ಬೆಂಗಳೂರು:ನಗರದ 36ನೇ ಪೊಲೀಸ್ ಆಯುಕ್ತರಾಗಿ ಕಮಲ್ ಪಂತ್ ಇಂದು(ಶನಿವಾರ) ಬೆಳಗ್ಗೆ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅಧಿಕಾರ ಹಸ್ತಾಂತರಿಸಿದರು. ಈ ಕ್ಷಣಕ್ಕೆ ಕಮಲ್ ಪಂತ್ ಕುಟುಂಬಸ್ಥರೂ ಸಾಕ್ಷಿಯಾದರು.
ಕರೊನಾ ಸೋಂಕಿನಿಂದ ಮೃತಪಟ್ಟ ಪೊಲೀಸ್​ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸ್ಮರಿಸಿದ ನೂತನ ಪೊಲೀಸ್ ಆಯುಕ್ತರು, ‘ಇಂದು ನಾನು ಬೆಂಗಳೂರು ನಗರ ಪೊಲೀಸ್ ಆಯುಕ್ತನಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಸರ್ಕಾರ ಕೊಟ್ಟ ಈ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುತ್ತೇನೆ’ ಎಂದರು.
ಇದನ್ನೂ ಓದಿರಿಅಧಿಕಾರ, ಹಣಕ್ಕಾಗಿ ಹಲವು ಬಾರಿ ಡಿ.ಕೆ.ಶಿವಕುಮಾರ್​ ನನ್ನ ಕಾಲಿಗೆ ಬಿದ್ದಿದ್ದಾರೆ… ಅದರ ವಿಡಿಯೋ ಇದೆ: ಸಿ.ಪಿ.ಯೋಗೇಶ್ವರ್
ಪೊಲೀಸ್​ ಆಯುಕ್ತರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಮಾತನಾಡಿದ ಕಮಲ್​ ಪಂತ್​, ‘ಮಹಿಳೆಯರು, ಮಕ್ಕಳು, ವೃದ್ಧರ ರಕ್ಷಣೆ ನಮ್ಮ ಹೊಣೆ’ ಎಂದು ಜನರಿಗೆ ಅಭಯ ನೀಡಿದರು.‘ಸೈಬರ್ ಕ್ರೈಂ, ಮಾದಕವಸ್ತು ಮಾರಾಟ ಜಾಲ ಮತ್ತು ರೌಡಿಗಳ ಮೇಲೆ ಹದ್ದಿನ ಕಣ್ಣಿಡಲಾಗುವುದು’ ಎನ್ನುವ ಮೂಲಕ ಪಾತಕಿಗಳ ಅಟ್ಟಹಾಸಕ್ಕೆ ಬ್ರೇಕ್​ ಹಾಕುವುದಾಗಿ ಎಚ್ಚರಿಸಿದರು.
ಕಮಲ್ ಪಂತ್ ಪೊಲೀಸ್​ ಆಯುಕ್ತರಾಗಿ ಅಧಿಕಾರ ಸ್ವೀಕಾರ ಕ್ಷಣದಲ್ಲಿ ಕೆಎಸ್​ಆಪಿ ಸಿಬ್ಬಂದಿ ಗಾರ್ಡ್ ಆಫ್ ಆನರ್ ನೀಡಿದರು. ಇದೇ ವೇಳೆ ಖುದ್ದು ಮಹಿಳಾ ಡಿಸಿಪಿ ಮತ್ತು ಎಸಿಪಿಗಳ ಮನವಿ ಮೇರೆಗೆ ಅವರೊಟ್ಟಿಗೆ ಭಾಸ್ಕರ್ ರಾವ್ ಫೋಟೋ ಶೂಟ್ ಮಾಡಿಸಿಕೊಂಡರು. ನಗರದ ಜಂಟಿ ಪೊಲೀಸ್ ಆಯುಕ್ತರು, ಡಿಸಿಪಿಗಳು ಉಪಸ್ಥಿತರಿದ್ದರು.
ಇನ್ಮುಂದೆ ಭಾನುವಾರವೂ ಬಸ್ ಸಂಚಾರ, ರಾತ್ರಿ ವೇಳೆಯೂ ಸಾರಿಗೆ ಸೇವೆ ಲಭ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 2 =
Remember me
