ಬೆಂಗಳೂರು: ವಿಶ್ವವನ್ನೇ ಕಾಡುತ್ತಿರುವ ಕರೊನಾ ಸೋಂಕಿಗೆ ಭಾರತದ ಪ್ರಾಚೀನ ವೈದ್ಯಕೀಯ ಪದ್ಧತಿಯಾದ ಆಯುರ್ವೆದದಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂಬ ಆಶಾಭಾವನೆ ಮೂಡಿದ ಬೆನ್ನಿಗೆ, ಇದೀಗ ಸರ್ಕಾರಿ ಆಯುರ್ವೇದ ವೈದ್ಯರೂ ದೊಡ್ಡ ಪ್ರಮಾಣದಲ್ಲಿ ಸಂಶೋಧನೆ ನಡೆಸಿ ಯಶಸ್ಸು ಗಳಿಸಿದ್ದಾರೆ.
ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ಸಾಮಾನ್ಯ ಗುಣಲಕ್ಷಣಗಳನ್ನು ಹೊಂದಿದ್ದ ಸುಮಾರು 200 ಸೋಂಕಿತರು ಆಯುರ್ವೆದ ಔಷಧದಿಂದ ಗುಣಮುಖರಾಗಿದ್ದಾರೆ. ಗುಣಲಕ್ಷಣ ಇಲ್ಲದ ಹಾಗೂ ಸಾಮಾನ್ಯ ಗುಣಲಕ್ಷಣದ ಸೋಂಕಿತರಿಗೆ ಪರಿಣಾಮಕಾರಿಯಾಗಿ ತೋರುತ್ತಿರುವ ಈ ಪ್ರಯೋಗದಿಂದಾಗಿ ಕರೊನಾ ಸಂಕಷ್ಟದಿಂದ ನಿರಾಳತೆ ಸಿಗುವ ಮುನ್ಸೂಚನೆ ಸಿಕ್ಕಿದೆ.
ಆಯುಷ್ ಔಷಧ ನೀಡಿಕೆಯಿಂದ ಉತ್ತಮ ಫಲಿತಾಂಶ ಬಂದಿದೆ. ಮುಂದೆ ಯಾವ ಹಂತಕ್ಕೆ ಕೊಂಡೊಯ್ಯಬೇಕು ಎಂಬ ಕುರಿತು ಸರ್ಕಾರದ ಸೂಚನೆಯಂತೆ ನಡೆಯುತ್ತೇವೆ.-ಮೀನಾಕ್ಷಿ ನೇಗಿ, ಆಯುಷ್ ಇಲಾಖೆ ಆಯುಕ್ತೆ
ಯಾರಿಗೂ ಉಲ್ಬಣವಾಗಿಲ್ಲ: ಕೇಂದ್ರ ಆಯುಷ್ ಇಲಾಖೆಯ ಮಾರ್ಗಸೂಚಿಗೆ ಅನುಗುಣ ರಾಜ್ಯದಲ್ಲಿನ ಸೋಂಕಿತರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಪ್ರಯೋಗ ನಡೆಸಲು ನಿರ್ಧರಿಸಲಾಯಿತು. ದಾವಣಗೆರೆ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯ ಸಮಿತಿಯೂ ಇದಕ್ಕೆ ಒಪ್ಪಿತು. ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಜಿಲ್ಲಾಸ್ಪತ್ರೆಯಲ್ಲಿ ಮೇ 12ರಿಂದ ಆಯುರ್ವೇದ ಔಷಧ ನೀಡಲು ಆರಂಭಿಸಲಾಯಿತು. ಅಮೃತಬಳ್ಳಿಯ ಅಂಶ ಇರುವ ಒಂದು ಔಷಧ, ಚ್ಯವನ್​ಪ್ರಾಶ್ ಜತೆ ಗೋಲ್ಡನ್ ಮಿಲ್ಕ್ (1.66 ಗ್ರಾಂ ಅರಿಶಿಣ, 1.66 ಗ್ರಾಂ ಅಶ್ವಗಂಧ ಹಾಗೂ 150 ಮಿ.ಲೀ. ಹಾಲು) 14 ದಿನ ನೀಡಲಾಗಿದೆ. ಮಧುಮೇಹವಿದ್ದ ಸೋಂಕಿತರಿಗೆ ಚ್ಯವನ್​ಪ್ರಾಶ್ ನೀಡಿಲ್ಲ. ಕರೊನಾದ ಸಾಮಾನ್ಯ ಗುಣಲಕ್ಷಣ ಹೊಂದಿರುವ ಹಾಗೂ ಗುಣಲಕ್ಷಣಗಳಿಲ್ಲದ ಸೋಂಕಿತರಿಗೆ ಈಗಾಗಲೆ ನೀಡುತ್ತಿರುವ ಅಲೋಪಥಿ ಔಷಧದ ಜತೆಗೆ ಆಯುರ್ವೇದ ಔಷಧ ನೀಡಲಾಗಿದೆ. ಇಲ್ಲಿಯವರೆಗೆ 255 ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದ್ದು, 196 ಜನ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಉತ್ತಮ ಅಂಶವೆಂದರೆ ಗುಣಲಕ್ಷಣ ಇಲ್ಲ್ಲವರಲ್ಲಿ ಗುಣಲಕ್ಷಣ ಕಾಣಿಸುವುದು, ಸಾಮಾನ್ಯ ಗುಣಲಕ್ಷಣ ಇದ್ದವರು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದು ಕಂಡುಬಂದಿಲ್ಲ. ಈ ಕುರಿತ ಫಲಿತಾಂಶಗಳನ್ನು ರಾಜ್ಯಕ್ಕೆ ಕಳಿಸಿಕೊಡಲಾಗಿದೆ. ಆಯುಷ್ ಮಾರ್ಗಸೂಚಿಗೆ ಅನುಗುಣವಾಗಿ ತೀವ್ರ ಸೋಂಕಿತರು, ಗರ್ಭಿಣಿಯರು, ಐಸಿಯುನಲ್ಲಿ ಇರುವವರು ಹಾಗೂ ತೀವ್ರ ಉಸಿರಾಟದ ತೊಂದರೆ (ಸಾರಿ) ಉಳ್ಳವರು ಈ ಪರೀಕ್ಷೆಯಲ್ಲಿ ಒಳಗೊಂಡಿಲ್ಲ ಎಂದು ದಾವಣಗೆರೆ ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರ ಗೌಡ ಹೇಳಿದ್ದಾರೆ.
ಇದು ಕ್ಲಿನಿಕಲ್ ಟ್ರಯಲ್ ಅಲ್ಲ, ರೋಗನಿರೋಧಕ ಶಕ್ತಿ ವರ್ಧನೆ. 10 ವರ್ಷದೊಳಗಿನ 6, 70 ವರ್ಷದೊಳಗಿನ 17 ಹಾಗೂ 71 ವರ್ಷ ಮೇಲ್ಪಟ್ಟ ಇಬ್ಬರು ಸೇರಿ 196 ಸೋಂಕಿತರು ಗುಣಮುಖರಾಗಿದ್ದಾರೆ.| ಡಾ. ಶಂಕರ ಗೌಡ, ಜಿಲ್ಲಾ ಆಯುಷ್ ಅಧಿಕಾರಿ, ದಾವಣಗೆರೆ
ಮುಂದಿನ ವಾರ ಆಯುರ್ವೇದ ವರದಿ:ಡಾ. ಗಿರಿಧರ ಕಜೆ ನೇತೃತ್ವದಲ್ಲಿ ನಡೆದ ಕ್ಲಿನಿಕಲ್ ಟ್ರಯಲ್ ಕುರಿತು ಅಧ್ಯಯನ ಆರಂಭವಾಗಿದೆ. ಆ ಕುರಿತು ಹಾಗೂ ಅದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಬಗ್ಗೆ ವರದಿ ನೀಡುವಂತೆ ರಾಜೀವ್ ಗಾಂಧಿ ಆರೋಗ್ಯ ವಿವಿ ಕುಲಪತಿ ಡಾ. ಎಸ್. ಸಚ್ಚಿದಾನಂದ್ ಅವರಿಗೆ ಸರ್ಕಾರ ತಿಳಿಸಿದೆ. ಸರ್ಕಾರದಿಂದ ಈ ಕುರಿತು ಸಂರ್ಪಸಿದ್ದಾರೆ, ಗಿರಿಧರ ಕಜೆ ಕೂಡ ತಮ್ಮ ವಿವರಣೆ ನೀಡಿದ್ದಾರೆ. ಬಹುಶಃ ಮುಂದಿನ ವಾರದಲ್ಲಿ ಈ ಕುರಿತ ಅಭಿಪ್ರಾಯ ನೀಡುತ್ತೇವೆ ಎಂದು ಡಾ.ಸಚ್ಚಿದಾನಂದ್ ತಿಳಿಸಿದ್ದಾರೆ.
10 ಲಕ್ಷ ಜನರಿಗೆ ಆಯುಷ್ ಕಿಟ್ ವಿತರಣೆ: ಆಯುಷ್ ಇಲಾಖೆಯಿಂದ ಕ್ವಾಥ, ಜೋಶಾಂದಾ ಕಷಾಯ ಹಾಗೂ ಅರ್ಕ್-ಎ-ಅಜೀಬ್ ಎಂಬ ಹನಿ, ಚ್ಯವನ್​ಪ್ರಾಶ್ ಉಳ್ಳ ಕಿಟ್ 10 ಲಕ್ಷ ಜನರಿಗೆ ವಿತರಿಸಲಾಗಿದೆ. ಈಗ ದಾಸ್ತಾನು ಮುಗಿದಿದ್ದು, ಹೆಚ್ಚುವರಿ ಧನಸಹಾಯಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮತಿ ಸಿಕ್ಕ ಬಳಿಕ ಕರೊನಾ ವಾರಿಯರ್ಸ್ ಸೇರಿ ಕರೊನಾ ಸೋಂಕಿಗೆ ತುತ್ತಾಗುವ ಅಪಾಯವಿರುವ ಹಿರಿಯ ನಾಗರಿಕರು, ಇನ್ನಿತರೆ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ನೀಡುವ ಗುರಿ ಇದೆ ಎಂದು ಆಯುಷ್ ಇಲಾಖೆ ಆಯುಕ್ತೆ ಮೀನಾಕ್ಷಿ ನೇಗಿ ಹೇಳಿದ್ದಾರೆ.
ಟಿಕ್​ಟಾಕ್ ಜಾಗಕ್ಕೆ ಟಿಕ್​ಟಾಕ್​ ಪ್ರೋ ಬಂದಿದೆ- ಆದರೆ ಅದು ಆ್ಯಪ್​ ಅಲ್ಲ ಹುಷಾರ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − eighteen =
Remember me
