ಬೆಂಗಳೂರು:ನಗರದ ಉತ್ತಮ ಆಡಳಿತಕ್ಕಾಗಿ ತಳಮಟ್ಟದಲ್ಲಿ ನಾಗರಿಕ ನಾಯಕರನ್ನು ಸಿದ್ದಗೊಳಿಸುವ ಬಿ.ಪ್ಯಾಕ್‍ನ “ನಾಗರಿಕ ನಾಯಕತ್ವ ಸಿದ್ಧತೆ ಕಾರ್ಯಗಾರ” ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದು 8ನೇ ಆವೃತ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ ಎಂದು ಬಿ.ಪ್ಯಾಕ್ ಸಂಸ್ಥೆಯ ಕಾರ್ಯಸಂಯೋಜಕರಾದ ರಾಘವೇಂದ್ರ ಪೂಜಾರಿ ಹೆಚ್.ಎಸ್. ಪ್ಯಾಕ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು
ಬೆಂಗಳೂರನ್ನು ಅಭಿವೃದ್ಧಿಪಡಿಸುವ ಕುರಿತು ಅತೀವ ಆಸಕ್ತಿಯಿಂದ ಬಿ.ಪ್ಯಾಕ್ ಕೆಲವು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಅದರಲ್ಲಿ ನಾಗರಿಕ ನಾಯಕತ್ವ ತರಬೇತಿ (ಬಿ.ಕ್ಲಿಪ್) ಕಾರ್ಯಕ್ರಮವು ಒಂದು. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸಮಸ್ಯೆಗಳಿಗೆ ಕಾರಣಗಳನ್ನು ಹಾಗೂ ಅದನ್ನು ಬಗೆಹರಿಸುವ ವಿಧಾನಗಳನ್ನು ಈ ತರಗತಿಯಲ್ಲಿ ತಿಳಿಸಿಕೊಡಲಾಗುತ್ತದೆ. ಬೆಂಗಳೂರಿನ ಬಗ್ಗೆ ಕಾಳಜಿ ಹಾಗೂ ಬದ್ದತೆಯುಳ್ಳ ನಾಗರಿಕರಿಗೆ ತರಬೇತಿ ನೀಡಿ, ಬೆಂಗಳೂರಿನಲ್ಲಿರುವ ಸಮಸ್ಯೆಗಳನ್ನು ತಳಮಟ್ಟದಲ್ಲೇ ಬಗೆಹರಿಸುವುದು ಬಿ.ಪ್ಯಾಕ್ ಉದ್ದೇಶವಾಗಿದೆ.
ಉತ್ತಮ ಸಮಾಜ ನಿರ್ಮಿಸುವ ಉದ್ದೇಶದಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಿ ನಗರವನ್ನು ಪರಿವರ್ತಿಸುವ ಅಭಿಲಾಷೆ ಹೊಂದಿರುವ ಪ್ರತಿಭಾನ್ವಿತರನ್ನು ಗುರುತಿಸಿ ಅವರಿಗೆ ಈ ಕಾರ್ಯಕ್ರಮದ ಮೂಲಕ ತರಬೇತಿ ನೀಡಲಾಗುತ್ತದೆ. ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಹುರಿಯಾಳುಗಳಿಗೆ ಸಾರ್ವಜನಿಕ ನೀತಿಯ ವಿಶ್ಲೇಷಣೆ, ನಗರಾಡಳಿತ, ರಾಜಕೀಯ ಪರಿಸ್ಥಿತಿ ಮತ್ತು ಚುನಾವಣಾ ಪ್ರಚಾರದಲ್ಲಿನ ರೀತಿರಿವಾಜು ಕಾರ್ಯತಂತ್ರಗಳನ್ನು ಕಲಿಸಲಾಗುತ್ತದೆ. 2021 ಸಾಲಿನ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಬಯಸುವ ಅಭ್ಯರ್ಥಿಗಳಿಗೆ ಇದು ವರದಾನ ಎನ್ನಬಹುದು.
ರಾಜಕೀಯ ಮತ್ತು ಸಮಾಜಸೇವೆ ಒಂದು ನಾಣ್ಯದ ಎರಡು ಮುಖಗಳು ಎಂದು ಬಿಂಬಿಸುವುದೇ ಬಿ.ಕ್ಲಿಪ್ ರ್ಯಕ್ರಮದ ಮೂಲ ಉದ್ದೇಶ. ಬೆಂಗಳೂರು ನಗರದಲ್ಲಿ ಸಮಾಜಮುಖಿ ಕಾರ್ಯಗಳು ಮಾಡುತ್ತಿರುವ ಹಲವು ನಾಗರಿಕರಿದ್ದಾರೆ. ಅದರಲ್ಲೂ ಮಹಿಳೆಯರು ಮತ್ತು ಯುವಕರು ಮುಂಚುಣಿಯಲ್ಲಿದ್ದಾರೆ. ಸಮಾಜಮುಖಿ ಕಾರ್ಯಗಳು ನಡೆಸುತ್ತಿರುವ ಸಮಾನ ಮನಸ್ಕರನ್ನು ಒಂದೇ ವೇದಿಕೆಯಲ್ಲಿ ತರುವುದು ಅವರ ದ್ವನಿಯನ್ನು ಬಲಪಡಿಸುವುದು ನಮ್ಮ ಪ್ರಯತ್ನವಾಗಿದೆ.
ಕಳೆದ 7 ವರ್ಷಗಳಿಂದ 300 ಕ್ಕೂ ಹೆಚ್ಚು ಬೆಂಗಳೂರು ಕುರಿತು ಕಾಳಜಿಯುಳ್ಳ ನಾಗರಿಕ ನಾಯಕರಿಗೆ ತರಬೇತಿ ನೀಡಲಾಗಿದೆ. ಎಲ್ಲಾ ರಾಜಕೀಯ ಪಕ್ಷಗಳಿಂದ ನಾಯಕರುಗಳು ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ. ತರಬೇತಿಪಡೆದವರು ತಮ್ಮ ವಾರ್ಡ್‍ಗಳಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ 8 ನೇ ಆವೃತ್ತಿಗೆ ಅರ್ಜಿಗಳನ್ನು ಆಹ್ವಾನಿಸಿ ಬೆಂಗಳೂರಿನ ಅಭಿವೃದ್ದಿಗೆ ಬದ್ದತೆ ಹೊಂದಿರುವ ನಾಗರಿಕರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ರಾಘವೇಂದ್ರ ಪೂಜಾರಿಯವರು ತಿಳಿಸಿದರು.
ಮಾಧ್ಯಮವನ್ನುದೇಶಿಸಿ ಮಾತನಾಡಿ ಬಿ.ಪ್ಯಾಕ್ ಸದಸ್ಯರು ಹಾಗು ಬಿ.ಕ್ಲಿಪ್ ನ ಮಾರ್ಗದರ್ಶಕರಾದ ಆನಂದ್ ಗುಂಡುರಾವ್, “ಬಿ.ಕ್ಲಿಪ್ ಕಾರ್ಯಕ್ರಮವೂ ಬಿ.ಪ್ಯಾಕ್ ನ ಒಂದು ವಿಶೇಷ ಕಾರ್ಯಕ್ರಮವಾಗಿದ್ದು ಬದ್ದ, ನಿಸ್ವಾರ್ಥ, ವಿಶೇಷ, ಮತ್ತು ಪ್ರಾಮಾಣಿಕ ವ್ಯಕ್ತಿಗಳನ್ನು ಪ್ರೋತ್ಸಾಹಿಸುತ್ತೇವೆ. ನಗರದ ಸುಧಾರಣೆಗಾಗಿ ಇಂತಹ ವ್ಯಕ್ತಿಗಳನ್ನು ನಾಗರೆಕ ನಾಯಕರನ್ನಾಗಿ ಬೆಳಸಬೇಕೆಂದು ಇಚ್ಚಿಸುತ್ತೇವೆ.”
ರಾಜಾಜಿನಗರ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮತ್ತು ಬಿ.ಕ್ಲಿಪ್ ಕಾರ್ಯಕ್ರಮದ 3ನೇ ಬ್ಯಾಚ್ ನ ಅಭ್ಯರ್ಥಿಯಾಗಿದ್ದ ಲಿಂಗರಾಜು ಅವರು ಮಾಧ್ಯಮವನ್ನುದ್ದೇಶಿ ಮಾತನಾಡುತ್ತ, “ ಯಾವುದೇ ಪಕ್ಷದ ರಾಜಕೀಯ ಆಕಾಂಕ್ಷಿಗಳಿಗೆ ಆಡಳಿತ ಮತ್ತು ಸಾರ್ವಜನಿಕ ನೀತಿಯ ಬಗ್ಗೆ ಬಿ.ಕ್ಲಿಪ್ ಕಾರ್ಯಕ್ರಮದಲ್ಲಿ ತಿಳಿದುಕೊಳ್ಳಬಹುದು. ಕಾರ್ಯಕ್ರಮದಲ್ಲಿ ತಿಳಿಸುವ ಎಲ್ಲ ವಿಚಾರಗಳು ಒಬ್ಬ ವ್ಯಕ್ತಿಯನ್ನು ಉತ್ತಮ ಜನ ನಾಯಕನಾಗಲು ಪ್ರೋತ್ಸಾಹಿಸುತ್ತದೆ. ಪಕ್ಷದೊಳಗಿನ ನನ್ನ ಬೆಳವಣಿಗೆಗೆ ಬಿ.ಕ್ಲಿಪ್ ನಲ್ಲಿ ಪಡೆದ ಜ್ಞಾನವು ಬಹುಮುಖ್ಯ ಪಾತ್ರ ವಹಿಸಿದೆ. ಹಾಗೂ ರಾಜಕೀಯವಾಗಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದಿರುವ ಪ್ರತಿಯೊಬ್ಬರಿಗೆ ಬಿ.ಕ್ಲಿಪ್ ಕಾರ್ಯಕ್ರಮವನ್ನು ನಾನು ಶಿಫಾರಸ್ಸು ಮಾಡುತ್ತೇನೆ ಎಂದರು.
ಬೆಂಗಳೂರು ನಗರ, ದಕ್ಷಿಣ, ಬಸವನಗುಡಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ಮತ್ತು ಬಿ.ಕ್ಲಿಪ್ 5 ನೇ ಅಭ್ಯರ್ಥಿಯಾಗಿದ್ದ ಎಂ. ಎಸ್. ಮಂಜುಳಾ ಮಾತನಾಡಿ ರಾಜಕೀಯದಲ್ಲಿನ ಮಹಿಳೆಯರ ಭಾಗವಹಿಸುವಿಕೆ ಕಡಿಮೆಯಾಗಿದೆ. ಹೀಗಿರುವಾಗ ಬಿ.ಕ್ಲಿಪ್ ಕಾರ್ಯಕ್ರಮವು ನಮಂತಹ ಮಹಿಳೆಯರಿಗೆ ಉತ್ತಮ ರಾಜಕೀಯ ನಾಯಕಿಯರಾಗಳು ಜ್ನಾನವನ್ನು ಮಾತ್ರ ನೀಡದೆ ಅದಕ್ಕೆ ಅವಶ್ಯಕತೆ ಇರುವ ಆತ್ಮವಿಶ್ವಾಸ ಮತ್ತು ಮಾರ್ಗದರ್ಶನವನ್ನು ಸಹ ನೀಡಿದೆ. ರಾಜಕೀಯ ಅನುಭವಿಯಿಂದ ಪಕ್ಷದ ಕಾರ್ಯಕಾರಿಣಿಯಾಗಿ ಬೆಳೆದ ನನ್ನ ಪ್ರಯಾಣದಲ್ಲಿ ಬಿ.ಕ್ಲಿಪ್ ಬಹು ಮುಖ್ಯ ಪಾತ್ರ ವಹಿಸುತ್ತದೆ. ಈ ಕಾರ್ಯಕ್ರಮಕ್ಕೆ ಎಲ್ಲಾ ಮಹಿಳೆಯರು ಸೇರಿ ರಾಜಕೀಯ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ಕೋರುತ್ತೇನೆಂದರು.
ಬಿ.ಕ್ಲಿಪ್ಕಾ ರ್ಯಕ್ರಮವು ಎರಡು ಹಂತಗಳಲ್ಲಿ ನಡೆಯಲಿದೆ1. ತರಗತಿಗಳಲ್ಲಿ ತರಬೇತಿ – 3 ತಿಂಗಳು (ವಾರದಲ್ಲಿಎರಡುದಿನ, ಒಟ್ಟು 24 ದಿನಗಳು, ಶುಕ್ರವಾರ ಸಂಜೆ 5 ರಿಂದ 8 ಗಂಟೆಯವರೆಗೆ ಮತ್ತು ಶನಿವಾರ ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:00 ಗಂಟೆಯವರೆಗೆ)2. ಕ್ಷೇತ್ರಧಾರಿತ ಕಾರ್ಯಾನುಭವ 6 ತಿಂಗಳು (ತಮ್ಮ ವಾರ್ಡಿನ ಅಭಿವೃದ್ಧಿಗಾಗಿ ಒಂದು ಧ್ಯೇಯ, ದೃಷ್ಠಿಯನ್ನು ಅಭಿವೃದ್ಧಿಪಡಿಸಬೇಕು.
ಅರ್ಜಿಸಲ್ಲಿಸುವ ವಿಧಾನ:(ಆನ್ಲೈನ್ ತ್ತು ಆಫ್‍ಲೈನ್)1.https://bpac.in/ಅಂತರ್ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.2.ಬಿ.ಪ್ಯಾ ಕ್ಕಛೇರಿ – ನಂ 4/6, ನೆಲಮಹಡಿ, ಮಿಲ್ಲರ್ ಸ್ತೆ, ವಿಕ್ರಂ ಆಸ್ಪತ್ರೆ ಎದುರು, ಬೆಂಗಳೂರು – 52 ಇಲ್ಲಿಗೆ ಭೇಟಿ ನೀಡಿ ಅರ್ಜಿ ಪಡೆದು ಸಲ್ಲಿಸಬಹುದು.3. ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ : 30 ನವೆಂಬರ್ 20204.ಹೆಚ್ಚಿನ ಮಾಹಿತಿಗೆ: 9739328099 ಮತ್ತು 080-41521797
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
