ಬಾಗಲಕೋಟೆ:ನಾಗರಹಾವು ಹಿಡಿಯುವ ವೇಳೆ ಹಾವು ಕಚ್ಚಿ ಸ್ನೇಕ್​ ಕ್ಯಾಚರ್​ ಡೇನಿಯಲ್​ ನ್ಯೂಟನ್​ (43) ಮೃತಪಟ್ಟಿರುವ ಘಟನೆ ಬಾಗಲಕೋಟೆ ತಾಲ್ಲೂಕಿನ ಸೀಗಿಕೇರಿಯಲ್ಲಿ ನಡೆದಿದೆ.

ಸೀಗಿಕೇರಿ ಗ್ರಾಮದ ಮನೆಯೊಂದರಲ್ಲಿ ಹಾವು ಹಿಡಿಯುವ ವೇಳೆ ದುರಂತ ಘಟನೆ ನಡೆದಿದೆ. ಡೇನಿಯಲ್​ ಕೇವಲ ಒಂದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಈಗಾಗಲೇ ದೇಹದಾನ ಮಾಡಿರುವ ಡೇನಿಯಲ್, ಇದುವರೆಗೂ ಒಟ್ಟು 3279 ಹಾವನ್ನು ರಕ್ಷಣೆ ಮಾಡಿದ್ದಾರೆ. ಅದರಲ್ಲಿ 1036 ನಾಗರಹಾವು ಸೇರಿಕೊಂಡಿದೆ.
ಇದನ್ನೂ ಓದಿ:ಮಕ್ಕಳು ಮದುವೆಗೆ ಒಪ್ಪದಿದ್ದರೆ ಅದರ ಹಿಂದಿರುವ ಕಾರಣಗಳು ಇದೂ ಇರಬಹುದಲ್ಲವೆ?

ಒಟ್ಟು 75 ಬಾರಿ ಹಾವಿನಿಂದ‌ ಕಚ್ಚಿಸಿಕೊಂಡು ಬಚಾವ್​ ಆಗಿದ್ದರು. ಕಳೆದ ಜೂನ್ ತಿಂಗಳಲ್ಲಿ ನಾಗರ ಹಾವಿನ ಮರಿ ಕಚ್ಚಿದ ಪರಿಣಾಮ ಡೇನಿಯಲ್ ಪರಿಸ್ಥಿತಿ ಗಂಭೀರವಾಗಿತ್ತು. ಸಾವು ಬದುಕಿನ ಮಧ್ಯೆ ಹೋರಾಡಿ ಬದುಕುಳಿದಿದ್ದರು. ಆದರೂ ಹಾವು ಹಿಡಿಯುವ ತನ್ನ ಕಾರ್ಯವನ್ನು ಬಿಡದೆ ಮುಂದುವರೆಸಿದ್ದರು.
ಇದನ್ನೂ ಓದಿ:ನದಿ ದಡದಲ್ಲಿ ಚಪ್ಪಲಿ ಇಟ್ಟು ಹೆಂಡತಿ ಕೊಟ್ಟ ಶಾಕ್​ಗೆ ಗಂಡನ ಪ್ರಾಣವೇ ಹೋಯ್ತು..!

ಅಂದಹಾಗೆ ಡೇನಿಯಲ್​ ಬಾಗಲಕೋಟೆ ನಗರದ ಜಯನಗರ ನಿವಾಸಿ. ಹಾವು ಹಿಡಿಯುವ ಮೂಲಕ ಬಾಗಲಕೋಟೆ ಹಾಗೂ ಸುತ್ತ ಮುತ್ತ ಹಳ್ಳಿಗಳಲ್ಲಿ ಸ್ನೇಕ್ ಡ್ಯಾನಿ ಎಂದೇ ಹೆಸರು ಗಳಿಸಿದ್ದರು.(ದಿಗ್ವಿಜಯ ನ್ಯೂಸ್​)
ಇದನ್ನೂ ಓದಿ:ಸಹೋದ್ಯೋಗಿಗಳ ಸ್ನಾನದ ದೃಶ್ಯವನ್ನು ಆ ನರ್ಸ್​ ಚಿತ್ರೀಕರಿಸಿ ರವಾನಿಸುತ್ತಿದ್ದುದೇಕೆ?
ಗೋಡೆ ಕುಸಿದು ಗೃಹಿಣಿ ಸಾವು ಪ್ರಕರಣಕ್ಕೆ ಟ್ವಿಸ್ಟ್​: ಅನಾಮಧೇಯ ಕರೆಯಿಂದ ಗಂಡನ ಕರಾಳ ಮುಖ ಬಯಲು!

ಬಾವನ ಮದುವೆಗೆಂದು ಅತ್ತೆ ಮನೆಗೆ ಬಂದವನು ಮಸಣ ಸೇರಿದ! ಸರ್ಕಾರಿ ಶಾಲೆಯ ಆವರಣದಲ್ಲಿ ಆತ್ಮಹತ್ಯೆ

ಅಪರಾತ್ರಿಯಲ್ಲಿ ಬೆತ್ತಲಾಗಿ ವಿಡಿಯೋ ಕರೆಮಾಡ್ತಾರೆ ಯುವತಿಯರು- ಎಚ್ಚರ ತಪ್ಪಿದ್ರೆ ಆಪತ್ತು ಗ್ಯಾರೆಂಟಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 2 =
Remember me
