ಬಾಗಲಕೋಟೆ:ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಹುಟ್ಟು ಹಬ್ಬದ ದಿನವೇ ಯುವಕನೊಬ್ಬ ದುರಂತ ಸಾವಿಗೀಡಾಗಿರುವ ಘಟನೆ ಗದ್ದನಕೇರಿ ತಾಂಡಾ ಸಮೀಪ ನಡೆದಿದೆ. ಅಪಘಾತದಲ್ಲಿ ಸ್ನೇಹಿತನೂ ಮೃತಪಟ್ಟಿದ್ದಾನೆ.
ನವನಗರದ ಸಂಗಮೇಶ (21) ಹಾಗೂ ಶಿರಗುಪ್ಪಿ ತಾಂಡಾದ ಕಿರಣ (21) ಮೃತ ದುರ್ದೈವಿಗಳು. ನಿನ್ನೆ (ಡಿ.6) ಸಂಗಮೇಶ್​ ಹುಟ್ಟುಹಬ್ಬವಿತ್ತು. ಹೀಗಾಗಿ ಹುಟ್ಟುಹಬ್ಬ ಆಚರಿಸಿಕೊಂಡು ಸ್ನೇಹಿತ ಕಿರಣ್​ ಜೊತೆ ಬೈಕ್​ನಲ್ಲಿ ಬರುವಾಗ ಭೀಕರ ಅಪಘಾತ ಸಂಭವಿಸಿದೆ.
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರಲ್ಲಿ ಒಬ್ಬನ ದೇಹ ತುಂಡರಿಸಿದೆ. ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.(ದಿಗ್ವಿಜಯ ನ್ಯೂಸ್​)
ಹೋದ ಸಂದರ್ಶನದಲ್ಲಿ ಏಟು ತಿಂದಿದ್ದ ಕೆನ್ನೆಗೆ ಈ ಬಾರಿ ಸಿಹಿ ಮುತ್ತು! ಆಶು ರೆಡ್ಡಿ ಪಾದಕ್ಕೆ ಆರ್​ಜಿವಿ ಕಿಸ್​

ಫ್ರೆಂಡ್ಸ್​ ಜತೆ ನಡೆದು ಹೋಗುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು! ವಿಡಿಯೋ ನೋಡಿದ ನೆಟ್ಟಿಗರಲ್ಲಿ ಆತಂಕ

ಬೆಳಗಾವಿ ಹೆದ್ದಾರಿಯಲ್ಲಿ ಕನ್ನಡ ಕಹಳೆ ಮಹಾಗೆ ಠಕ್ಕರ್; ಕಾರ್ಯಕರ್ತರ ತಡೆದ ಖಾಕಿ ಪಡೆ | ಮಹಾರಾಷ್ಟ್ರ ವಾಹನಗಳಿಗೆ ಕಲ್ಲು ತೂರಿ, ಮಸಿ ಬಳಿದು ಆಕ್ರೋಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
