ವಿಜಯಪುರ:ಚುನಾವಣಾ ಬಹಿರಂಗ ಪ್ರಚಾರ ಅಂತ್ಯವಾದರೂ ಬಬಲೇಶ್ವರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಿಂದ ಭರ್ಜರಿ ಪ್ರಚಾರ ನಡೆದಿದೆ. ತಿಕೋಟಾ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ್ ಹಾಗೂ ಬೆಂಬಲಿಗರು ಪ್ರಚಾರ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾಜಿ ಸಚಿವ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್‌ ಟ್ವಿಟರ್​ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿದ್ದ ಮತ್ತೊಂದು ಚೀತಾ ಸಾವು
ವಿಜಯಪುರ ಜಿಲ್ಲೆ ಬಬಲೇಶ್ವರ ಕ್ಷೇತ್ರದಲ್ಲಿ ಕಾನೂನು ಸತ್ತಂತಿದೆ. ಬಿಜೆಪಿ ಅಭ್ಯರ್ಥಿಯ ಆಶಯದಂತೆ ಆಡಳಿತ ಯಂತ್ರಗಳು ಕೆಲಸ ಮಾಡುತ್ತಿವೆ.ಬಿಜೆಪಿ ಅಭ್ಯರ್ಥಿಯು ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರೂ ಎಸ್.ಪಿ., ಡಿಸಿ, ಇಸಿಐ ಕಣ್ಣು ಮುಚ್ಚಿಕುಳಿತಿದೆ.ನೀತಿ ಸಂಹಿತೆಯ ಘನ ಘೋರ ಉಲ್ಲಂಘನೆಯಾಗಿದೆ…@ECISVEEP…pic.twitter.com/xsNilsTOQy— M B Patil (@MBPatil)May 9, 2023
ವಿಜಯಪುರ ಜಿಲ್ಲೆ ಬಬಲೇಶ್ವರ ಕ್ಷೇತ್ರದಲ್ಲಿ ಕಾನೂನು ಸತ್ತಂತಿದೆ. ಬಿಜೆಪಿ ಅಭ್ಯರ್ಥಿಯ ಆಶಯದಂತೆ ಆಡಳಿತ ಯಂತ್ರಗಳು ಕೆಲಸ ಮಾಡುತ್ತಿವೆ.ಬಿಜೆಪಿ ಅಭ್ಯರ್ಥಿಯು ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರೂ ಎಸ್.ಪಿ., ಡಿಸಿ, ಇಸಿಐ ಕಣ್ಣು ಮುಚ್ಚಿಕುಳಿತಿದೆ.ನೀತಿ ಸಂಹಿತೆಯ ಘನ ಘೋರ ಉಲ್ಲಂಘನೆಯಾಗಿದೆ…@ECISVEEP…pic.twitter.com/xsNilsTOQy
ತಿಕೋಟಾ ಪಟ್ಟದ ಸರ್ಕಲ್​ನಲ್ಲಿ ಬಿಜೆಪಿ ಅಭ್ಯರ್ಥಿ ವಿಜುಗೌಡ ಬೆಂಬಲಿಗರು ನಂಬರ್ ಪ್ಲೇಟ್ ಇಲ್ಲದ ವಾಹನಗಳಲ್ಲಿ ಬಂದು ಪ್ರಚಾರ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಎಸ್​ಪಿ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ನೀತಿ ಸಂಹಿತ ಜಾರಿಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಎಂ.ಬಿ.ಪಾಟೀಲ್ ಸುದ್ದಿಗೋಷ್ಠಿ ರದ್ದು ಮಾಡಿದ್ದರು.
ಇದನ್ನೂ ಓದಿ:ಶಿಕ್ಷಕನ ಮುಖಕ್ಕೆ ​​ಪೆಪ್ಪರ್ ಸ್ಪ್ರೇ ಮಾಡಿದ ವಿದ್ಯಾರ್ಥಿನಿ; ಮುಂದೇನಾಯ್ತು?..ವಿಡಿಯೋ ನೋಡಿ
ಬಬಲೇಶ್ವರ ಕ್ಷೇತ್ರದಲ್ಲಿ ಜಂಗಲ್ ರಾಜ್…ಕಾನೂನು ಸುವ್ಯವಸ್ಥೆ ಸಂಪೂರ್ಣ ಸತ್ತಂತಿದೆ.ಬಬಲೇಶ್ವರ ಬಿ.ಜೆಪಿ. ಅಭ್ಯರ್ಥಿ ಹಾಗೂ ಬೆಂಬಲಿಗರು ನಂಬರ್ ಪ್ಲೇಟ್ ಇಲ್ಲದ ಕಾರುಗಳಲ್ಲಿ ಪೊಲೀಸರ ಕಣ್ಣ ಮುಂದೆಯೇ ಒಡಾಡುತ್ತಿದ್ದಾರೆ.ಡಿ.ಸಿ., ಎಸ್.ಪಿ. ಹಾಗೂ ಎಲೆಕ್ಷನ್ ಕಮಿಷನ್ ಅಧಿಕಾರಿಗಳು ನಿದ್ರಿಸುತ್ತಿದ್ದಾರೆಯೇ?@ECISVEEP…pic.twitter.com/Xwl2WFpvZh— M B Patil (@MBPatil)May 9, 2023
ಬಬಲೇಶ್ವರ ಕ್ಷೇತ್ರದಲ್ಲಿ ಜಂಗಲ್ ರಾಜ್…ಕಾನೂನು ಸುವ್ಯವಸ್ಥೆ ಸಂಪೂರ್ಣ ಸತ್ತಂತಿದೆ.ಬಬಲೇಶ್ವರ ಬಿ.ಜೆಪಿ. ಅಭ್ಯರ್ಥಿ ಹಾಗೂ ಬೆಂಬಲಿಗರು ನಂಬರ್ ಪ್ಲೇಟ್ ಇಲ್ಲದ ಕಾರುಗಳಲ್ಲಿ ಪೊಲೀಸರ ಕಣ್ಣ ಮುಂದೆಯೇ ಒಡಾಡುತ್ತಿದ್ದಾರೆ.ಡಿ.ಸಿ., ಎಸ್.ಪಿ. ಹಾಗೂ ಎಲೆಕ್ಷನ್ ಕಮಿಷನ್ ಅಧಿಕಾರಿಗಳು ನಿದ್ರಿಸುತ್ತಿದ್ದಾರೆಯೇ?@ECISVEEP…pic.twitter.com/Xwl2WFpvZh
ಬಬಲೇಶ್ವರ ಕ್ಷೇತ್ರದಲ್ಲಿ ಜಂಗಲ್ ರಾಜ್ ನಿರ್ಮಾಣವಾಗಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಸತ್ತಂತಿದೆ. ಬಬಲೇಶ್ವರ ಬಿಜೆಪಿ ಅಭ್ಯರ್ಥಿ ಹಾಗೂ ಬೆಂಬಲಿಗರು ನಂಬರ್ ಪ್ಲೇಟ್ ಇಲ್ಲದ ಕಾರುಗಳಲ್ಲಿ ಪೊಲೀಸರ ಕಣ್ಣ ಮುಂದೆಯೇ ಒಡಾಡುತ್ತಿದ್ದಾರೆ. ಡಿಸಿ, ಎಸ್​ಪಿ ಹಾಗೂ ಚುನಾವಣಾ ಅಧಿಕಾರಿಗಳು ನಿದ್ರಿಸುತ್ತಿದ್ದಾರೆಯೇ? ನೀತಿ ಸಂಹಿತೆಯ ಘನ ಘೋರ ಉಲ್ಲಂಘನೆಯಾಗಿದೆ ಎಂದು ಎಂ.ಬಿ.ಪಾಟೀಲ್ ಆರೋಪಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + fifteen =
Remember me
