ಬಾಗಲಕೋಟೆ:ಬೈಕ್​ ಎರಡಕ್ಕೆ ಕಾರು ಡಿಕ್ಕಿಯಾಗಿ ತಾಯಿ-ಮಗ ಸೇರಿದಂತೆ ನಾಲ್ವರು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಜಮಖಂಡಿ ತಾಲೂಕಿನ ಅಲಗೂರು ಗ್ರಾಮದ ಬಳಿಕ ಭಾನುವಾರ ನಡೆದಿದೆ.
ಜಮಖಂಡಿ-ವಿಜಯಪುರ ಮಾರ್ಗದಲ್ಲಿ ದುರ್ಘಟನೆ ನಡೆದಿದ್ದು, ಓರ್ವ ಮಹಿಳೆ ಹಾಗೂ ಮೂವರು ಪುರುಷರು ಮೃತಪಟ್ಟಿದ್ದಾರೆ. ಮೃತರನ್ನು ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಹೊಕ್ಕುಂಡಿ ಗ್ರಾಮದವರಾದ ಹನುಮಂತ ಕಾಂಬಳೆ(38), ಅಮೋಘಿ ಡವಳೇಶ್ವರ (26) ಮತ್ತು ರಬಕವಿಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದ‌ ಮಹದೇವ ಬಿದರಿ(32), ತಾಯಿ ಯಮನವ್ವ ಬಿದರಿ(58) ಎಂದು ಗುರುತಿಸಲಾಗಿದೆ.
ಇದನ್ನೂ ಓದಿರಿ:ಪ್ರೇಯಸಿ ಇಲ್ಲದ ಜೀವನ ವ್ಯರ್ಥ, ತಾಯಿಗೆ ಸೆಲ್ಫಿ ವಿಡಿಯೋ ಕಳಿಸಿ ಯುವಕ ಸೂಸೈಡ್​: ಮನಕಲಕುತ್ತೆ ಇಬ್ಬರ ಲವ್​ ಸ್ಟೋರಿ!
ಕಾರು ಜಮಖಂಡಿಯಿಂದ ವಿಜಯಪುರಕ್ಕೆ ಹೊರಟಿತ್ತು. ಮೊದಲು ಬೈಕ್​ ಒಂದಕ್ಕೆ ಡಿಕ್ಕಿ ಹೊಡೆದ ಬಳಿಕ ನೂರು ಮೀಟರ್​ನಲ್ಲಿ ಮತ್ತೊಂದು ಬೈಕ್​ಗೆ ಗುದ್ದಿದೆ. ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಜಮಖಂಡಿ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತದ ಬೆನ್ನಲ್ಲೇ ಎಸ್ಕೇಪ್​ ಆಗಿರುವ ಕಾರು ಚಾಲಕನಿಗೆ ಬಲೆ ಬೀಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಅಲ್ಲಿ ಸ್ಪರ್ಶಿಸುವುದು ಲೈಂಗಿಕ ದೌರ್ಜನ್ಯವಲ್ಲ: ವಿವಾದಕ್ಕೆ ಎಡೆಮಾಡಿಕೊಟ್ಟ ಬಾಂಬೆ ಹೈಕೋರ್ಟ್​ ತೀರ್ಪು!

ಸ್ನೇಹಿತರಿಬ್ಬರ ಮಧ್ಯೆ ಎಂಟ್ರಿ ಕೊಟ್ಟ ಯುವತಿ: ಮುಂದೆ ನಡೆದಿದ್ದು ಟಿಕ್​ಟಾಕ್​​ ಸ್ಟಾರ್​ ದುರಂತ ಅಂತ್ಯ!

ಸಲಿಂಗ ವಿವಾಹವಾದ ಒಂದೇ ವರ್ಷದಲ್ಲಿ ಯುವತಿಯ ದುರಂತ ಸಾವು: ಇಬ್ಬರ ನಡುವೆ ನಡೆದಿದ್ದಾದರೂ ಏನು?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × two =
Remember me
