ಬಾಗಲಕೋಟೆ:ಬಾದಾಮಿ ತಾಲೂಕಿನ ಬೇಲೂರು- ಢಾಣಕಶಿರೂರ ಮಾರ್ಗಮಧ್ಯದ ಹೊಲವೊಂದರ ಪುಂಡಿ ಗಿಡದಲ್ಲಿ ಪ್ರಸಿದ್ಧ ಬೊಮ್ಮಸಾಗರದ ದುರ್ಗಾದೇವಿ ನೆಲೆಸಿದ್ದಾಳೆ ಎನ್ನುವ ಸುದ್ದಿ ಹರಡಿದ್ದು, ಜನ ಗುಂಪು ಗುಂಪಾಗಿ ಬಂದು ಪೂಜೆ ಸಲ್ಲಿಸಿದ್ದಾರೆ.
ಅಂಕು ಡೊಂಕಾಗಿ ಇರುವ ಪುಂಡಿ ಗಿಡ ಸರ್ಪದ ರೂಪವಾಗಿದೆ. ಮೇಲ್ಭಾಗದಲ್ಲಿ ದುರ್ಗಾದೇವಿ ನೆಲೆಸಿದ್ದಾಳೆಂದು ಜನರು ಹೇಳುತ್ತಿದ್ದಾರೆ. ಈ ಸುದ್ದಿ ಬಾಯಿಯಿಂದ ಬಾಯಿಗೆ ಹರಡಿ, ಇದೀಗ ಹತ್ತಾರು ಗ್ರಾಮಗಳಿಂದ ಜನರು ಗುಂಪು ಗುಂಪಾಗಿ ಆಗಮಿಸಲು ಆರಂಭಿಸಿದ್ದಾರೆ. ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಶ್ರದ್ಧಾಭಕ್ತಿಯಿಂದ ಪುಂಡಿಗಿಡಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಗಿಡದ ಬಳಿ ಕಾಣಿಕೆ ಇಟ್ಟು ಹೋಗುತ್ತಿದ್ದಾರೆ.
ಸುದ್ದಿ ಹಬ್ಬಿದ್ದೇಗೆ?:ಇತ್ತೀಚೆಗೆ ಮಹಿಳೆಯೊಬ್ಬರ ಮೈಯಲ್ಲಿ ದೇವಿ ಬಂದಿದ್ದಳಂತೆ. ಆಗ, ನಾನು ಬೊಮ್ಮಸಾಗರದ ದುರ್ಗಾದೇವಿ. ಜಮೀನಿನ ಪುಂಡಿಗಿಡದಲ್ಲಿ ನೆಲೆಸಿದ್ದೇನೆ. ನನ್ನ ಪೂಜಿಸಿ ಎಂದಿದ್ದರಂತೆ. ಇದೀಗ ಗಿಡಕ್ಕೆ ಹೂಮಾಲೆ ಹಾಕಿ, ಕುಂಕುಮ, ಭಂಡಾರ ಹಚ್ಚಿದ್ದಾರೆ.
ಗಿಡದ ಬುಡದಲ್ಲಿ ಕಲ್ಲು ಇಟ್ಟಿದ್ದು, ಅದಕ್ಕೆ ಪೂಜೆ ಆರಂಭವಾಗಿದೆ. ಮಣ್ಣಿನ ಗಡಿಗೆಯಲ್ಲಿ ನೀರು ತಂದು ಜೋಗಮ್ಮ ಇದ್ದವರು ಪೂಜೆ ಮಾಡುತ್ತಿದ್ದಾರೆ. ಭಕ್ತರ ಸಂಖ್ಯೆಯೂ ಹೆಚ್ಚುತ್ತಿದ್ದು, ಪುಂಡಿ ಗಿಡಕ್ಕೆ ಚಪ್ಪರ ಹಾಕಲು ಮುಂದಾಗಿದ್ದಾರೆ. ಸದ್ಯಕ್ಕೆ ಮೈಯಲ್ಲಿ ದೇವಿ ಬಂದು ಹೇಳಿಕೆ ನೀಡಿದ್ದಾರೆ ಎನ್ನಲಾದ ಮಹಿಳೆ ಯಾರು? ಜಮೀನು ಯಾರದ್ದು ಎನ್ನುವುದು ಸ್ಪಷ್ಟವಾಗಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + seven =
Remember me
