೆದದ ಪ್ರಾಮುಖ್ಯತೆಯೇ ಸರ್ಕಾರಕ್ಕೆ ತಿಳಿಯಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
‘ಆಯುರ್ವೆದವು ಪರ್ಯಾಯ ವೈದ್ಯ ಪದ್ಧತಿ ಅಲ್ಲ. ಮೂಲ ವೈದ್ಯ ಪದ್ಧತಿ ಇದಾಗಿದ್ದು, ಇದಕ್ಕೆ ಪರ್ಯಾಯವೇ ಇಲ್ಲ. ಆಯುರ್ವೆದ ಔಷಧಗಳನ್ನು ಮನೆ ಮನೆಗೆ ತಲುಪಿಸುವ ಅಗತ್ಯವಿಲ್ಲ. ಈ ಕುರಿತು ಸಮಗ್ರ ಮಾಹಿತಿಯನ್ನು ಜನರಿಗೆ ತಲುಪಿಸಿ ಜಾಗೃತಿಗೊಳಿಸಬೇಕಾಗಿದೆ’ ಎಂದು ಅಂಕಣಕಾರ ಡಾ. ಗಿರಿಧರ ಕಜೆ ಹೇಳಿದರು. ಆಯುರ್ವೆದ ಹಳತಲ್ಲ, ಹೊಸದರಲ್ಲಿ ಹೊಸತು.
ಆಯುರ್ವೆದ ಕುರಿತು ವಿಜಯವಾಣಿಯಲ್ಲಿ ಪ್ರಕಟಗೊಂಡಿರುವ 565 ಲೇಖನಗಳನ್ನು ಸೇರಿಸಿ 16 ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಇದೀಗ ಬೆಣ್ಣೆ, ತುಪ್ಪ, ಸಾವಯವ ಜೀವಸತ್ವ ಕುರಿತು ಬರೆದಿರುವ ‘ಪೋಷಕ’ ಪುಸ್ತಕವನ್ನೂ ಆಯುರ್ವೆದದ ಪೋಷಕರಂತಿರುವ ಡಾ. ವಿಜಯ ಸಂಕೇಶ್ವರ ಅವರೇ ಬಿಡುಗಡೆಗೊಳಿಸಿದ್ದು ಸಂತಸ ತಂದಿದೆ. ವಿಜಯವಾಣಿಯಲ್ಲಿ ಲೇಖನ ಬರೆಯಲು ಅವಕಾಶ ಸಿಗದಿದ್ದರೆ ಆಯರ್ವೆದ ಮನೆಮನೆ ತಲುಪಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಸದಾಶಿವಾನಂದ ಸ್ವಾಮೀಜಿ ಮಾತನಾಡಿ, ಆಯುರ್ವೆದದ ಬಗ್ಗೆ ಅನಾದರ ಶುರುವಾಗಿದ್ದರಿಂದ ಜನರಲ್ಲಿ ಹೆಚ್ಚು ಕಾಯಿಲೆ ಶುರುವಾಗಿವೆ. ಇಂಗ್ಲಿಷ್ ಔಷಧಗಳಿಂದ ಜನರ ಜೀವ ಅಪಾಯಕ್ಕೆ ಸಿಲುಕಿದೆ ಎಂದು ಕಳವಳ ವ್ಯಕ್ತಪಡಿಸಿದರು. ಪದ್ಮಶ್ರೀ ಡಾ. ವಿಜಯ ಸಂಕೇಶ್ವರ, ಸೆಲ್ಕೋ ಸೋಲಾರ್ ಲಿಮಿಡೆಟ್​ನ ಸಿಇಒ ಮೋಹನ ಭಾಸ್ಕರ ಹೆಗಡೆ, ಡಾ. ಜಿ.ಬಿ. ಪಾಟೀಲ ಮಾತನಾಡಿದರು. ಸೆಲ್ಕೋ ಸೋಲಾರ್​ನ ಉಪಪ್ರಬಂಧಕ ಪ್ರಸನ್ನ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಡಾ. ಉಮೇಶ ಪುರದ, ಇತರರು ಇದ್ದರು. ಮಹೇಶ ಕುಂದ್ರಾಳ ಹಿರೇಮಠ ಪ್ರಾರ್ಥಿಸಿದರು. ಪ್ರಸನ್ನಕುಮಾರ, ಸುವರ್ಣಾ ನಿಡಗುಂದಿ ಹಾಗೂ ಕುಮಾರ ಕಂಠಿಮಠ ನಿರ್ವಹಿಸಿದರು.
ರಾಜಕೀಯಕ್ಕೆ ಪ್ರವೇಶಿಸಲಿದ್ದಾರಾ ಕಿರಿಕ್ ಹುಡುಗಿ ರಶ್ಮಿಕಾ?: ಏನಾಗಬಹುದು ಭವಿಷ್ಯ?

ಈಜುಕೊಳವೆಂದು ಎಸ್​ಟಿಪಿಗೆ ಧುಮುಕಿದ ವಿದ್ಯಾರ್ಥಿಗಳು; ಒಬ್ಬ ಸಾವು, ಇನ್ನೊಬ್ಬ ಪ್ರಾಣಾಪಾಯದಿಂದ ಪಾರು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
