ರುದ್ರಣ್ಣ ಹರ್ತಿಕೋಟೆ ಬೆಳಗಾವಿರಾಜ್ಯದ 315 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಕ್ರಮ- ಸಕ್ರಮದ ಬದಲು ನಿಯಮ ಉಲ್ಲಂಘಿಸಿದ ಕಟ್ಟಡಗಳಿಗೆ ಹಾಗೂ ಅಕ್ರಮ ಬಡಾವಣೆಗಳ ನಿವೇಶನಗಳಿಗೆ ಬಿ ಖಾತಾ ನೀಡುವುದಕ್ಕೆ ಸಂಬಂಧಿಸಿದಂತೆ ಎರಡು ಕಾಯ್ದೆಗಳಿಗೆ ತಿದ್ದುಪಡಿ ತರಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಅದರೊಂದಿಗೆ ನಾಗರಿಕರ ಬಹು ವರ್ಷಗಳ ಕನಸು ನನಸಾಗಲಿದೆ.
ಅಕ್ರಮ ಕಟ್ಟಡಗಳನ್ನು ಸಕ್ರಮ ಮಾಡಲು ರೂಪಿಸಿದ್ದ ಕಾಯ್ದೆಗೆ ಸುಪ್ರೀಂಕೋರ್ಟ್​ನಲ್ಲಿ ತಡೆ ಇದೆ. ಆದ್ದರಿಂದ ಸರ್ಕಾರಕ್ಕೆ ತೆರಿಗೆಯೂ ಬರುತ್ತಿಲ್ಲ, ಹೊರೆಯೂ ಜಾಸ್ತಿಯಾಗುತ್ತಿದೆ ಎಂಬ ಕಾರಣಕ್ಕೆ ಪರ್ಯಾಯ ಕ್ರಮ ಕೈಗೊಳ್ಳಲಾಗುತ್ತಿದೆ. ಬಿಬಿಎಂಪಿ ಹೊರತುಪಡಿಸಿದ 315 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಅನ್ವಯವಾಗುವಂತೆ ಬಿ ಖಾತೆ ವ್ಯವಸ್ಥೆ ಜಾರಿಗೆ ತರಲು ಕರ್ನಾಟಕ ಪೌರಸಂಸ್ಥೆಗಳ ಕಾಯ್ದೆ ಹಾಗೂ ಕರ್ನಾಟಕ ಮಹಾನಗರಪಾಲಿಕೆಗಳ ಕಾಯ್ದೆಗೆ ತಿದ್ದುಪಡಿ ತರಲಾಗುತ್ತದೆ. ತಿದ್ದುಪಡಿ ಸ್ವರೂಪ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹ ಹೆಚ್ಚಳ ಕುರಿತ ಅಂಶಗಳನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಂಪುಟ ಉಪ ಸಮಿತಿ ಅಂತಿಮಗೊಳಿಸಿದ್ದು, ವರದಿ ಸಲ್ಲಿಸಲಿದೆ. ಆ ನಂತರ ತಿದ್ದುಪಡಿ ವಿಧೇಯಕಗಳಿಗೆ ಅನುಮೋದನೆ ನೀಡಲಾಗುತ್ತದೆ.
ಫಾರಂ 3 ಲಭ್ಯ:ಈ ಅನಧಿಕೃತ ಕಟ್ಟಡಗಳಿಗೆ ಫಾರಂ 3 ಸಿಗುತ್ತದೆ. ಇ-ಆಸ್ತಿಯ ವ್ಯಾಪ್ತಿಗೆ ಒಳಪಡಿಸಲಾಗುತ್ತವೆ. ಇದರಿಂದ ಸಾಲ ಪಡೆಯಲು ಹಾಗೂ ಇತರ ಉದ್ದೇಶಕ್ಕೆ ಅನುಕೂಲವಾಗುತ್ತದೆ. ಮನೆ ಮತ್ತು ನಿವೇಶನಗಳು ಕಾನೂನುಬದ್ಧ ಎನಿಸಲಿವೆ.
ತೆರಿಗೆ ಪ್ರಮಾಣ:ಅಕ್ರಮ ಕಟ್ಟಡಗಳಿಗೆ ಮೊದಲ ವರ್ಷ ದುಪ್ಪಟ್ಟು ತೆರಿಗೆ ವಿಧಿಸಬೇಕು ಹಾಗೂ ಆನಂತರದ ವರ್ಷಗಳಿಗೆ ನಿಗದಿತ ದರವನ್ನು ಪಡೆಯಬೇಕು ಎಂಬುದನ್ನು ಹೊಸದಾಗಿ ತರುತ್ತಿರುವ ಕಾಯ್ದೆಯಲ್ಲಿ ತಿಳಿಸಲಾಗಿದೆ.
ತೆರಿಗೆ ಸಂಗ್ರಹಿಸದಿದ್ದರೆ ದಂಡ:ಸ್ಥಳೀಯ ಸಂಸ್ಥೆಯಲ್ಲಿ ತೆರಿಗೆ ಸಂಗ್ರಹಿಸುವಲ್ಲಿ ಅಧಿಕಾರಿ/ಸಿಬ್ಬಂದಿ ನಿರ್ಲಕ್ಷ್ಯ ತೋರಿಸಿದರೆ ಅಂಥವರಿಗೆ 50 ಸಾವಿರ ರೂ. ದಂಡ ಹಾಗೂ 15 ದಿನಗಳ ಜೈಲುಶಿಕ್ಷೆ ಪ್ರಸ್ತಾಪಿಸಲಾಗಿದೆ. ತೆರಿಗೆ ವಸೂಲಿ ಹೆಚ್ಚಾದರೆ ಮಾತ್ರ ನಗರಗಳ ಬೆಳವಣಿಗೆಗೆ ತಕ್ಕಂತೆ ಮೂಲಸೌಕರ್ಯ ಒದಗಿಸಲು ಸಾಧ್ಯವಾಗುತ್ತದೆ.
ಮುಂದಿನ ಅಧಿವೇಶನವರೆಗೆ ಕಾಯಬೇಕು:ಉಪಸಮಿತಿ ತಿದ್ದುಪಡಿ ಕಾಯ್ದೆ ಸಿದ್ಧಪಡಿಸಿದೆ. ಆದರೆ, ಅಧಿವೇಶನದ ಬಳಿಕ ಬೆಂಗಳೂರಿನಲ್ಲಿ ನಡೆಯುವ ಸಂಪುಟ ಸಭೆಯಲ್ಲಿಯೇ ಅನುಮೋದನೆ ನೀಡಬೇಕಾಗುತ್ತದೆ. ಆನಂತರ ಮುಂದಿನ ಅಧಿವೇಶನದಲ್ಲಿ ಮಂಡಿಸಬೇಕಾಗುತ್ತದೆ.
ನಗರಗಳಲ್ಲಿ ಜನಸಂಖ್ಯೆ ಹೆಚ್ಚಳ:ನಗರ ಪ್ರದೇಶದ ಜನಸಂಖ್ಯೆ ರಾಜ್ಯದ ಜನಸಂಖ್ಯೆಯ ಶೇ.38.67 ರಷ್ಟಿದೆ. ಕಳೆದ 12 ವರ್ಷಗಳಲ್ಲಿ ನಗರಗಳಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ. ಅಂದರೆ ಗ್ರಾಮೀಣ ಭಾಗದಿಂದ ಗುಳೆ ಜಾಸ್ತಿಯಾಗುತ್ತಿದೆ. ಅದಕ್ಕೆ ತಕ್ಕಂತೆ ಮೂಲಸೌಕರ್ಯ ಕಲ್ಪಿಸುವುದಕ್ಕೆ ಸ್ಥಳೀಯ ಸಂಸ್ಥೆಗಳಲ್ಲಿ ಹಣಕಾಸಿನ ಕೊರತೆಯಾಗುತ್ತಿದೆ.
ಏನು ತಿದ್ದುಪಡಿ?:ಕರ್ನಾಟಕ ಪೌರಸಂಸ್ಥೆಗಳ ಕಾಯ್ದೆ ಹಾಗೂ ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆಗೆ ತಿದ್ದುಪಡಿ ತರಲಾಗುತ್ತದೆ. ಪ್ರತಿ ಕಟ್ಟಡ, ಖಾಲಿ ಜಾಗ, ನಿಯಮ ಉಲ್ಲಂಘಿಸಿ ನಿರ್ವಿುಸಿದ ಕಟ್ಟಡ, ಅನಧಿಕೃತ ಬಡಾವಣೆ, ರೆವೆನ್ಯೂ ನಿವೇಶನ, ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಕಟ್ಟಿದ ಕಟ್ಟಡ, ಪ್ರಮಾಣಪತ್ರ ಪಡೆಯದೇ ನಿರ್ವಿುಸಿದ ಕಟ್ಟಡಗಳಿಗೆ ದಂಡ ವಿಧಿಸಿ ತೆರಿಗೆ ವ್ಯಾಪ್ತಿಗೆ ತರಲಾಗುತ್ತದೆ.
ಸಕ್ರಮ ಅಲ್ಲ:ಅನಧಿಕೃತ ಕಟ್ಟಡಗಳನ್ನು ತೆರಿಗೆ ವ್ಯಾಪ್ತಿಗೆ ತರುವುದು ಮೂಲಸೌಕರ್ಯ ಕಲ್ಪಿಸುವ ಉದ್ದೇಶಕ್ಕಷ್ಟೇ. ಬಿ ಖಾತೆ ವ್ಯಾಪ್ತಿಗೆ ತಂದ ಕೂಡಲೇ ಸಕ್ರಮ ಆಗುವುದಿಲ್ಲ. ಸ್ಥಳೀಯ ಸಂಸ್ಥೆಗಳ ರಿಜಿಸ್ಟ್ರಾರ್​ನಲ್ಲಿ ಪ್ರತ್ಯೇಕವಾಗಿ ನಮೂದಿಸಲಾಗುತ್ತದೆ.
ಉದ್ದೇಶವೇನು?:ಪೌರಸಂಸ್ಥೆಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯೇ ಆದಾಯದ ಮೂಲ. ಆದರೆ, ಈಗ ಅನಧಿಕೃತ ಆಸ್ತಿಗಳೇ ಹೆಚ್ಚಾಗಿರುವ ಕಾರಣ ಆರ್ಥಿಕ ಕೊರತೆ ಇದೆ. ಪೌರಸಂಸ್ಥೆಗಳಲ್ಲಿ ವಸೂಲಿಯಾಗುತ್ತಿರುವ ತೆರಿಗೆಯ ಪ್ರಮಾಣ ಕೇವಲ 1156.89 ಕೋಟಿ ರೂ. ಹೊರೆ ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಕೇಂದ್ರ ಪುರಸ್ಕೃತ ಯೋಜನೆಗಳಿಗೆ ನೀಡಬೇಕಾಗಿರುವ ಪಾಲು, ರಾಜ್ಯದ ನಗರ ಮೂಲಸೌಕರ್ಯ ಅಭಿವೃದ್ಧಿ ನಿಗಮ, ಕರ್ನಾಟಕ ಕುಡಿವ ನೀರು, ಒಳಚರಂಡಿ ಮಂಡಳಿಯ ಯೋಜನೆಗಳಿಂದ 5532.93 ಕೋಟಿ ರೂ.ಗಳ ಹೊರೆ ಸ್ಥಳೀಯ ಸಂಸ್ಥೆಗಳ ಮೇಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
