ಚಿತ್ರದುರ್ಗ:ಭದ್ರಾವತಿಯನ್ನು ಕಾಂಗ್ರೆಸ್​ನವರು ಪಾಕಿಸ್ತಾನ ಮಾಡಲು ಹೊರಟಿದ್ದಾರೆಯೇ? ಎಂದು ಕಾಂಗ್ರೆಸ್ ನಾಯಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಪ್ರಶ್ನಿಸಿದರು.
ತಾಲೂಕಿನ ಬೆಳಗಟ್ಟ ಶ್ರೀ‌ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ಕಾಲ ಚಕ್ರ ಹೀಗೆ ಇರುವುದಿಲ್ಲವೆಂದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಾನು ಹೇಳಿದ್ದೆ. ಬಿಜೆಪಿ, ಹಿಂದು ಪರ ಸಂಘಟನೆಯ ಸಾವಿರಾರು ಕಾರ್ಯಕರ್ತರ ವಿರುದ್ಧ ಕೇಸು ಹಾಕಿ ರೌಡಿ ಶೀಟ್ ಒಪನ್ ಮಾಡಿದ್ದೀರಲ್ಲಾ? ಆಗ ಎಲ್ಲಿ ಹೋಗಿತ್ತು ನಿಮ್ಮ ಬುದ್ದಿ? ಸ್ವಾರ್ಥದಿಂದ ಶಾಸಕ ಸಂಗಮೇಶ್ ಮಗನ ವಿರುದ್ಧ ಪ್ರಕರಣ ದಾಖಲಿಸಿಲ್ಲ ಎಂದರು.
ಇದನ್ನೂ ಓದಿರಿ:ವೈರಲ್ ಆಗ್ತಿದೆ ಬುಮ್ರಾ ಕುರಿತು ಭಾವಿ ಪತ್ನಿ ಸಂಜನಾ ಗಣೇಶನ್​ ಮಾಡಿದ್ದ ಹಳೆಯ ಟ್ವೀಟ್​..!
ಭದ್ರಾವತಿಯಲ್ಲಿ ಪ್ರತಿಭಟನೆ ನಡೆಸಲು ನಿಮಗೆ ಯಾವ ನೈತಿಕತೆ ಇದೆ ಎಂದು ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ‌ ಸಚಿವ ಜನಾರ್ದನ ರೆಡ್ಡಿ ಎಲ್ಲೂ ಓಡಾಡಬಾರದೆ? ಈಗ ಚುನಾವಣೆ ಬಂದಿಲ್ಲ. ನಾನು ಮೊಳಕಾಲ್ಮೂರಿಗೆ ಬಂದಿದ್ದು ಪಕ್ಷದ ತೀರ್ಮಾನ. ಉಸ್ತುವಾರಿ ಬದಲಿಸಿ ಎಂದು ಕೇಳಿಲ್ಲ. ಜಲಸಂಪನ್ಮೂಲ ಖಾತೆ ಹಂಚಿಕೆ ಸಿಎಂ ವಿವೇಚನೆಗೆ ಬಿಟ್ಟಿದೆ. ಸಿಡಿ ಪ್ರಕರಣದಲ್ಲಿ‌ ಸರ್ಕಾರ ಕಾನೂನು ಕ್ರಮ ಜರುಗಿಸಲಿದೆ ಎಂದರು.
12 ದಿನಗಳಲ್ಲಿ 7,166 ಮಂದಿಗೆ ಕೋವಿಡ್ ಸೋಂಕು! ರಾಜ್ಯದಲ್ಲಿ ಕರೊನಾ ಮತ್ತೆ ಏರುಮುಖ| 833 ಪ್ರಕರಣ ದೃಢ | 32 ಜನರಲ್ಲಿ ರೂಪಾಂತರ ವೈರಸ್

ಬಾಯ್​ಫ್ರೆಂಡ್​ ಮುಖವಾಡ ಕಳಚಿಬಿದ್ದ ಬೆನ್ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಯುವತಿ..!

ರಮೇಶ್ ಜಾರಕಿಹೊಳಿ ರಾಜೀನಾಮೆ: ಜಲ ಸಂಪನ್ಮೂಲ ಖಾತೆ ಮೇಲೆ ಯಾರ ಕಣ್ಣು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − two =
Remember me
