ಬಾಗಲಕೋಟೆ:ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್​ ಜಗಲಾಸರ್ ಅವರು​ ಒಡಿಶಾ ಮೂಲದ ಪೊಲೀಸ್​ ವರಿಷ್ಠಾಧಿಕಾರಿ ಪದ್ಮಿನಿ ಅವರೊಂದಿಗೆ ಸಪ್ತಪದಿ ತುಳಿಯುವ ಮೂಲಕ ಸರ್ಕಾರಿ ಸೇವೆಗೆ ಒಟ್ಟಿಗೆ ಹೆಜ್ಜೆ ಇಟ್ಟಿದ್ದ ಐಪಿಎಸ್​ ಜೋಡಿ ಇದೀಗ ವೈವಾಹಿಕ ಜೀವನಕ್ಕೂ ಜತೆಯಾಗಿಯೇ ಕಾಲಿಟ್ಟಿದ್ದಾರೆ
ಲೋಕೇಶ್​ ಮೂಲತಃ ಕುಂದಾನಗರಿಯವರು. ಪದ್ಮಿನಿ ಕಳಿಂಗ ನಾಡಿನ(ಓಡಿಸ್ಸಾ) ಕುವರಿಯಾಗಿದ್ದು, ಬರ್ಗಾರ್ ಜಿಲ್ಲಾ ಎಸ್ಪಿ ಆಗಿದ್ದಾರೆ. ಲೋಕೇಶ್​ ಹಾಗೂ ಪದ್ಮಿನಿ ಇಬ್ಬರೂ 2015ರ ಐಪಿಎಸ್ ಬ್ಯಾಚ್ ಮೇಟ್. ಲೋಕೇಶ್​ ಕರ್ನಾಟಕ ಕೇಡರ್​ಗೆ ಆಯ್ಕೆಯಾದರೆ, ಪದ್ಮಿನಿ ಓಡಿಸಾ ಕೇಡರ್​ಗೆ ಆಯ್ಕೆಯಾದರು. ಆದರೆ, ಆಗಲೇ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಇದೀಗ ಐಪಿಎಸ್​ ಅಧಿಕಾರಿಗಳು ಪ್ರೀತಿಯ ಬಂಧದಿಂದ ಮದುವೆಯ ಬಂಧಕ್ಕೆ ಒಳಗಾಗಿದ್ದಾರೆ.
ಇಂದು ಓಡಿಸ್ಸಾದ ಭುವನೇಶ್ವರಿಯಲ್ಲಿ ಐಪಿಎಸ್ ಜೋಡಿ ಸಪ್ತಪದಿ ತುಳಿದಿದೆ. ಫೆ. 20ರಂದು ಬೆಂಗಳೂರಿನ ಜಯನಗರದ ಪೂರ್ಣಿಮಾ ಕನ್ವೆನ್ಷನ್ ಸೆಂಟರ್​ನಲ್ಲಿ ರಿಸೆಪ್ಷನ್ ನಡೆಯಲಿದೆ.(ದಿಗ್ವಿಜಯ ನ್ಯೂಸ್​)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:15 + 1 =
Remember me
