ಬೆಂಗಳೂರು:ಡೀಸೆಲ್​ ವಿದ್ಯುತ್​ ಮತ್ತು ಟರ್ಬೋ ಜನರೇಟರ್​ಗಳ ಅತಿ ಉಪಯೋಗದಿಂದ ಮನುಕುಲದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಇಂಡಿಯನ್​ ಇನ್ಸ್​ಸ್ಟಿಟ್ಯೂಷನ್​ ಆಫ್​​​ ಪ್ಲಾಂಟ್​ ಇಂಜಿನಿಯರ್ಸ್​ (ಐಐಪಿಇ) ಕರ್ನಾಟಕ ವಿಭಾಗದ ಅಧ್ಯಕ್ಷ ಡಾ.ಎ.ಶಶಿ ಶಂಕರ್​ ಆತಂಕ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ(ಕೆಎಸ್​ಪಿಸಿಬಿ) ಸಹಯೋಗದಲ್ಲಿ ಐಐಪಿಇ ಪರಿಸರ ಮಂಡಳಿಯಲ್ಲಿ ಗುರುವಾರ ಏರ್ಪಡಿಸಿದ್ದ “ಡೀಸಲ್​ ಜನರೇಟರ್​ ಮತ್ತು ಟಬೋರ್ ಜನರೇಟರ್​ ಸೆಟ್​ಗಳು, ಅದರ ನಿರ್ವಹಣೆಗೆ ಡಿಜಿಟಲ್​ ಪರಿಹಾರಗಳು ಮತ್ತು ಜಾರಿ ಮಾಡುವ ವ್ಯವಸ್ಥೆ’ ಕುರಿತು ಎರಡು ದಿನಗಳ ಕಾರ್ಯಗಾರದಲ್ಲಿ ಮಾತನಾಡಿದರು.
ಕಾರ್ಖಾನೆ, ಕೈಗಾರಿಕೆ ಸೇರಿದಂತೆ ವಿಶ್ವದಾದ್ಯಂತ ಡೀಸೆಲ್​ ವಿದ್ಯುತ್​ ತಯಾರಿಕಾ ಮತ್ತು ಟರ್ಬೋ ಜನರೇಟರ್​ ಬಳಸಲಾಗುತ್ತಿದ್ದು, ಇವುಗಳಿಂದ ಹೊರಸೂಸುವ ಹೈಡ್ರೋಕಾರ್ಬನ್​, ಇಂಗಾಲ ಬಿಡುಗಡೆಯಾಗುತ್ತಿವೆ. ಇದರಿಂದಾಗಿ ಮನುಕುಲದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ಮುಖ್ಯವಾಗಿ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ವಿವಿಧ ರೀತಿಯ ಕ್ಯಾನ್ಸರ್​ಗೆ ಕಾರಣವಾಗುತ್ತಿದೆ. ಇದನ್ನು ಯಾರು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವೈದ್ಯಕೀಯ ಕೇಸ್​ ಅಂತೇಳಿ ಅಕ್ರಮವಾಗಿ 46 ಬಿಪಿಎಲ್​ ಕಾರ್ಡ್​ ಕೊಟ್ಟ ಆಹಾರ ಶಿರಸ್ತುದಾರಯಂತ್ರಗಳಿಂದ ಹೊರಸೂಸುವ ಇಂಗಾಲದಿಂದ ಪರಿಸರ ನಾಶವಾಗಲಿದೆ.ಅತಿವೃಷ್ಠಿ,ಅನಾವೃಷ್ಠಿ ಹೆಚ್ಚಾಗಿ ಪ್ರಪಂಚವನ್ನು ವಿನಾಶದತ್ತ ತಳ್ಳುತ್ತಿದೆ. ಯಂತ್ರಗಳಿಂದ ಆಗುವ ತೊಂದರೆ ತಡೆಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ 2023ರಲ್ಲಿ ಅಧಿಸೂಚನೆ ಹೊರಡಿಸಿದೆ. ಯಾವ ಪ್ರಮಾಣದಲ್ಲಿ ಡೀಸಲ್​ ವಿದ್ಯುತ್​ ತಯಾರಿಕಾ ಜನರೇಟರ್​ ಉಪಯೋಗಿಸಬೇಕೆಂಬ ಮಾನದಂಡ ವಿಧಿಸಿದೆ. ಇದನ್ನು ಮೀರಿದರೆ ಶಿಕ್ಷೆ ನೀಡಲಾಗುತ್ತಿದೆ ಎಂದು ಶಶಿ ಶಂಕರ್​ ವಿವರಿಸಿದರು. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ನ್ಯಾ.ಸುಭಾಷ್​.ಬಿ.ಅಡಿ, ಕೆಎಸ್​ಪಿಸಿಬಿ ಸದಸ್ಯ ಕಾರ್ಯದರ್ಶಿ ಎಚ್​.ಸಿ. ಬಾಲಚಂದ್ರ, ಮಂಡಳಿಯ ಅಧಿಕಾರಿಗಳ ಮತ್ತಿತರರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − eighteen =
Remember me
