ಬೆಂಗಳೂರು:ಡಾ.ರಾಜಕುಮಾರ್​ ಕುಟುಂಬದಲ್ಲಿ ಒಬ್ಬರ ಹಿಂದೊಬ್ಬರಂತೆ ಸಾವು ಸಂಭವಿಸಿರುವುದರಿಂದ ಈ ಕುರಿತು ಅಷ್ಟಮಂಗಲ ಪ್ರಶ್ನೆ ಕೇಳಲಿರುವ ಮಾಹಿತಿಯೊಂದು ಹೊರಬಿದ್ದಿದೆ. ಈಡಿಗ ಸಮುದಾಯ ಶ್ರೀಪ್ರಣವಾನಂದ ಸ್ವಾಮೀಜಿ ಈ ಕುರಿತು ವಿಷಯ ತಿಳಿಸಿದ್ದಾರೆ.
ಸ್ಪಂದನಾ ಅಂತಿಮಸಂಸ್ಕಾರದ ವಿಧಿ-ವಿಧಾನ ಕುರಿತು ವಿವರಣೆ ನೀಡುತ್ತಿದ್ದ ವೇಳೆ ಅವರು ಈ ವಿಷಯ ತಿಳಿಸಿದರು. ಡಾ.ರಾಜ್​ ಕುಟುಂಬದಲ್ಲಿ ಪುನೀತ್ ರಾಜಕುಮಾರ್ ಮತ್ತು ಸ್ಪಂದನಾ ಇಬ್ಬರೂ ಸಣ್ಣವಯಸ್ಸಿನಲ್ಲೇ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಈ ಕುರಿತು ನಾವು ಶಿವರಾಜ್ ಕುಮಾರ್ ಅವರ ಜೊತೆಗೆ ಈಗಾಗಲೇ ಮಾತಾಡಿದ್ದೇವೆ ಎಂದು ಪ್ರಣವಾನಂದಶ್ರೀ ತಿಳಿಸಿದರು.
ಇದನ್ನೂ ಓದಿ:ಸ್ಪಂದನಾಗೆ ತಾಳಿ ಕಟ್ಟಿ ಅಂತಿಮ ವಿದಾಯ ಹೇಳಿದ ಪತಿ ವಿಜಯ ರಾಘವೇಂದ್ರ
ಡಾ.ರಾಜ್ ಕುಟುಂಬದಲ್ಲಿ ‌ಯಾಕೆ ಈ ರೀತಿ ಅಕಾಲ ಮೃತ್ಯು ‌ಸಂಭವಿಸುತ್ತಿದೆ ಎಂದು ತಿಳಿದುಕೊಳ್ಳಲು ಮುಂದಾಗುತ್ತೇವೆ, ಅದರ ಮುಂದಾಳತ್ವ ನಾನು ವಹಿಸುತ್ತೇನೆ. ಇದಕ್ಕಾಗಿ ಈಡಿಗ ಸಮುದಾಯದ ಕೇರಳದ ತಂತ್ರಿಗಳ ಕಡೆಯಿಂದ ಅಷ್ಟಮಂಗಲ ಪ್ರಶ್ನೆ ಹಾಕಿ ಕೇಳಬೇಕು. 41 ದಿನಗಳ ನಂತರ ಕೇರಳದ ಉನ್ನತ ತಂತ್ರಿಗಳ ಬಳಿ ಹೋಗಿ ಅಷ್ಟಮಂಗಲ ಪ್ರಶ್ನೆ ಕೇಳುವ ಮೂಲಕ ಕಾರಣ ತಿಳಿದುಕೊಳ್ಳಲು ಪ್ರಯತ್ನಿಸುವುದಾಗಿ ಅವರು ಹೇಳಿದರು. –ದಿಗ್ವಿಜಯ ನ್ಯೂಸ್
ಕಳವಾದ ಮೊಬೈಲ್‌ಫೋನ್ ಪತ್ತೆ ಹಚ್ಚಿ ವಾರಸುದಾರರಿಗೆ ಒಪ್ಪಿಸುವಲ್ಲಿ ಕರ್ನಾಟಕ ಪೊಲೀಸರೇ ಪ್ರಥಮ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + six =
Remember me
