ಬೆಂಗಳೂರು:ಸಾರ್ವಜನಿಕರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲು ‘ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ-ಆರೋಗ್ಯ ಕರ್ನಾಟಕ’ (ಎಬಿ-ಪಿಎಂಜೆಎವೈ-ಎಆರ್) ಸೌಲಭ್ಯ ಮತ್ತಷ್ಟು ಉತ್ತಮಗೊಂಡಿದ್ದು, ಇದಕ್ಕಾಗಿ ಹೊಸದಾಗಿ (ಎಬಿಎಆರ್‌ಕೆ ಕೋ ಬ್ರ್ಯಾಂಡೆಡ್ ಕಾರ್ಡ್) ಗುರುತಿನ ಚೀಟಿಗಳನ್ನು ವಿತರಿಸಲಾಗುತ್ತಿದೆ. ಇದಕ್ಕಾಗಿ ರಾಜ್ಯಾದ್ಯಂತ 1.50 ಕೋಟಿ ಜನರು ಹೆಸರು ನೋಂದಾಯಿಸಿದ್ದಾರೆ.
ರಾಜ್ಯದಲ್ಲಿ ಬಿಪಿಎಲ್ ಕುಟುಂಬ ಸೇರಿ ಎಲ್ಲ ಅರ್ಹ 5.09 ಕೋಟಿ ಜನರಿಗೆ ಕಾರ್ಡ್ ವಿತರಿಸುವ ಗುರಿ ಹೊಂದಲಾಗಿದೆ. ದೀರ್ಘಕಾಲ ಬಾಳಿಕೆ ಬರುವಂತೆ ಆಧಾರ್ ಕಾರ್ಡ್ ಮಾದರಿಯಲ್ಲಿ ಈ ಕಾರ್ಡ್ ವಿತರಿಸಲಾಗುತ್ತಿದೆ. ವಿಶೇಷತೆ ಏನು?:
ಈ ‘ಕೋ ಬ್ರ್ಯಾಂಡೆಡ್ ಕಾರ್ಡ್’ ಬಳಸಿ ಕರ್ನಾಟಕ ಮಾತ್ರವಲ್ಲ, ದೇಶದ ಯಾವುದೇ ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ (ರೆರಲ್ ಆಧಾರದಲ್ಲಿ) ಬಿಪಿಎಲ್ ಕಾರ್ಡುದಾರರು ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಆದರೆ ಕರ್ನಾಟಕ ಹೊರತುಪಡಿಸಿ ಹೊರ ರಾಜ್ಯಗಳಲ್ಲಿ ಎಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತ ಚಿಕಿತ್ಸೆ ಸಿಗುವುದಿಲ್ಲ (ಕರ್ನಾಟಕದಲ್ಲಿ ಮಾತ್ರ ಎಪಿಎಲ್ ಕಾರ್ಡ್ ಹೊಂದಿರುವವರಿಗೆ ಎಬಿಎಆರ್‌ಕೆ ಯೋಜನೆಯಡಿ ಶೇ.30 ರಿಯಾಯಿತಿ ದರದಲ್ಲಿ ಚಿಕಿತ್ಸೆ ಲಭ್ಯವಿದೆ).
ಕ್ಯೂಆರ್ ಕೋಡ್:ಆಧಾರ್ ಮಾದರಿಯಲ್ಲಿ ಕೋ ಬ್ರ್ಯಾಂಡೆಡ್ ಕಾರ್ಡ್‌ನಲ್ಲೂ ಆಯುಷ್ಮಾನ್ ಭಾರತ ಹೆಲ್ತ್ ಅಕೌಂಟ್ ನಂಬರ್ ಇರುತ್ತದೆ. ಅಲ್ಲದೆ ಈ ಕಾರ್ಡ್‌ನಲ್ಲಿರುವ ಕ್ಯೂಆರ್ ಕೋಡ್ ಬಳಸಿದರೆೆ ಇದರಿಂದ ರೋಗಿಯ ಆರೋಗ್ಯದ ಸಂಪೂರ್ಣ ಮಾಹಿತಿ ವೈದ್ಯರಿಗೆ ಲಭ್ಯವಾಗಲಿದೆ. ಇದರಿಂದ ರೋಗಿಗೆ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ.
ಹೊಸ ಕಾರ್ಡ್ ಪಡೆಯುವುದು ಹೇಗೆ?‘ಕೋ ಬ್ರ್ಯಾಂಡೆಡ್ ಕಾರ್ಡ್’ ಅನ್ನು ಹತ್ತಿರದ ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್, ಸಿಟಿಜನ್ ಸರ್ವೀಸ್ ಸೆಂಟರ್ (ಸಿಎಸ್‌ಸಿ) ಪಡೆಯಬಹುದು. ಯೋಜನೆ ಸೌಲಭ್ಯ ಪಡೆಯಲು ಲಾನುಭವಿಗಳಿಗೆ ಈ ಮೊದಲು ಆರೋಗ್ಯ ಕಾರ್ಡ್‌ವೊಂದಕ್ಕೆ ಪಿವಿಸಿ ಕಾರ್ಡ್‌ಗೆ- 35 ರೂ. ಹಾಗೂ ಎ4 ಪೇಪರ್ ಪ್ರಿಂಟ್- 10 ರೂ.ನಂತೆ 1.78 ಕೋಟಿ ಮಂದಿಗೆ ಕಾರ್ಡ್ ವಿತರಿಸಲಾಗಿತ್ತು. ಆದರೆ ಈಗ ಪ್ರತಿ ಕಾರ್ಡ್‌ಗೆ ಸರ್ಕಾರವೇ 30 ರೂ. ನೀಡುತ್ತಿರುವುದರಿಂದ ಲಾನುಭವಿಗಳಿಗೆ ಉಚಿತವಾಗಿ ದೊರೆಯಲಿದೆ. ಹಳೆಯ ಕಾರ್ಡ್ ಮೂಲಕವೂ ಲಾನುಭವಿಗಳು ಚಿಕಿತ್ಸೆ ಪಡೆಯಬಹುದಾಗಿದೆ. ಆದರೆ ಇದಕ್ಕೆ ಹೊರ ರಾಜ್ಯಗಳಲ್ಲಿ ಸೇವೆ ದೊರೆಯುವುದಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 5 =
Remember me
