ಬೆಂಗಳೂರು:ಬೈಎಲೆಕ್ಷನ್​ಗಳ ಯಶಸ್ಸಿನ ಹಿಂದೆ ಬಿವೈ ವಿಜಯೇಂದ್ರ ಮಾಸ್ಟರ್ ಮೈಂಡ್ ಇರುವುದರಿಂದ ವಿಜಯೇಂದ್ರ ಉಸ್ತುವಾರಿಗೆ ಬೇಡಿಕೆ ಹೆಚ್ಚಾಗಿದೆ.
ಮಸ್ಕಿ ಉಪಚುನಾವಣೆಗೂ ವಿಜಯೇಂದ್ರ ಅವರಿಗೆ ಉಸ್ತುವಾರಿ ಕೊಡಿ ಎಂದು ಸಿಎಂ ಯಡಿಯೂರಪ್ಪ ಅವರಿಗೆ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಬೇಡಿಕೆ ಸಲ್ಲಿಸಿದ್ದಾರೆ.
ಇದನ್ನೂ ಓದಿ:LIVE: ಯಾರ ಮುಡಿಗೆ ಶಿರಾ, ಆರ್.ಆರ್.ನಗರ? ಎರಡೂ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ
ಮಸ್ಕಿ ವಿಧಾನಸಭೆ ಕ್ಷೇತ್ರದಲ್ಲಿ ಹೆಚ್ಚು ಲಿಂಗಾಯತರು ಇದ್ದಾರೆ. ಹಾಗಾಗಿ ವಿಜಯೇಂದ್ರ ಅವರಿಗೆ ಉಸ್ತುವಾರಿ ನೀಡಿದರೆ ಉತ್ತಮ ಎಂದು ಸಿಎಂ ಬಳಿ ಕೇಳಿಕೊಂಡಿದ್ದೇವೆ ಎಂದಿದ್ದಾರೆ.
ಸದ್ಯ ಆರ್​ಆರ್​ ನಗರ ಹಾಗೂ ತುಮಕೂರಿನ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು ಗೆಲುವಿನತ್ತ ದಾಪುಗಾಲು ಇಡುತ್ತಿದೆ. ಶಿರಾದಲ್ಲಿ ಕಮಲ ಅರಳಿದ್ದಲ್ಲಿ ಅದರ ಹಿಂದಿನ ಶ್ರಮ ವಿಜಯೇಂದ್ರರಿಗೆ ಸಲ್ಲುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ, ಮಂಡ್ಯದ ಕೆ.ಆರ್​. ಪೇಟೆಯಲ್ಲಿ ಬಿಜೆಪಿ ವಿಜಯೋತ್ಸವ ಆಚರಿಸಲು ವಿಜಯೇಂದ್ರ ಕಾರಣರಾಗಿದ್ದರು. ಹೀಗಾಗಿ ಅವರಿಗೆ ಬೇಡಿಕೆ ಹೆಚ್ಚಿದೆ.(ದಿಗ್ವಿಜಯ ನ್ಯೂಸ್​)
ಕುಸುಮಾಗೆ ಶುರುವಾಯ್ತಾ ಸೋಲಿನ ಭಯ?: ನಿನ್ನೆ ಹೇಳಿದ ಮಾತಿನಂತೆ ನಡೆಯದ ಕಾಂಗ್ರೆಸ್​ ಅಭ್ಯರ್ಥಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − one =
Remember me
