ಬಾಗಲಕೋಟೆ:ಜಮಖಂಡಿ ನಗರದ ಲೋಕೋಪಯೋಗಿ ಇಲಾಖೆ ಆವರಣದಲ್ಲಿ 1050 ವರ್ಷಗಳಷ್ಟು ಹಳೆಯದಾದ ಹಾಗೂ ಕಲ್ಯಾಣಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆಯಾಗಿದೆ.
ಇತಿಹಾಸ ತಜ್ಞ ಹಾಗೂ ಸಂಶೋಧಕ ಡಾ. ಸಂಗಮೇಶ ಕಲ್ಯಾಣಿ ಅವರು ಶಾಸನವನ್ನು ಪತ್ತೆ ಹಚ್ಚಿದ್ದಾರೆ. ಹಳೆಗನ್ನಡದಲ್ಲಿರುವ ಶಾಸನದ ತುಂಡು ಮಾತ್ರ ಪತ್ತೆಯಾಗಿದೆ. ಕಲ್ಯಾಣಿ ಚಾಲುಕ್ಯರ ಸಾಮಂತ ಅರಸರಾದ ರಟ್ಟರ ಕಾಲದ ಶಾಸನ ಎಂದು ಊಹಿಸಲಾಗಿದೆ.
ಲೋಕೋಪಯೋಗಿ ಇಲಾಖೆ ಆವರಣದ ನಿರುಪಯುಕ್ತ ಸ್ಥಳದಲ್ಲಿ ಬಿದ್ದದ್ದ ಕಲ್ಲಿನ ಶಾಸನವು ಶಿವನ ದೇವಾಲಯಕ್ಕೆ ಸಂಬಂಧಿಸಿದ್ದು ಎಂಬುದು ಸ್ಪಷ್ಟವಾಗಿದೆ ಎಂದು ಸಂಶೋಧಕ ಸಂಗಮೇಶ ಕಲ್ಯಾಣಿ ಅವರು ತಿಳಿಸಿದ್ದಾರೆ.
ಕಚೇರಿಯ ಆವರಣಕ್ಕೆ ಭೇಟಿ ನೀಡಿದಾಗ ಸಂಶೋಧಕರಿಗೆ ಪತ್ತೆಯಾಗಿದ್ದು, 1050 ವರ್ಷಗಳಷ್ಟು ಹಳೆಯ ಕಾಲದ ಶಾಸನವನ್ನು ಕಂಡು ಸ್ಥಳೀಯರು ಆಶ್ಚರ್ಯಚಕಿತರಾದರು. ಇನ್ನೂ ಹೆಚ್ಚಿನ ಸಂಶೋಧನೆ ನಡೆಯಬೇಕು ಮತ್ತು ಇಂತಹ ಶಾಸನಗಳ ರಕ್ಷಣೆಯಾಗಬೇಕು ಎಂದು ಸಂಶೋಧಕ ಸಂಗಮೇಶ ಕಲ್ಯಾಣಿ ಹೇಳಿದರು.(ದಿಗ್ವಿಜಯ ನ್ಯೂಸ್​)
ವಿದ್ಯುತ್​ ಕಂಬಕ್ಕೆ ಬೈಕ್​ ಡಿಕ್ಕಿಯಾಗಿ ದೇಹ ಇಬ್ಭಾಗ: ಹುಟ್ಟುಹಬ್ಬದಂದೇ ಬಾಗಲಕೋಟೆ ಯುವಕ ದುರಂತ ಸಾವು, ಸ್ನೇಹಿತನೂ ಮೃತ್ಯು

ಫ್ರೆಂಡ್ಸ್​ ಜತೆ ನಡೆದು ಹೋಗುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು! ವಿಡಿಯೋ ನೋಡಿದ ನೆಟ್ಟಿಗರಲ್ಲಿ ಆತಂಕ

ಕುಷ್ಟಗಿಯ ರೈತ ಸಂಪರ್ಕ ಅಧಿಕಾರಿ ನಾಪತ್ತೆ: ಗಂಡನನ್ನು ಹುಡುಕಿಕೊಡಿ ಎಂದು ಠಾಣೆ ಮೆಟ್ಟಿಲೇರಿದ ಪತ್ನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
