ಬಾಗಲಕೋಟೆ:ಎಸಿಬಿ ದಾಳಿಯಿಂದ ಬಾಗಲಕೋಟೆ ಕೃಷ್ಣಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಮುಖವಾಡ ಕಳಚಿಬಿದ್ದಿದೆ. ಪ್ರಕರಣವೊಂದರ ಮೇಲೆ ನಡೆದ ಎಸಿಬಿ ದಾಳಿ ವೇಳೆ 4 ಕೋಟಿ 61 ಲಕ್ಷ ಮೌಲ್ಯ ಪರಿಹಾರದ 50 ಚೆಕ್ ಪತ್ತೆಯಾಗಿವೆ.
70 ಜನ ಕೃಷ್ಣಾ ಮೇಲ್ದಂಡೆ ಯೋಜನೆ ಫಲಾನುಭವಿಗಳಿಗೆ ಆರ್​ಟಿಜಿಎಸ್ ಮಾಡಬೇಕಿದ್ದ ಪರಿಹಾರ ಚೆಕ್​ಗಳೆಂದು ತಿಳಿದುಬಂದಿದೆ. ಜನವರಿ 25ರಂದು ಎಸಿಬಿಯಿಂದ ಯುಕೆಪಿ (ಕೃಷ್ಣಾ ಮೇಲ್ದಂಡೆ ಯೋಜನೆ)ಕಚೇರಿ ಮೇಲೆ ನಡೆದಿತ್ತು. ಭೂಪರಿಹಾರ ಹಣ ಜಮಾ ಮಾಡಲು ಯುಕೆಪಿಯ ಪುನರ್ವಸತಿ ಪುನರ್​ರ್ನಿರ್ಮಾಣ ಇಲಾಖೆ ಕಚೇರಿಯ ಎಫ್​ಡಿಎ ಸುನಂದಾ ತೆಗ್ಗಿ, ಕಮತಗಿ ಪಟ್ಟಣದ ಸಂಗಪ್ಪ ಹಿರಾಳ ಎಂಬುವರಿಂದ 3 ಲಕ್ಷ 43 ಸಾವಿರ ಭೂಪರಿಹಾರ ಹಣ ಜಮಾ ಮಾಡಲು 4 ಸಾವಿರ ಲಂಚ ಕೇಳಿದ್ದರು.
ಯುಕೆಪಿ ಕೆನಾಲ್ ನಿರ್ಮಾಣಕ್ಕಾಗಿ ಸಂಗಪ್ಪನಿಗೆ ಭೂಪರಿಹಾರ ಜಮಾ ಮಾಡಲು ಲಂಚ ಕೇಳಿದ್ದರು. ಲಂಚ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಸಂಶಯ ಬಂದ ಹಿನ್ನೆಲೆಯಲ್ಲಿ ಭೂಪರಿಹಾರಕ್ಕೆ ಸಂಬಂಧಿಸಿದಂತೆ ಎಸಿಬಿ ತಂಡ ತನಿಖೆಯನ್ನು ಮುಂದುವರೆಸಿತ್ತು. ತನಿಖೆ ವೇಳೆ 70 ಜನ ರೈತರಿಗೆ ಕೊಡಬೇಕಿದ್ದ 4 ಕೋಟಿ 61 ಲಕ್ಷ, 46 ಸಾವಿರದ 310 ರೂಪಾಯಿ ಮೌಲ್ಯದ 50ಕ್ಕೂ ಅಧಿಕ ಚೆಕ್​ಗಳು ಪತ್ತೆಯಾಗಿವೆ. ಇವೆಲ್ಲವೂ ಸಹ ಬಾಕಿ ಇರುವ ಚೆಕ್​ಗಳಾಗಿವೆ.
ಇದನ್ನೂ ಓದಿರಿ:Web Exclusive | ಕಾಲ ಬದಲಾದರೂ ಕತ್ತೆಯ ಕಾಲು ಹಿಡಿಯೋದು ತಪ್ಪಲಿಲ್ಲ; ಈ ಊರಿನ ಜನ ರಸ್ತೆ ಬಿಟ್ಟು ಬೇರೇನೂ ‘ವರ’ ಕೇಳುವುದಿಲ್ಲ!
ಎಲ್ಲರಿಂದಲೂ ಲಂಚ ಪಡೆದು ವಿತರಿಸುವ ಉದ್ದೇಶದಿಂದ ಚೆಕ್​ಗಳನ್ನು ತಡೆಯಿಡಿಲಾಗಿದೆ ಎಂಬ ಸಂಶಯ ಬಂದಿದೆ. ಇದೀಗ ಎಸಿಬಿ ಅಧಿಕಾರಿಗಳು, ಯುಕೆಪಿ ಲೆಕ್ಕಾಧಿಕಾರಿಗಳಿಗೆ ಭೂಪರಿಹಾರ ಜಮಾ ಮಾಡಲು ಸೂಚನೆ ನೀಡಿದ್ದು, ಆ ಬಳಿಕ ರೈತರ ಖಾತೆಗೆ ಪರಿಹಾರದ ಹಣ ಜಮಾ ಆಗಿದೆ.
ಎಸಿಬಿ ಉತ್ತರ ವಲಯ ಎಸ್ಪಿ ಬಿ.ಎಸ್​. ನೇಮಗೌಡ ಮಾರ್ಗದರ್ಶನದಲ್ಲಿ ಬಾಗಲಕೋಟೆ ಎಸಿಬಿ ಡಿವೈಎಸ್ ಎಂ.ಕೆ.ಗಂಗಲ್ ನೇತೃತ್ವದಲ್ಲಿ ದಾಳಿ ನಡೆದಿತ್ತು. ಕೇವಲ ದಾಳಿ ನಡೆಸದೇ ಎಸಿಬಿ ತಂಡ ಪರಿಹಾರವನ್ನೂ ಕೊಡಿಸಿದೆ. ಮತ್ತೆ ಲಂಚಕ್ಕೆ ಬೇಡಿಕೆ ಇಟ್ಟರೆ ಎಸಿಬಿ ಕಚೇರಿಗೆ ತಿಳಿಸುವಂತೆ ಸಂತ್ರಸ್ತರಿಗೆ ಧೈರ್ಯ ತುಂಬಿದ್ದಾರೆ.(ದಿಗ್ವಿಜಯ ನ್ಯೂಸ್​)
ಇವರೇನು ಮನುಷ್ಯರಾ? ಕೊರೆಯೋ ಚಳಿಯಲ್ಲೂ ವಯಸ್ಸಾದವರನ್ನು ನಗರದಿಂದ ಹೊರದಬ್ಬಲು ಯತ್ನ!

ಗಿನ್ನೆಸ್ ದಾಖಲೆಯ ಹಾದಿಯಲ್ಲಿ ಹುಬ್ಬಳ್ಳಿಯ ಬ್ಯೂಟಿಷಿಯನ್ ಶೈಲಜಾ ಬಗಾಡೆ

ಒಂದೇ ದಿನದಲ್ಲಿ ಹಣ ದುಪ್ಪಟ್ಟು ಮಾಡಲು ಹೋಗಿ ಜೈಲು ಸೇರಿದ ಬ್ಯಾಂಕ್ ಮ್ಯಾನೇಜರ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + eight =
Remember me
