| ಅರವಿಂದ ಅಕ್ಲಾಪುರ ಶಿವಮೊಗ್ಗ
ಕರೊನಾ ಕಾರಣದಿಂದ ರಾಜ್ಯದಲ್ಲಿ ವಿವಿಧ ಸಹಕಾರಿ ಸಂಸ್ಥೆಗಳ ಚುನಾವಣೆಗೆ ಡಿಸೆಂಬರ್ ಅಂತ್ಯದವರೆಗೆ ಅವಕಾಶ ನೀಡಲಾಗಿರುವ ಪರಿಣಾಮ ಸಹಕಾರ ಯೂನಿಯನ್ ಹಾಗೂ ಮಹಾಮಂಡಳಗಳ ಚುನಾವಣೆ ಪ್ರಕ್ರಿಯೆ ಶುರುವಾಗಿದೆ. ಈ ಸಂದರ್ಭದಲ್ಲೇ ಸಹಕಾರಿ ವಲಯದಲ್ಲಿ ‘ಬ್ಯಾಗ್ ಸಂಸ್ಥೆಗಳು’ ದೊಡ್ಡ ಸದ್ದುಮಾಡುತ್ತಿವೆ.!
ಚುನಾವಣೆ ಸಮಯದಲ್ಲಿ ಇಂಥ ಸಂಸ್ಥೆಗಳನ್ನು ಗುರುತಿಸುವುದೇ ಸಹಕಾರ ಇಲಾಖೆಗೆ ಸವಾಲಾಗಿದೆ. ನಾಲ್ಕೂವರೆ ವರ್ಷ ಏನೂ ಚಟುವಟಿಕೆ ಹೊಂದಿರದ ಸಂಘಗಳು ಈಗ ಮೈಕೊಡವಿ ನಿಂತು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ.
ಒಂದೇ ವಿಳಾಸದಲ್ಲಿ ಹಲವು ಸಂಸ್ಥೆಗಳುಒಂದೇ ವಿಳಾಸದಲ್ಲಿ ಹಲವು ಸಹಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವಂತೆ ದಾಖಲೆ ಸಿದ್ಧಪಡಿಸಿ ಅದಕ್ಕೆ ಸಹಕಾರ ಇಲಾಖೆಯಿಂದ ಅನುಮೋದನೆ ಪಡೆಯಲಾಗುತ್ತದೆ. ಎಲ್ಲವೂ ಕಾನೂನುಬದ್ಧವಾಗಿಯೇ ನಡೆಯುತ್ತದೆ. ಆದರೆ ಕಾರ್ಯದರ್ಶಿ ಯಾರು? ಎಷ್ಟು ಸಿಬ್ಬಂದಿಯಿದ್ದಾರೆ? ವೇತನದ ಮೂಲ ಯಾವುದು ಎಂಬುದು ಮಾತ್ರ ಬ್ರಹ್ಮನಿಗೂ ತಿಳಿಯದ ಸ್ಥಿತಿ. ಸಹಕಾರಿ ತತ್ವವನ್ನು ಮೂಲೆಗುಂಪು ಮಾಡಿ ಸ್ವಹಿತಾಸಕ್ತಿಗಾಗಿ ಸಹಕಾರಿ ಸಂಸ್ಥೆಗಳನ್ನು ಹುಟ್ಟು ಹಾಕುವ ಪ್ರಕ್ರಿಯೆ ಹೆಚ್ಚುತ್ತಿದೆ. ಇದನ್ನು ತಡೆಗಟ್ಟುವುದು ಹೇಗೆ ಎಂಬ ಚಿಂತೆ ಸಹಕಾರ ಇಲಾಖೆ ಅಧಿಕಾರಿಗಳನ್ನು ಕಾಡುತ್ತಿದೆ.
ಏನಿದು ಬ್ಯಾಗ್ ಸಂಸ್ಥೆಕೆಲವು ಸಹಕಾರ ಸಂಘಗಳು ಕಾನೂನುಬದ್ಧವಾಗಿ ಸಹಕಾರ ಇಲಾಖೆಯಲ್ಲಿ ನೋಂದಣಿಯಾಗಿರುತ್ತವೆ. ಒಬ್ಬರೇ ಅನೇಕ ಸಹಕಾರಿ ಸಂಸ್ಥೆಗಳನ್ನೂ ಹುಟ್ಟುಹಾಕಿರುತ್ತಾರೆ. ಅವರೇ ಸಂಘಕ್ಕೆ ಪದಾಧಿಕಾರಿಯೂ ಆಗಿರುತ್ತಾರೆ. ದಾಖಲೆಗಳೆಲ್ಲ ಬ್ಯಾಗ್​ನಲ್ಲೇ ಸುರಕ್ಷಿತವಾಗಿರುತ್ತವೆ. ಹೀಗಾಗಿ ಇಂಥವನ್ನು ‘ಬ್ಯಾಗ್ ಸಂಸ್ಥೆಗಳು’ ಎಂದು ವ್ಯಂಗ್ಯವಾಗಿ ಕರೆಯಲಾಗುತ್ತದೆ. ಇಂತಹ ಸಂಸ್ಥೆಗಳನ್ನು ಹುಟ್ಟುಹಾಕುವ ಪ್ರಮುಖ ಉದ್ದೇಶ ಎಂದರೆ ದೊಡ್ಡ ಸಹಕಾರಿ ಸಂಸ್ಥೆಗಳಲ್ಲಿ ಹುದ್ದೆ ಪಡೆಯುವುದು. ಸಹಕಾರಿ ಯೂನಿಯನ್, ಡಿಸಿಸಿ ಬ್ಯಾಂಕ್, ರಾಜ್ಯ ಮಹಾಮಂಡಳಗಳಲ್ಲಿ ಪದಾಧಿಕಾರಿಯಾಗಲು ಬ್ಯಾಗ್ ಸಹಕಾರಿ ಸಂಸ್ಥೆಗಳನ್ನು ದೊಡ್ಡ ಮಟ್ಟದಲ್ಲಿ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಕಾನೂನು ದುರುಪಯೋಗಒಂದು ಕಡೆಯಲ್ಲಿ ಬ್ಯಾಗ್ ಸಂಸ್ಥೆಗಳ ಸಮಸ್ಯೆಯಾದರೆ ಕೆಲ ಸದಸ್ಯರು ಕಾನೂನು ದುರ್ಬಳಕೆ ಮಾಡಿಕೊಂಡು ಮತದಾರರ ಪಟ್ಟಿಯಲ್ಲಿ ಅಂತಿಮ ಹಂತದಲ್ಲಿ ಸೇರ್ಪಡೆಯಾಗುವುದು ಚುನಾವಣೆ ನಡೆಸುವ ಸಹಕಾರ ಇಲಾಖೆ ಅಧಿಕಾರಿಗಳಿಗೆ ಹೊಸ ಸವಾಲಾಗಿದೆ. ಸತತ ಮೂರು ಸರ್ವಸದಸ್ಯರ ಸಭೆಗೆ ಗೈರಾಗುವ ಸಹಕಾರ ಸಂಸ್ಥೆಯ ಸದಸ್ಯರಿಗೆ ಮತದಾನದ ಹಕ್ಕಿಲ್ಲ ಎಂಬ ಕಾನೂನು ಜಾರಿಗೆ ಬಂದು ಹಲವು ವರ್ಷಗಳಾಗಿವೆ. ಆದರೆ ಇದನ್ನು ಹೈಕೋರ್ಟ್​ನಲ್ಲಿ ಪ್ರಶ್ನಿಸಿ ಕಡೇ ಕ್ಷಣದಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಯಾಗುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ ಎನ್ನುತ್ತಾರೆ ಅಧಿಕಾರಿಗಳು. ಒಂದು ಸಹಕಾರ ಸಂಸ್ಥೆಯಲ್ಲಿ ಐದು ಸಾವಿರ ಸದಸ್ಯರಿದ್ದರೆ, ಮೂರು ಸಾವಿರ ಸದಸ್ಯರು ಮಾತ್ರ ಮತದಾನಕ್ಕೆ ಅರ್ಹರಾಗಿರುತ್ತಾರೆ. ಅಷ್ಟು ಮಂದಿಗೆ ಮತದಾನಕ್ಕೆ ಬೇಕಿರುವ ಸಿದ್ಧತೆ ಇಲಾಖೆಯಿಂದ ನಡೆದಿರುತ್ತದೆ. ಅಂತಿಮವಾಗಿ ಕೋರ್ಟ್​ನಿಂದ ಆದೇಶ ತಂದು ನೂರಾರು ಮಂದಿ ಮತದಾರರ ಪಟ್ಟಿಗೆ ಸೇರ್ಪಡೆಯಾದರೆ ಕಡೇ ಕ್ಷಣದಲ್ಲಿ ಮತದಾನಕ್ಕೆ ಸಿದ್ಧತೆ ಮಾಡಿಕೊಳ್ಳುವುದು ಕಷ್ಟವಾಗುತ್ತದೆ.
12 ಸೊಸೈಟಿ ರದ್ದತಿ ಸಾಧ್ಯತೆಶಿವಮೊಗ್ಗ ಜಿಲ್ಲೆಯೊಂದರಲ್ಲೇ 1,242 ಸಹಕಾರಿ ಸಂಸ್ಥೆಗಳಿವೆ. ಈ ಪೈಕಿ 84 ಸೊಸೈಟಿಗಳು ಮುಚ್ಚುವ ಹಂತದಲ್ಲಿವೆ. 12 ಸೊಸೈಟಿಗಳ ರದ್ದತಿಗೆ ಆದೇಶ ನಿರೀಕ್ಷಿಸಲಾಗುತ್ತಿದೆ. ವಿಶೇಷವೆಂದರೆ ಯಾವುದೋ ಸಹಕಾರಿ ಸಂಸ್ಥೆಯಲ್ಲಿ ಇನ್ನು ಯಾವುದೋ ಸಂಘದ ಕುರ್ಚಿ, ಟೇಬಲ್​ಗಳೂ ಕಂಡು ಬಂದಿವೆ. ಯಾವುದೇ ಹಣಕಾಸು ವಹಿವಾಟು ನಡೆಸದ ಸಂಸ್ಥೆಗಳೂ ಇವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + two =
Remember me
