ಬಾಗಲಕೋಟೆ:ಮಹಾಮಾರಿ ಕರೊನಾ ಸಾಂಕ್ರಾಮಿಕ ಕಾಲದಲ್ಲಿ ಊರಿಗೆ ಬಂದು ಕೃಷಿಯಲ್ಲಿ ತೊಡಗಿದ್ದ ಯುವಕರಿಗೆ ಬರಗಾಲದ ಬರಸಿಡಿಲು ಬಡಿದೆ. ಸರಿಯಾದ ಮಳೆ ಇಲ್ಲದ ಕಾರಣ ಒಕ್ಕಲುತನ ಮಾಡಲಾಗದೇ ಯುವಕರು ಕಂಗಾಲಾಗಿದ್ದಾರೆ.
ಉದ್ಯೋಗ ಅರಸಿ ನಗರಗಳಿಗೆ ಹೋಗಿದ್ದ ಅದೆಷ್ಟೋ ಜನರು ಕರೊನಾ ಸಂಕಷ್ಟದಲ್ಲಿ ಊರಿಗೆ ವಾಪಸ್​ ಬಂದು ನೆಲೆಸಿದ್ದರು. ಕುಟುಂಬ ಸದಸ್ಯರ ಜೊತೆ ನಿಂತು ಒಕ್ಕಲುತನ ಮಾಡಲು ಮುಂದಾದರು. ಬಾಗಲಕೋಟೆ ಜಿಲ್ಲೆಯಲ್ಲೂ ಸಾವಿರಾರು ಜನರು ತಮ್ಮ ಊರುಗಳಿಗೆ ವಾಪಸ್​ ಬಂದಿದ್ದರು. ಇದೀಗ ಮಳೆ ಆಶ್ರಯ ಜಮೀನುಗಳಿಗೆ ನೀರಿಲ್ಲದೆ ಸಂಕಷ್ಟ ಸ್ಥಿತಿ ಎದುರಿಸುತ್ತಿದ್ದಾರೆ.
ಕೊಳವೆಬಾವಿಯಲ್ಲದರೂ ಬೆಳೆ ಬೆಳೆಯೋಣ ಅಂದುಕೊಂಡರೆ ವಿದ್ಯುತ್ ಕಣ್ಣಾಮುಚ್ಚಾಲೆ ಆಟದಿಂದ ಅದೂ ಸಾಧ್ಯವಾಗುತ್ತಿಲ್ಲ. ಇದೀಗ ಕೃಷಿ ಚಟುವಟಿಕೆ ಇಲ್ಲದೇ ಯುವಕರು ಚಿಂತೆಯಲ್ಲಿ ಮುಳುಗಿದ್ದಾರೆ. ಬಾಗಲಕೋಟೆ, ಬಾದಾಮಿ, ಗುಳೇದಗುಡ್ಡ, ಹುನಗುಂದ, ಇಳಕಲ್ ತಾಲೂಕಿನ ಅನೇಕ ಯುವಕರು ಮತ್ತೆ ಉದ್ಯೋಗ ಅರಸಿ ಗುಳೆ ಹೋಗಿದ್ದಾರೆ. ಕೆಲ ಗ್ರಾಮಗಳಲ್ಲಿ ಊರಿಗೆ ಊರೇ ಖಾಲಿ ಆಗಿವೆ. ಮಂಗಳೂರು, ಉಡುಪಿ ಹಾಗೂ ಗೋವಾಕ್ಕೆ ಗುಳೆ ಹೋಗಿದ್ದಾರೆ.
ಇದನ್ನೂ ಓದಿ:ದೇವಭೂಮಿಯಲ್ಲಿ ಅಭಿವೃದ್ಧಿ ಮಂತ್ರ, ಆದಿಕೈಲಾಸದಲ್ಲಿ ಧ್ಯಾನ: 4,200 ಕೋಟಿ ರೂ. ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಚಾಲನೆ
ಸರ್ಕಾರ ಈ ಕೂಡಲೇ ನಮ್ಮ ನೆರವಿಗೆ ಬರಬೇಕುಕೆಲ ಯುವಕರು ಗುಳೆ ಹೋಗಲು ಆಗದೆ, ಊರಲ್ಲಿ ಕೃಷಿ ಕೆಲಸವೂ ಇಲ್ಲದೆ ಕಂಗಾಲಾಗಿದ್ದಾರೆ. ಕರೊನಾ ಕಾರಣ ಉದ್ಯೋಗ, ಶಿಕ್ಷಣ ಬಿಟ್ಟು ಬಂದೆವು. ಊರಲ್ಲಿ ಐದು, ಹತ್ತು, ಹದಿನೈದು ಎಕರೆ ಜಮೀನು ಇದ್ದರೂ ಮಳೆ, ವಿದ್ಯುತ್ ಇಲ್ಲದೇ ಕೃಷಿ ಮಾಡಲು ಆಗುತ್ತಿಲ್ಲ. ಪ್ರಕೃತಿ ನಮ್ಮ ಕೈಯಲ್ಲಿಲ್ಲ ನಿಜ ಆದರೆ, ಸರ್ಕಾರ ನಮ್ಮ ಕೈಯಲ್ಲಿದೆ. ಹೀಗಾಗಿ ಸರ್ಕಾರ ಈ ಕೂಡಲೇ ನಮ್ಮ ನೆರವಿಗೆ ಬರಬೇಕು ಮತ್ತು ಬೆಳೆಹಾನಿ ಪರಿಹಾರ ಕೊಡಬೇಕು. ಊರಲ್ಲೆ ಇದ್ದು ಕೃಷಿ ಮಾಡಲು ನೆರವು ನೀಡಬೇಕು ಎಂದು ಕರೊನಾ ವೇಳೆ ಊರಿಗೆ ವಾಪಸ್ಸಾಗಿದ್ದ ಬೆನಕಟ್ಟಿ ಗ್ರಾಮದ ಯುವ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಅಡಿ ಉದ್ಯೋಗ ಕೊಡಲಾಗುವುದುಈ ಬಗ್ಗೆ ಮಾತನಾಡಿರುವ ಬಾಗಲಕೋಟೆ ಜಿ.ಪಂ ಸಿಇಒ ಶಶಿಧರ ಕುರೇರ, ನರೇಗಾ ಅಡಿ ಉದ್ಯೋಗ ಕೊಡಲಾಗುವುದು. ಪ್ರಸಕ್ತ ವರ್ಷ ಜಿಲ್ಲೆಗೆ 50 ಲಕ್ಷ ಮಾನವ ದಿನಗಳ ಗುರಿ ಇದೆ. ಏಪ್ರಿಲ್​ನಿಂದ ಸೆಪ್ಟಂಬರ್​ವರೆಗೂ 37 ಲಕ್ಷ ಮಾನವ ದಿನಗಳನ್ನು ಕೊಡಲಾಗಿದೆ. ಈಗ ಬರ ಘೋಷಣೆ ಆಗಿದ್ದು, ಹೆಚ್ಚುವರಿ 50 ದಿನ ಕೆಲಸ ಕೊಡಬೇಕು. ಇದಕ್ಕಾಗಿ ಹೆಚ್ಚುವರಿ 37 ಲಕ್ಷ ಮಾನವ ದಿನ ನಿಗದಿ ಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಸಿಇಒ ಹೇಳಿದ್ದಾರೆ.
ಪ್ರಚೋದನಾಕಾರಿ ಭಾಷಣ ಆರೋಪ: ಕೆ.ಎಸ್​. ಈಶ್ವರಪ್ಪ ವಿರುದ್ಧ ಸುಮೋಟೋ ಪ್ರಕರಣ ದಾಖಲು

ಹ್ಯಾಟ್ರಿಕ್​ ಗೆಲುವಿನ ಹಂಬಲದಲ್ಲಿ ಕಿವೀಸ್​; ಇಂದು ಬಾಂಗ್ಲಾ ಎದುರು ಕ್ಯಾಪ್ಟನ್​ ಕೇನ್​ ಬಲ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen − sixteen =
Remember me
