ಬಾಗಲಕೋಟೆ:ಗ್ರಾಮ ಪಂಚಾಯಿತಿ ಚುನಾವಣಾ ಪ್ರಚಾರ ರಂಗೇರುತ್ತಿದೆ. ಹಳ್ಳಿ ಗದ್ದುಗೆಗಾಗಿ ಗುದ್ದಾಟವೂ ಜೋರಾಗ್ತಾ ಇದೆ. ಪಂಚಾಯಿತಿ ಕಟ್ಟೆಗೆ ವಿದ್ಯಾವಂತರು ಬರಬೇಕೆಂದು ಅನೇಕರು ಹೇಳ್ತಾನೆ ಇರುತ್ತಾರೆ. ಇದೀಗ ಇಲ್ಲೊಂದು ಪಂಚಾಯಿತಿಯಲ್ಲಿ ಸ್ನಾತಕೋತ್ತರ ಪದವಿಧರ ದಂಪತಿ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಹಾಗೆಂದು ಈ ದಂಪತಿ ಪರಸ್ಪರ ಎದುರಾಳಿಯಾಗಿ ನಿಂತಿಲ್ಲ. ಪತಿ, ಪತ್ನಿ ಬೇರೆ ಬೇರೆ ವಾರ್ಡ್ ಗಳಲ್ಲಿ ಸ್ಪರ್ಧೆ ಮಾಡಿದ್ದಾರೆ.
ಹೌದು, ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮ ಪಂಚಾಯತಿ ಚುನಾವಣೆಗೆ ಸ್ನಾತಕೋತ್ತರ ಪದವಿಧರರಾದ ಮಹದೇವ ಗಾಯಕವಾಡ ಹಾಗೂ ಸಾಗರಿಕ ಗಾಯಕವಾಡ ದಂಪತಿ ಅಖಾಡಕ್ಕೆ ಇಳಿದಿದ್ದಾರೆ.
ಇದನ್ನೂ ಓದಿ:ಈ ರಾಜ್ಯಗಳಲ್ಲಿ ಮಹಿಳೆಯರೇ ‘ಎಣ್ಣೆ’ ಜಾಸ್ತಿ ಕುಡಿಯೋದಂತೆ: ಲೆಕ್ಕಾಚಾರ ತಲೆಕೆಳಗೆ ಮಾಡಿ ಸಮೀಕ್ಷೆ!
ಆಸಂಗಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಆಸಂಗಿ, ಅಸ್ಕಿ, ಮದನಮಟ್ಟಿ ಗ್ರಾಮಗಳು ಇವೆ. ಒಟ್ಟು 22 ಸ್ಥಾನಗಳ ಪೈಕಿ ಈಗಾಗಲೇ ನಾಲ್ವರು ಅವಿರೋಧ ಆಯ್ಕೆ ಆಗಿದ್ದಾರೆ. ಈಗ 3ನೇ ವಾರ್ಡಿನಿಂದ ಸಾಗರಿಕಾ ಗಾಯಕವಾಡ ಸ್ಪರ್ಧಿಸಿದ್ದರೆ, ಅವರ ಪತಿ ಮಹದೇವ ಗಾಯಕವಾಡ 4ನೇ ವಾರ್ಡ್​ನಿಂದ ಸ್ಪರ್ಧೆ ಮಾಡಿದ್ದಾರೆ. ಮಹಾದೇವ ಎಂ.ಕಾಂ., ಎಂ.ಎ ಮಾಡಿದ್ದರೆ, ಸಾಗರಿಕಾ ಎಂ.ಎ ಪದವಿಧರೆ.
ತಮ್ಮ ಗ್ರಾಮಕ್ಕೆ ಏನಾದರೂ ಒಂದು ಹೊಸ ಕೊಡುಗೆ ಕೊಡಬೇಕು, ಕಲಿತಂತಹ ನಿರುದ್ಯೋಗಿ ಯುವಕರಿಗೆ ಹೆಚ್ಚು ಹೆಚ್ಚು ಗುಡಿ ಕೈಗಾರಿಕೆಗಳನ್ನು ನಿರ್ಮಿಸಲು ಪ್ರೋತ್ಸಾಹಿಸಿ ಗ್ರಾಮದಲ್ಲಿ ಉದ್ಯೋಗ ಸೃಷ್ಠಿ ಮಾಡುವುದರ ಜತೆಗೆ ಸ್ವಚ್ಛಗ್ರಾಮ ಹಾಗೂ ಸುಂದರ ಗ್ರಾಮದ ಕನಸ್ಸನ್ನು ಹೇಳ್ತಿದ್ದಾರೆ.
ಇದನ್ನೂ ಓದಿ:ಸ್ನೇಹಿತನ ಮನೆಯಲ್ಲೇ ಸಿಐಡಿ ಡಿವೈಎಸ್​ಪಿ ನೇಣಿಗೆ ಶರಣಾಗಿದ್ದೇಕೆ? ನಿನ್ನೆ ರಾತ್ರಿ ನಡೆದಿದ್ದೇನು?
ಸ್ನಾತಕೋತ್ತರ ಪದವಿಧರ ದಂಪತಿ ಸ್ಪರ್ಧೆಯಂತೂ ಗಮನ ಸೆಳೆದಿದೆ. ದಂಪತಿ ಸ್ಪರ್ಧೆಗೆ ಮತದಾರರು ಯಾವ ರೀತಿ ಉತ್ತರ ಕೊಡುತ್ತಾನೆ ಎಂದು ಕಾಯ್ದು ನೋಡಬೇಕು.(ದಿಗ್ವಿಜಯ ನ್ಯೂಸ್​)
VIDEO| ವಿಡಿಯೋ ಶೇರ್​ ಮಾಡಿ ಪ್ರಧಾನಿ ಮೋದಿ ಟ್ರೋಲ್​ ಮಾಡಿದ ಎಎಪಿ..!

ಫೇಷಿಯಲ್​ ಮಾಡಿಸಬೇಕಿತ್ತು ಎನ್ನುತ್ತಲೇ ಬ್ಯೂಟಿ ಪಾರ್ಲರ್​ ಮಾಲೀಕಳನ್ನು ತಬ್ಬಿಕೊಂಡು ಪರಾರಿ!

ರೈಲು ಹತ್ತಿ ಸೆಲ್ಫಿ ತೆಗೆಯುವಷ್ಟರಲ್ಲಿಯೇ ಸಜೀವ ದಹನವಾದ ಬಾಲಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + nineteen =
Remember me
