ಬಾಗಲಕೋಟೆ:ವ್ಯಕ್ತಿಯಲ್ಲಿನ ನಕರಾತ್ಮಕ ಮನೋಭಾವವೂ ಒಂದು ಸಣ್ಣ ಗಾಯವವನ್ನು ಕೂಡ ದೊಡ್ಡ ಸಮಸ್ಯೆಯಾಗಿ ಕಾಡುವಂತೆ ಮಾಡುತ್ತದೆ. ಆದರೆ, ಧನಾತ್ಮಕ ಮನೋಭಾವ ಇದ್ದಲ್ಲಿ ಎಂಥದ್ದೇ ಕಠಿಣ ಸಮಸ್ಯೆ ಬಂದರೂ ಅದನ್ನು ನಗು ಮುಖದಿಂದಲೇ ಎದುರಿಸಿ ಜಯಸಿ ಬರಬಹುದು. ಏನೇ ಆಗಲು ಪಾಸಿಟಿವ್​ ಮನಸ್ಸಿನಿಂದಲೇ ಎದುರಿಸಿ ಎಂಬ ಮಾತಿಗೆ ಪುಷ್ಠಿ ನೀಡುವಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಹೌದು, ಆಸ್ಪತ್ರೆ ಐಸಿಯುನಲ್ಲಿ ಬಾಲಕನೊಬ್ಬ ಬೆಡ್​ ಮಲಗಿಕೊಂಡೇ ಡಾನ್ಸ್ ಮಾಡುತ್ತಿರುವ ವಿಡಿಯೋ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಐಸಿಯು ಅಂದ್ರೇನೆ ಅನೇಕರು ಕನಸಿನಲ್ಲೂ ಬೆಚ್ಚಿಬೀಳುತ್ತಾರೆ. ಆದರೆ, ಯುವಕ ಎಮರ್ಜೆನ್ಸಿ ಬೆಡ್​ ಮೇಲೆ ಮಲಗಿ ಡಾನ್ಸ್​ ಮಾಡುತ್ತಿರುವುದು ಎಲ್ಲರ ಗಮನ ಸೆಳೆದಿದೆ.
ಇದನ್ನೂ ಓದಿ:ಇ-ಸರ್ವೇ ಕೆಲಸದಿಂದ ಕೈಬಿಡಲು ಆಗ್ರಹ -ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ 27ಕ್ಕೆ
ನಾ ಡ್ರೈವರ್ ನಿನ್ನ ಲವರ್ ಎಂಬ ಉತ್ತರ ಕರ್ನಾಟಕ ಹಾಡಿಗೆ ಬಾಲಕ ಡಾನ್ಸ್​ ಮಾಡಿದ್ದಾನೆ. ಐಸಿಯು ಬೆಡ್​ ಮೇಲೆ ಮಲಗಿಕೊಂಡೇ ಕೈನಿಂದ ಆ್ಯಕ್ಸನ್​ ಮಾಡುತ್ತಾ ಹಾಡಿಗೆ ಡಾನ್ಸ್ ಮಾಡಿದ್ದು, ಈ ಘಟನೆ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾಗಿದೆ. ಬಾಲಕ ಯಾರು? ಯಾವ ಆಸ್ಪತ್ರೆ ಎಂಬ ಮಾಹಿತಿ ತಿಳಿದುಬಂದಿಲ್ಲ. ಆದರೆ, ಬಾಲಕನ ಐಸಿಯು ಬೆಡ್ ಮೇಲಿನ ಡಾನ್ಸ್ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್​ ಆಗಿದ್ದು, ಆತನ ಪಾಸಿಟಿವ್​ ಮನೋಭಾವಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.(ದಿಗ್ವಿಜಯ ನ್ಯೂಸ್​)
ವಾಗ್ನರ್​ ಪಡೆ ಬಂಡಾಯ ಶಮನ: ರಷ್ಯಾದಲ್ಲಿ ತಗ್ಗಿದ ಆಂತರಿಕ ಯುದ್ಧದ ಭೀತಿ, ಪ್ರಿಗೊಜಿನ್​ ಹಿಂದೆ ಸರಿದಿದ್ದೇಕೆ?

ತುರ್ತು ಪರಿಸ್ಥಿತಿ ಮತ್ತು ಮತದಾರನ ಮೌನಕ್ರಾಂತಿ

ದಾಹ ನೀಗದ ಮುಂಗಾರು: ರಾಜ್ಯದಲ್ಲಿ ಕುಡಿವ ನೀರಿಗೆ ಹಾಹಾಕಾರ; 1500 ಹಳ್ಳಿಗಳಲ್ಲಿ ಸಮಸ್ಯೆ ತೀವ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + ten =
Remember me
