ಬೆಂಗಳೂರು:ಸ್ವಾಮೀಜಿಗಳಿಗೆ ಪಾದಪೂಜೆ ಮಾಡೋದು ಸಂಪ್ರದಾಯ. ಆದರೆ, ಶಾಸಕರೊಬ್ಬರಿಗೆ ಬೆಂಬಲಿಗರು ಪಾದಪೂಜೆ ಮಾಡಿದ ವಿಚಾರ ಇದೀಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಪಾದ ಪೂಜೆ ಮಾಡಿದ್ದು ತಪ್ಪೆಂದು ಹೇಳುತ್ತಿಲ್ಲ. ಅದು ಅವರ ವೈಯಕ್ತಿಕ ವಿಚಾರ. ಆದರೆ, ಕರೊನಾ ಲಾಕ್​ಡೌನ್​ ನಿಯಮ ಉಲ್ಲಂಘಿಸಿ ಪಾದಪೂಜೆ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಉದ್ಭವವಾಗಿದೆ.
ಇದನ್ನೂ ಓದಿ:ಪತ್ನಿಯನ್ನು ರಸ್ತೆಯಲ್ಲೇ ಅಟ್ಟಾಡಿಸಿ ಕೊಲೆ ಮಾಡಿದ ದುರುಳ ಪತಿ
ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್​ಗೆ ಬೆಂಬಲಿಗರು ಕಾಲು ತೊಳೆದು, ಹೂ ಹಾಕಿ, ಬಳಿಕ ಬಟ್ಟೆಯಿಂದ ಕಾಲು ಒರೆಸಿ ಪಾದಪೂಜೆ ಮಾಡಿರುವ ವಿಡಿಯೋ ಇದೀಗ ವೈರಲ್​ ಆಗಿದ್ದು, ಭಾರಿ ಟೀಕೆ ವ್ಯಕ್ತವಾಗಿದೆ.
ಸಾಮಾಜಿಕ ಅಂತರವಿಲ್ಲದೆ, ಮಾಸ್ಕ್​ಗಳನ್ನು ಧರಿಸದೇ ಒಟ್ಟೊಟ್ಟಾಗಿ ನಿಂತು ಪಾದ ಪೂಜೆ ಮಾಡುವ ಮೂಲಕ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಚಾಮರಾಜಪೇಟೆಯಲ್ಲಿ ಕಾರ್ಯಕ್ರಮ ನಡೆದಿದೆ.
ಇದನ್ನೂ ಓದಿ:ಡೇಟಿಂಗ್​ಗೆ ಯುವತಿ ಜತೆಗೆ ರೂಂ ಬುಕ್ ಮಾಡಿಕೊಳ್ಳುವ ಆಸೆಗೆ ಬಿದ್ದ ಯುವಕನ ವ್ಯಥೆ ಹೇಳತೀರದು
ಬಂಗಾರದ ಮನುಷ್ಯ ಜಮೀರಣ್ಣ ಅಭಿಮಾನಿಗಳ ಬಳಗದಿಂದ ಕಾರ್ಯಕ್ರಮ ನಡೆದಿದ್ದು, ಬಂಗಾರದ ಮನುಷ್ಯ ಜಮೀರಣ್ಣ ಎನ್ನುವ ಕಟೌಟ್ ಬಿಡುಗಡೆ ಮಾಡಲಾಯಿತು. ಜಮೀರ್ ಅಹಮದ್ ಮೇಲೆ ಹೂ ಸುರಿದು ಅಭಿಮಾನಿಗಳು ಸಂಭ್ರಮಿಸಿದರು. ಜನಸಾಮಾನ್ಯರಿಗೆ ತಿಳಿಹೇಳಬೇಕಾದ ಜನಪ್ರತಿನಿಧಿಗಳೇ ಹೀಗೆ ಮಾಡಿದರೆ ಎಷ್ಟು ಸರಿ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.(ದಿಗ್ವಿಜಯ ನ್ಯೂಸ್​)
VIDEO| ಮೆಡಿಕಲ್​ ಕ್ಲೀನಿಕ್​ನಲ್ಲಿ ಸ್ಪೋಟ: 19 ಮಂದಿಯ ದುರ್ಮರಣ, 6 ಜನರ ಸ್ಥಿತಿ ಗಂಭೀರ

Sign in to your account
Please enter an answer in digits:16 − fifteen =
Remember me
